News Karnataka Kannada
Saturday, April 13 2024
Cricket
ಕರ್ನಾಟಕ

ಚಾಮರಾಜನಗರ: ಕೊರೋನಾ ಸೋಂಕಿಗೆ ಆಯುಷ್ ವೈದ್ಯ ಸಾವು

Photo Credit :

ಚಾಮರಾಜನಗರ: ಕೊರೋನಾ ಸೋಂಕಿಗೆ ಆಯುಷ್ ವೈದ್ಯ ಸಾವು

ಚಾಮರಾಜನಗರ: ಕೊರೋನಾ ಸೋಂಕು ತಗುಲಿ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಡಾ.ರಾಚಯ್ಯ ಎಂಬುವರು ಮೃತಪಟ್ಟಿದ್ದಾರೆ.ಮೈಸೂರಿನ ಉದಯಗಿರಿ ನಿವಾಸಿ 60 ವರ್ಷದ ಡಾ.ರಾಚಯ್ಯ ಕಳೆದ 22 ವರ್ಷಗಳಿಂದ ಚಾಮರಾಜನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕೊರೋನಾ ಉಲ್ಭಣಗೊಂಡ ನಂತರ ಮೈಸೂರಿನಿಂದ ಪ್ರತಿದಿನ ಕೆಲಸಕ್ಕೆ ಬಸ್ ನಲ್ಲಿ ಬರುತ್ತಿದ್ದುದೇ ಡಾ.ರಾಚಯ್ಯ ಅವರಿಗೆ ಸೋಂಕು ತಗುಲಲು ಕಾರಣವಿರಬಹುದು ಎಂದು ಶಂಕಿಸಲಾಗಿದೆ.

 

ಜುಲೈ 21 ರಂದು ಇಲಾಖೆ ನಡೆಸಿದ್ದ ವಿಡಿಯೋ ಕಾನ್ಫರೆನ್ಸ್ ನಲ್ಲಿ ಭಾಗವಹಿಸಿಲು ಡಾ.ರಾಚಯ್ಯ ಅವರು ಮೈಸೂರಿನಿಂದ ಚಾಮರಾಜನಗರದ ಕಚೇರಿಗೆ ಆಗಮಿಸಿದ್ದರು. ಈ ವೇಳೆ ತಮ್ಮ ಆರೋಗ್ಯ ಹದಗೆಟ್ಟಿರುವ ಬಗ್ಗೆ ಸಿಬ್ಬಂದಿಗಳಿಗೆ ತಿಳಿಸಿದ್ದರು ಎನ್ನಲಾಗಿದೆ.

 

ಮೊದಲೇ ಮಧುಮೇಹದಿಂದ ಬಳಲುತ್ತಿದ್ದ ಡಾ.ರಾಚಯ್ಯ ಅವರಿಗೆ ಜು.26ರಂದು ಕೊರೋನಾ ದೃಢಪಟ್ಟಿದೆ. ಚಿಕಿತ್ಸೆಗೆ ಸ್ಪಂದಿಸದೆ ಆ.2ರಂದು ಮೃತಪಟ್ಟಿದ್ದಾರೆ. ಸೇವೆಯಿಂದ ನಿವೃತ್ತಿರಾದ ಕೊನೆಯ ದಿನ ಅಂದರೆ ಜುಲೈ 31ರಂದು ಕೊರೋನಾ ಪಾಸಿಟಿವ್ ಆಗಿ ಆಸ್ಪತ್ರೆಯಲ್ಲಿ ಕಳೆದು ಇಹಲೋಕ ತ್ಯಜಿಸಿದ್ದಾರೆ. ಇವರ ಪ್ರಾಥಮಿಕ. ಸಂಪರ್ಕದಲ್ಲಿದ್ದ ಇಲಾಖೆಯ ಇಬ್ಬರು ಸಿಬ್ಬಂದಿಯ ವರದಿ ನೆಗೆಟಿವ್ ಬಂದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು