News Karnataka Kannada
Wednesday, April 17 2024
Cricket
ಕರ್ನಾಟಕ

ಚಾಮರಾಜನಗರದಲ್ಲಿ ಮೂರು ದಿನದಲ್ಲಿ ನಾಲ್ಕು ಸೋಂಕಿತರು ಸಾವು

Photo Credit :

ಚಾಮರಾಜನಗರದಲ್ಲಿ ಮೂರು ದಿನದಲ್ಲಿ ನಾಲ್ಕು ಸೋಂಕಿತರು ಸಾವು

ಚಾಮರಾಜನಗರ: ಜಿಲ್ಲೆಯಲ್ಲಿ ಕೊರೋನಾ ಸೋಂಕಿನಿಂದ ಮೃತಪಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು ಮೂರು ದಿನದಲ್ಲಿ ನಾಲ್ಕು ಮಂದಿ ಸೋಂಕಿತರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದ ಗುಂಡ್ಲುಪೇಟೆ ಪಟ್ಟಣದ 73 ವರ್ಷದ ವೃದ್ದರೊಬ್ಬರು ಸೋಮವಾರ ನಡುರಾತ್ರಿ ಸಾವನ್ನಪ್ಪಿದ್ದಾರೆ. ಕಳೆದ ವಾರ ಕೊರೋನ ಸೋಂಕು ದೃಢವಾಗಿದ್ದ ಹಿನ್ನೆಲೆಯಲ್ಲಿ ಚಾಮರಾಜನಗರದ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಸೋಮವಾರ ರಾತ್ರಿ 11 ಗಂಟೆಯ ಸಮಯದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಶನಿವಾರ ಕೊಳ್ಳೇಗಾಲ ತಾಲ್ಲೂಕಿನ ಕೊಂಗರಹಳ್ಳಿ ನಿವಾಸಿಯೊಬ್ಬರು ಕೊರೋನಾ ಸೋಂಕಿನಿಂದ ಕೊಳ್ಳೇಗಾಲ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು, ಭಾನುವಾರ ಕೊಳ್ಳೇಗಾಲ ನಿವಾಸಿ ನಿವೃತ್ತ ಆರೋಗ್ಯ ಇಲಾಖೆಯ ನೌಕರರು ಕೊರೋನಾ ಸೊಂಕಿನಿಂದ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

ಸೋಮವಾರ  ಕೊಳ್ಳೇಗಾಲ ತಾಲ್ಲೂಕಿನ ಪಾಳ್ಯ ಗ್ರಾಮದ ನಿವಾಸಿಯೊಬ್ಬರು ಕೊಳ್ಳೇಗಾಲ ಉಪ ವಿಭಾಗ ಆಸ್ಪತ್ರೆಯಲ್ಲಿ  ಸಾವನ್ನಪ್ಪಿದ್ದರು, ಇದರ ಬೆನ್ನ ಹಿಂದೆಯೇ ಸೋಮವಾರ ನಡುರಾತ್ರಿ ಗುಂಡ್ಲುಪೇಟೆ ನಿವಾಸಿ 73 ವರ್ಷದ ವೃದ್ದರು ಸಾವನ್ನಪ್ಪಿದ್ದಾರೆ.

ಚಾಮರಾಜನಗರ ಜಿಲ್ಲೆಯಲ್ಲಿ ಕೊರೋನಾ ಸೋಂಕಿಗೆ ಸರಣಿ ಸಾವು ಸಂಭವಿಸುತ್ತಿರುವುದರಿಂದ ಜಿಲ್ಲಾಡಳಿತ ಮತ್ತಷ್ಟು ಕಠಿಣ ನಿರ್ಧಾರ ಮತ್ತು ಕ್ರಮ ಕೈಗೊಳ್ಳಲಿದೆ ಎಂದು ಹೇಳಲಾಗುತ್ತಿದೆ.

ಮೃತಪಟ್ಟ ವ್ಯಕ್ತಿಯ ಮೃತ ದೇಹವನ್ನು ಮುಸ್ಲೀಂ ಸಮುದಾಯದ ಸ್ಮಶಾನದಲ್ಲಿ ಪಿ.ಎಫ್.ಐ ಸ್ವಯಂ ಸೇವಕರ ಸಹಕಾರದೊಂದಿಗೆ ಅಂತ್ಯ ಸಂಸ್ಕಾರ ಮಾಡಲಾಯಿತು. ಎಂಟು ಅಡಿ ಆಳದಲ್ಲಿ ಮೃತ ದೇಹವನ್ನು ಹಗ್ಗದ ಸಹಾಯದಿಂದ ಹಳ್ಳದಲ್ಲಿ ಇರಿಸಿ, ರಾಸಾಯನಿಕ ಸಿಂಪಡಿಸಿದ ಬಳಿಕ ಮಣ್ಣು ಮುಚ್ಚಿ ಸಂಸ್ಕಾರ ಮಾಡಿದ ಬಳಿಕ ಪುನಃ ರಾಸಾಯನಿಕ ಸಿಂಪಡಿಸಲಾಯಿತು. ಈ ವೇಳೆಯಲ್ಲಿ ಮೃತರ ಸಂಬಂಧಿಕರಿಗೆ ಅಂತಿಮ ದರ್ಶನಕ್ಕೆ ದೂರದಿಂದಲೇ ಅವಕಾಶ ಕಲ್ಪಿಸಲಾಗಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು