News Karnataka Kannada
Wednesday, April 17 2024
Cricket
ಕರ್ನಾಟಕ

ಜೋಗ ನೋಡಲು ಬರುವ ಪ್ರವಾಸಿಗರಿಗೆ ಇನ್ಮುಂದೆ ಕಡಿವಾಣ

Photo Credit :

ಜೋಗ ನೋಡಲು ಬರುವ ಪ್ರವಾಸಿಗರಿಗೆ ಇನ್ಮುಂದೆ ಕಡಿವಾಣ

ಶಿವಮೊಗ್ಗ: ಕಳೆದ ಭಾನುವಾರ ಜೋಗದಲ್ಲಿ ಸರತಿ ಸಾಲಿನಲ್ಲಿ ನಿಂತು ಟಿಕೇಟ್ ಪಡೆದು ಪ್ರವಾಸಿಗರು ಜೋಗ ವೀಕ್ಷಿಸಿದ್ದರು, ಇದರಿಂದ ಉಂಟಾದ ಟ್ರಾಫಿಕ್ ಜಾಮ್ ನಿಂದ ಪ್ರವಾಸಿಗರಿಗೆ ತೊಂದರೆ ಉಂಟಾಗಿತ್ತು.

ಈ ಅವ್ಯವಸ್ಥೆಯ ಕುರಿತು ಇಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಹಾಗೂ ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು ಸಾಗರದ ಎಸಿ ನಾಗರಾಜ್, ಪ್ರವಾಸೋಧ್ಯಮ ಇಲಾಖೆಯ ರಾಮಕೃಷ್ಣ ಸೇರಿದಂತೆ ಅನೇಕ ಅಧಿಕಾರಿಗಳು ಜೋಗಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಜೊತೆಗೆ ಹಲವು ತೀರ್ಮಾನಗಳನ್ನ ತೆಗೆದುಕೊಳ್ಳಲಾಯಿತು.

ಜೋಗದಲ್ಲಿ ಭೇಟಿ ನೀಡುವ ಪ್ರವಾಸಿಗರಿಗೆ ವೀಕ್ಷಣಾ ಸ್ಥಳದಲ್ಲಿ ನಾಲ್ಕು ಗಂಟೆ ಮಾತ್ರ ಅವಕಾಶವಿದ್ದು ನಾಲ್ಕು ಗಂಟೆಯ ನಂತರ ಉಳಿದುಕೊಂಡರೆ ಆ ಪ್ರವಾಸಿಗರಿಗೆ ದಂಡಬೀಳಲಿದೆ. ಮಾಸ್ಕ್ ಧರಿಸಿಯೇ ಜೋಗಕ್ಕೇ ಭೇಟಿ ನೀಡಬೇಕಿದ್ದು ಮಾಸ್ಕ್ ಧರಿಸದೆ ಇದ್ದರೆ 200 ರೂ. ದಂಡ ಬೀಳಲಿದೆ.

ಸಾರ್ವಜನಿಕರು ಮಾಸ್ಕ್ ಧರಿಸಿ ಜೋಗವನ್ನ ವೀಕ್ಷಿಸದಿದ್ದರೆ ಸ್ಥಳದಲ್ಲಿಯೇ ಇರುವ ಪಟ್ಟಣ ಪಂಚಾಯಿತಿ ಮತ್ತು ಪ್ರವಾಸೋದ್ಯಮ ಇಲಾಖೆಯ ಜೆಎಂಎ ಸಿಬ್ಬಂದಿಗಳು ದಂಡ ಹಾಕಲು ಅಧಿಕಾರ ನೀಡಲಾಗಿದೆ.

ಇನ್ನುಮುಂದೆ ಜೋಗ್ ನಲ್ಲಿ ಅನೌನ್ಸ್ ಮೆಂಟ್ ಇರಲಿದೆ. ಕೋವಿಡ್-19 ಕುರಿತು ಎಚ್ಚರ, ಪ್ರವಾಸಿಗರು ಒಂದೆಡೆ ನಿಂತು ಅಧಿಕ ಸಮಯದವರೆಗೆ ಫೊಟೊ ತೆಗೆದುಕೊಳ್ಳವವರಿಗೆ ಎಚ್ಚರಿಕೆ ನೀಡಿ ಇನ್ನಬ್ಬರಿಗೆ ಅವಕಾಶ ನೀಡುವಂತೆ ಈ ಅನೌನ್ಸ್ ಮೆಂಟ್ ಮೂಲಕ ತಿಳಿಹೇಳಲಾಗುವುದು.

ಅಲ್ಲದೆ ಪಾರ್ಕಿಂಗ್ ನ್ನ ನಾಲ್ಕು ಕಡೆ ವ್ಯವಸ್ಥೆ ಮಾಡಲು ತೀರ್ಮಾನಿಸಲಾಗಿದೆ. ಒಂದು ಕಡೆ 250 ವಾಹನಗಳಿಗೆ ಮಾತ್ರ ಅವಕಾಶವಿದ್ದು ನಾಲ್ಕುಕಡೆಯಲ್ಲಿ ಒಟ್ಟು 1000 ವಾಹನಗಳಿಗೆ ಅವಕಾಶಕಲ್ಪಿಸಲಾಗಿದೆ. ಆದರೆ ಈ ಮೊದಲು ಜೋಗ ವೀಕ್ಷಣ ಸ್ಥಳಗಳಲ್ಲಿ ಮಾತ್ರ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು ಇದರಿಂದಾಗಿ ಟ್ರಾಫೀಕ್ ಜಾಮ್ ಉಂಟಾಗುತ್ತಿತ್ತು. ಬ್ರಿಟೀಶ್ ಬಂಗ್ಲೋ, ಕಾರ್ಗಲ್ ರಸ್ತೆ, ಯಾತ್ರಿನಿವಾಸ ಹಾಗೂ ಮಾಮೂಲಿಯಾಗಿ ವಾಹನಗಳನ್ನ ನಿಲ್ಲಿಸಲಾಗುತ್ತಿದ್ದ ಜೋಗ್ ಜಲಪಾತದ ವೀಕ್ಷಣ ಸ್ಥಳಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

ಈ ಎಲ್ಲಾ ತೀರ್ಮಾನಗಳು ನಾಳೆಯಿಂದ ಜಾರಿಗೆ ಬರಲಿದೆ. ಇದರ ಜೊತೆಗೆ ಜೋಗದ ಗುಂಡಿ ನೋಡಲು ಅವಕಾಶ ಮಾಡಿಕೊಡಲಾಗುತ್ತಿದೆ. ನಾಳೆಯಿಂದ ಇದರ ಅವಕಾಶವನ್ನ ಮುಕ್ತಗೊಳಿಸಲಾಗುತ್ತಿದೆ. ಆದರೆ ಜೋಗದ ಗುಂಡಿ ವೀಕ್ಷಣೆಗೆ 1400 ಮೆಟ್ಟಿಲು ಇಳಿಯಲು ಶನಿವಾರ ಮತ್ತು ಭಾನುವಾರ ಅಧಿಕ ಪ್ರವಾಸಿಗರು ಭೇಟಿ ನೀಡುವ ಹಿನ್ನಲೆಯಲ್ಲಿ ಬಂದ್ ಮಾಡಲು ತೀರ್ಮಾನಿಸಲಾಗಿದೆ. ರಾತ್ರಿಯ ವೇಳೆ ಜಗಮಗಿಸುವ ವಿದ್ಯುತ್ ದೀಪದ ಅಲಂಕಾರವನ್ನ ಆರಂಭಿಸಲು ತೀರ್ಮಾನಿಸಲಾಯಿತು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
190
Ismail M Kutty

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು