News Karnataka Kannada
Monday, April 15 2024
Cricket
ಕರ್ನಾಟಕ

ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ಇನ್ನೂ ಬೆಡ್‌ ಕೊರತೆ

Photo Credit :

ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ   ಇನ್ನೂ ಬೆಡ್‌ ಕೊರತೆ

ಚಾಮರಾಜನಗರ: ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ನಡೆದ 24 ಕರೊನಾ ಸೋಂಕಿತರ ದುರಂತ ಸಾವಿನ ಘಟನೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದೆ. ಇದರ ಬೆನ್ನಲ್ಲೇ ಮಾಜಿ ಸಚಿವ ಹಾಗೂ ಕಾಂಗ್ರೆಸ್​ ನಾಯಕ ಪುಟ್ಟರಂಗಶೆಟ್ಟಿ ಸ್ಫೋಟಕ ಮಾಹಿತಿಯೊಂದನ್ನು ಬಿಚ್ಚಿಟ್ಟಿದ್ದಾರೆ.
ಈಗಲೂ ಜಿಲ್ಲಾಸ್ಪತ್ರೆಯಲ್ಲಿ 50 ಜನ‌ ತುಂಬಾ ಗಂಭೀರ ಸ್ಥಿತಿಯಲ್ಲಿದ್ದಾರಂತೆ. ಆಸ್ಪತ್ರೆಯಲ್ಲಿ ಒಟ್ಟು 170 ಕರೊನಾ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ‌ 15 ದಿನಗಳಿಂದ 50 ರೋಗಿಗಳು ಗಂಭೀರ ಸ್ಥಿತಿಯಲ್ಲಿ ಒದ್ದಾಡುತ್ತಿದ್ದಾರೆ. ಯಾವ ಸಮಯದಲ್ಲಿ ಏನಾಗಲಿದೆ ಎಂಬುದನ್ನ‌ ಹೇಳುವುದಕ್ಕೂ ಸಾಧ್ಯವಾಗುತ್ತಿಲ್ಲ ಎಂದು ಪುಟ್ಟರಂಗಶೆಟ್ಟಿ ಮಾಹಿತಿ ನೀಡಿದರು.120 ಜನರು ನಾರ್ಮಲ್‌ ಕಂಡಿಷನ್​ನಲ್ಲಿದ್ದಾರೆ. ತಕ್ಷಣದಿಂದಲೇ ಜಿಲ್ಲಾಸ್ಪತ್ರೆಗೆ ‌ಬೆಡ್​ಗಳ ಅವಶ್ಯಕತೆ ಇದೆ. ಸರ್ಕಾರಕ್ಕೆ ಈಗಾಗಲೇ ಡಿಸಿ ಪತ್ರ ಬರೆದು ಬೆಡ್ ಕೊರೆತೆ ಗಮನ ಸೆಳೆದಿದ್ದಾರೆ. ಈಗಲಾದ್ರೂ ಸಮಸ್ಯೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಿ ಎಂದು ಡಿಸಿಗೆ ಹೇಳಿದ್ದೇನೆ ಎಂದರು.
ಬೆಡ್ ಸಮಸ್ಯೆ ‌‌ನೀಗಿಸುವುದಕ್ಕೆ ವೈಯಕ್ತಿಕವಾಗಿ‌ ಸಹಾಯ ಮಾಡಲು ನಾನು ಸಿದ್ಧನಿದ್ದೇನೆಂದು ಮಾಜಿ ಸಚಿವ ಪುಟ್ಟರಂಗಶೆಟ್ಟಿ ಇದೇ ಸಮಯದಲ್ಲಿ ಭರವಸೆ ನೀಡಿದರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು