News Karnataka Kannada
Sunday, April 21 2024
Cricket
ಕರ್ನಾಟಕ

ಚಲಿಸುತ್ತಿದ್ದ ಪಿಕಪ್ ಮೇಲೆ ಉರುಳಿ ಬಿದ್ದ ವಿದ್ಯುತ್ ಕಂಬ

Photo Credit :

ಚಲಿಸುತ್ತಿದ್ದ ಪಿಕಪ್ ಮೇಲೆ ಉರುಳಿ ಬಿದ್ದ ವಿದ್ಯುತ್ ಕಂಬ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನಲ್ಲಿ ಆಗಸ್ಟ್ 3ರ ಸೋಮವಾರದಿಂದ ಸುರಿಯುತ್ತಿರುವ ಭಾರೀ ಗಾಳಿ-ಮಳೆಗೆ ತಾಲೂಕಿನ ಹಲವಡೆ ಅವಘಡ ಹಾಗೂ ಆಸ್ತಿಪಾಸ್ತಿ ನಷ್ಟ ಸಂಭವಿಸಿದ್ದು, ಪಡಂಗಡಿ ಗ್ರಾಮದ ಕನ್ನಡಿಕಟ್ಟೆಯಲ್ಲರುವ ರಬ್ಬರ್ ನರ್ಸರಿ ಮುಂಭಾಗದಲ್ಲಿ ಗುರುವಾಯನಕೆರೆ ವಿದ್ಯುತ್ ಸಬ್‌ಸ್ಟೇಷನ್ ನಿಂದ ವೇಣೂರು ಸಬ್‌ಸ್ಟೇಷನ್ ಗೆ ಹೋಗುವ 33 ಕೆ.ವಿ. ವಿದ್ಯುತ್ ಕಂಬ ಆಗಸ್ಟ್ 4ರ ಬೆಳಿಗ್ಗೆ ಚಲಿಸುತ್ತಿದ್ದ ಪಿಕ್‌ಅಪ್ ವಾಹನದ ಮೇಲೆ ಬಿದ್ದು ವಾಹನ ಜಖಂಗೊಂಡಿದ್ದು; ಪುಣ್ಯವಶಾತ್ ವಾಹನದಲ್ಲಿದವರಿಗೆ ಯಾವುದೇ ಗಂಭೀರ ಸ್ವರೂಪದ ಗಾಯಗಾಳಾಗಲಿಲ್ಲ.

ವಿದ್ಯುತ್ ಕಂಬ ಬಿದ್ದ ರಭಸಕ್ಕೆ ವಿದ್ಯುತ್ ಲೈನ್ ಟ್ರಿಪ್ ಆದ್ದರಿಂದ ಯಾವುದೇ ವಿದ್ಯುತ್ ಅವಘಡ ಸಂಭವಿಸಿ ವಾಹನದಲ್ಲಿದ್ದವರಿಗೆ ಪ್ರಾಣಾಪಾಯವಾಗಿಲ್ಲ.

ಈ ವಿದ್ಯುತ್ ಕಂಬಗಳನ್ನು ಸರಿಯಾದ ರೀತಿಯಲ್ಲಿ ಅಂತರ ಕಾಯ್ದುಕೊಳ್ಳದೆ ಎಲ್ಲೆಂದರಲ್ಲಿ ಸಿಕ್ಕಸಿಕ್ಕ ಕಡೆಗಳಲ್ಲಿ ಹಾಕಿದ್ದು, ರಸ್ತೆ ಅಗಲೀಕರಣವಾಗುವ ವೇಳೆ‌ ಈ ವಿದ್ಯುತ್ ಕಂಬಗಳನ್ನು ಬೇರೆಡೆಗೆ ವರ್ಗಾಯಿಸಲು ಆದೇಶ ಮಾಡಿದ್ದರೂ ಕೂಡ ಅದನ್ನು ಮತ್ತೆ ಸರಿಯಾದ ಸ್ಥಳದಲ್ಲಿ ಹಾಕದೆ ಅಲ್ಲಿಯೇ ಬಿಟ್ಟಿದ್ದಾರೆ. ಪರಿಣಾಮವಾಗಿ ಕಂಬಗಳ‌ ಬುಡಗಳಲ್ಲಿ ನೀರು ನಿಂತು, ಮಣ್ಣಿನ ಹಿಡಿತ ಕಳಕೊಂಡ ಕಂಬಗಳು ಬೀಳುತ್ತಿದೆ. ಇದರ ಪಕ್ಕದಲ್ಲಿ ಇನ್ನೊಂದು ವಿದ್ಯುತ್ ಲೈನ್ ಕೂಡ ಹಾದುಹೋಗಿದ್ದು, ಸಾಕಷ್ಟು ಕಂಬಗಳು ಬಿಳುವ ಸ್ಥಿತಿಯಲ್ಲಿದೆ. ಪರಿಸರದ ನಿವಾಸಿಗಳು ಇದರ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದು, ಇನ್ನಾದರೂ ಮೆಸ್ಕಾಂ ಅಧಿಕಾರಿಗಳು ಎಚ್ಚೆತ್ತು ಅಪಾಯಕಾರಿ ವಿದ್ಯುತ್ ಕಂಬಗಳನ್ನು ಸರಿಯಾದ ಸ್ಥಳಗಳಲ್ಲಿ ಸರಿಯಾದ ಕ್ರಮದಲ್ಲಿ ಅಳವಡಿಸಲು ಕ್ರಮ ಕೈಗೊಳ್ಳಬೇಕೆಂದು ಸ್ಥಳಿಯರು ಆಗ್ರಹಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು