News Karnataka Kannada
Sunday, April 21 2024
Cricket
ಕರ್ನಾಟಕ

ಜಿಲ್ಲಾಧಿಕಾರಿ ನಿವಾಸ ಬಳಿಯಲ್ಲೇ ಅಕ್ರಮ ಶ್ರೀಗಂಧ ಸಾಗಾಟ ಪತ್ತೆ

Photo Credit :

ಜಿಲ್ಲಾಧಿಕಾರಿ ನಿವಾಸ ಬಳಿಯಲ್ಲೇ ಅಕ್ರಮ ಶ್ರೀಗಂಧ ಸಾಗಾಟ ಪತ್ತೆ

ಕಾಸರಗೋಡು: ಜಿಲ್ಲಾಧಿಕಾರಿ ವಸತಿ ಸಮೀಪದ  ಮನೆಯೊಂದರಿಂದ ಸುಮಾರು  ಎರಡೂವರೆ ಕೋಟಿ ರೂ. ಮೌಲ್ಯದ  ಒಂದು ಕ್ವಿಂಟಾಲ್ ನಷ್ಟು ಶ್ರೀಗಂಧದ ಕೊರಡುಗಳನ್ನು ಜಿಲ್ಲಾಧಿಕಾರಿ ಡಾ . ಡಿ .ಸಜಿತ್ ಬಾಬು ನೇತೃತ್ವದ ತಂಡವು ನಡೆಸಿದ ಸಿನಿಮೀಯ ರೀತಿಯ ದಾಳಿಯಿಂದ ವಶಪಡಿಸಿಕೊಂಡ ಘಟನೆ ಇಂದು ಮುಂಜಾನೆ ಕಾಸರಗೋಡು ನಗರ ಹೊರವಲಯದಲ್ಲಿ ನಡೆದಿದೆ.

ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ  ನಿವಾಸದ ಸಮೀಪದಿಂದ ಅಕ್ರಮ ಸಾಗಾಟ ಬೆಳಕಿಗೆ ಬಂದಿದೆ.  ಜಿಲ್ಲೆಯ ಇತಿಹಾಸದಲ್ಲೇ ಅತೀ  ದೊಡ್ಡ ಶ್ರೀಗಂಧ ಬೇಟೆಯಾಗಿದೆ.

ಇಂದು ಮುಂಜಾನೆ 4.30ರ ಸುಮಾರಿಗೆ ಜಿಲ್ಲಾಧಿಕಾರಿ, ಅವರ ಕಾರು ಚಾಲಕ ಶ್ರೀಜಿತ್ ಹಾಗೂ ಗನ್ ಮ್ಯಾನ್ ಎಚ್ಚೆತ್ತಾಗ ಮನೆ ಸಮೀಪದ ಭಾರೀ ಶಬ್ದ ಕೇಳಿ  ಬಂದಿದ್ದು, ಗನ್ ಮ್ಯಾನ್  ಮತ್ತು ಚಾಲಕ ಹೊರ ಬಂದು ನೋಡಿದಾಗ ಸಮೀಪದ ಮನೆಯಂಗಳದಲ್ಲಿ  ನಿಲುಗಡೆಗೊಳಿಸಿದ್ದ  ಲಾರಿಗೆ  ಶ್ರೀಗಂಧದ ಕೊರಡುಗಳನ್ನು ತುಂಬಿಸುತ್ತಿರುವುದು ಗಮನಕ್ಕೆ ಬಂದಿದೆ. ಬಳಿಕ ಜಿಲ್ಲಾಧಿಕಾರಿಯವರಿಗೆ  ಮಾಹಿತಿ ನೀಡಿದ್ದು, ಸ್ಥಳಕ್ಕೆ  ತಲಪಿದ  ಜಿಲ್ಲಾಧಿಕಾರಿಯವರು ಪೊಲೀಸರ ನೆರವಿನೊಂದಿಗೆ  ಅಕ್ರಮವನ್ನು ಬೆಳಕಿಗೆ ತರುವಲ್ಲಿ  ಯಶಸ್ವಿಯಾಗಿದ್ದಾರೆ.

30ರಷ್ಟು ಪ್ಲಾಸ್ಟಿಕ್ ಚೀಲಗಳಲ್ಲಿ  ಶ್ರೀಗಂಧದ ಕೊರಡುಗಳನ್ನು ತುಂಬಿಸಿ  ಲಾರಿಗೆ ತುಂಬಿಸಲಾಗಿತ್ತಿತ್ತು. ಸಿಮೆಂಟ್ ಸಾಗಾಟದ  ಲಾರಿಯಲ್ಲಿ ವಿಶೇಷ ಕ್ಯಾಬಿನ್ ನಿರ್ಮಿಸಿ ಅದರೊಳಗೆ ಶ್ರೀಗಂಧದ ಕೊರಡುಗಳನ್ನು  ತುಂಬಿಸಿ ಸಾಗಿಸಲಾಗುತ್ತಿತ್ತು. ಮನೆ ಮಾಲಕ ಹಾಗೂ ಆರೋಪಿಗಳು ದಾಳಿ ಸಂದರ್ಭದಲ್ಲಿ ಪರಾರಿಯಾಗಿದ್ದಾರೆ. ಕರ್ನಾಟಕ  ನೋಂದಣಿಯ ಲಾರಿ ಹಾಗೂ ಮೂರು ಕಾರುಗಳನ್ನು ಸ್ಥಳದಿಂದ ವಶಪಡಿಸಿಕೊಂಡಿದ್ದಾರೆ. ಮನೆ ಮಾಲಕ ನಾಯಮ್ಮರಮೂಲೆಯ  ಅಬ್ದುಲ್  ಖಾದರ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.  

ಶ್ರೀಗಂಧವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದು,  ಹೆಚ್ಚಿನ ತನಿಖೆ  ನಡೆಯುತ್ತಿದೆ. 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು