News Karnataka Kannada
Wednesday, April 17 2024
Cricket
ಕರ್ನಾಟಕ

ಚಾಮರಾಜನಗರದಲ್ಲಿ ಮೂರು ದಿನದಲ್ಲಿ ಮೂವರು ಸಾವು

Photo Credit :

ಚಾಮರಾಜನಗರದಲ್ಲಿ ಮೂರು ದಿನದಲ್ಲಿ ಮೂವರು ಸಾವು

ಚಾಮರಾಜನಗರ: ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಇನ್ನೂರರ ಗಡಿಯತ್ತ ಸಾಗುತ್ತಿದ್ದು, ಕೊಳ್ಳೇಗಾಲ ತಾಲೂಕಿನಲ್ಲಿ ಮೂರು ದಿನಗಳಲ್ಲಿ ಮೂವರು ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ಸೋಮವಾರ ಚಾಮರಾಜನಗರ ಜಿಲ್ಲೆಯಲ್ಲಿ 14 ಕೊರೋನಾ ಸೊಂಕಿತರು ಪತ್ತೆಯಾಗಿದ್ದು,  ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 187ಕ್ಕೆ ಏರಿಕೆಯಾದರೆ, ಸೋಮವಾರ ಗುಣಮುಖರಾದ 16 ಮಂದಿ ಬಿಡುಗಡೆಯಾಗಿದ್ದಾರೆ. ಇದುವರೆಗೂ 93 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಚಾಮರಾಜನಗರ  ಜಿಲ್ಲೆಯಲ್ಲಿ ಸೋಮವಾರ 14 ಕೊರನಾ ಸೊಂಕಿತರು ದೃಢವಾಗಿದ್ದು ಜಿಲ್ಲೆಯಲ್ಲಿ ಕೊರಾನಾ ಸೊಂಕಿತರ ಸಂಖ್ಯೆ 187 ಕ್ಕೇರಿದಂತಾಗಿದೆ. ಇವರಲ್ಲಿ 16 ಮಂದಿ ಕೊರೋನಾ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾಗಿ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಕೋವಿಡ್ ಆಸ್ಪತ್ರೆಯಿಂದ ಇದುವರೆಗೂ 93 ಮಂದಿ ಬಿಡುಗಡೆಯಾಗಿದ್ದಾರೆ. ಸಕ್ರಿಯವಾಗಿ  92 ಕೊರಾನಾ ಪಾಸಿಟೀವ್ ಇರುವವರು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೊರೋನಾ ಹಾಟ್ ಸ್ಪಾಟ್ ಆಗಿರುವ ಗುಂಡ್ಲುಪೇಟೆ ತಾಲೂಕಿನಲ್ಲಿ ಹನ್ನೊಂದು ಕೊರೋನಾ ಪ್ರಕರಣಗಳು ಸೋಮವಾರ ದಾಖಲಾಗಿದೆ. ಅವರಲ್ಲಿ ಪುರಸಭೆ ಸದಸ್ಯರೊಬ್ಬರಿಗೆ ಕೊರಾನ ಸೋಂಕು ದೃಢವಾಗಿದೆ. ಗುಂಡ್ಲುಪೇಟೆ ಪಟ್ಟಣದ ಅಮೀರ್ ಖಾನ್ ರಸ್ತೆಯ ವಾಸವಾಗಿರುವ ನಾಲ್ಕು ಮಂದಿಗೆ ಕೊರೋನಾ ಸೋಂಕು ದೃಢವಾಗಿದೆ. ಗುಂಡ್ಲುಪೇಟೆ ಪಟ್ಟಣದ ಅಶ್ವಿನಿ ಬಡಾವಣೆಯ ನಿವಾಸಿಯೊಬ್ಬರಿಗೆ ಕೊರೋನಾ ಸೋಂಕು ದೃಢವಾಗಿದೆ. ಗುಂಡ್ಲುಪೇಟೆ ಚಾಮರಾಜನಗರ ರಸ್ತೆಯಲ್ಲಿರುವ ದೊಡ್ಡ ತುಪ್ಪೂರು ಗ್ರಾಮದಲ್ಲಿ ಮತ್ತೆ ಮೂವರಿಗೆ ಕೊರಾನ ಕಾಣಿಸಿಕೊಂಡಿದ್ದು, ಗ್ರಾಮದ ಜನತೆಯಲ್ಲಿ ಆತಂಕ ಹೆಚ್ಚಾಗಿದೆ. ಕೊಳ್ಳೇಗಾಲ ಪಟ್ಟಣ ಮತ್ತು ಕೊಳ್ಳೇಗಾಲ ಮೋಳೆಯಲ್ಲಿ ಒಬ್ಬೊಬ್ಬರಿಗೆ ಕೊರಾನಾ ಕಾಣಿಸಿಕೊಂಡಿದೆ. ಹಾಗೂ ಪಾಳ್ಯ ಗ್ರಾಮದ ನಿವಾಸಿಯೊಬ್ಬರಿಗೆ ಕೊರೋನ ಸೋಂಕು ದೃಢವಾಗಿದ್ದು, ಅವರು ಕೊಳ್ಳೇಗಾಲ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಚಾಮರಾಜನಗರ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಇನ್ನೂರರ ಗಡಿ ತಲುಪುತ್ತಿದ್ದು, ಕೊಳ್ಳೇಗಾಲ ತಾಲೂಕಿನಲ್ಲೇ ಮೂವರು ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು