News Karnataka Kannada
Monday, April 15 2024
Cricket
ಕರ್ನಾಟಕ

ಚನ್ನಪಟ್ಟಣದಲ್ಲಿ ಸರ್ಕಾರದಿಂದ ಆಟಿಕೆ ಕ್ಲಸ್ಟರ್ ಸ್ಥಾಪಿಸಲು ಆಗ್ರಹ

Photo Credit :

ಚನ್ನಪಟ್ಟಣದಲ್ಲಿ ಸರ್ಕಾರದಿಂದ ಆಟಿಕೆ ಕ್ಲಸ್ಟರ್ ಸ್ಥಾಪಿಸಲು ಆಗ್ರಹ

ರಾಮನಗರ: ಕರಕುಶಲಕರ್ಮಿಗಳ  ತವರೂರು ಹಾಗೂ ಬೊಂಬೆಗಳ ನಾಡು ಚನ್ನಪಟ್ಟಣದಲ್ಲಿ ಸರ್ಕಾರ ಆಟಿಕೆ ಕ್ಲಸ್ಟರ್ ಸ್ಥಾಪಿಸಬೇಕು ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ರಮೇಶ್‍ಗೌಡ ಆಗ್ರಹಿಸಿದ್ದಾರೆ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಕೊಪ್ಪಳದಲ್ಲಿ 400 ಎಕರೆ ಪ್ರದೇಶದಲ್ಲಿ ವಿಶ್ವದರ್ಜೆಯ ಮೂಲ ಸೌಕರ್ಯಗಳನ್ನು ಒಳಗೊಂಡ ಆಟಿಕೆ ಕ್ಲಸ್ಟರ್ ಆರಂಭಿಸಿ 40 ಸಾವಿರ ಉದ್ಯೋಗ ಸೃಷ್ಠಿಸುವ ಗುರಿ ಹೊಂದಿರುವುದಾಗಿ ಹೇಳಿದ್ದಾರೆ.  ಅದೇ ಮಾದರಿಯಲ್ಲಿ ಚನ್ನಪಟ್ಟಣದಲ್ಲಿಯೂ ಇಂತಹ ಕ್ಲಸ್ಟರ್ ಸ್ಥಾಪಿಸುವುದು ಸೂಕ್ತ ಎಂದರು.

ಅಗಸ್ಟ್.30 ರಂದು  ಪ್ರಧಾನಮಂತ್ರಿಗಳು  ನಡೆಸಿದ ಮನ್ ಕೀ ಬಾತ್  ಕಾರ್ಯಕ್ರಮದಲ್ಲಿ ಚನ್ನಪಟ್ಟಣದ ಬೊಂಬೆ ಉದ್ಯಮವನ್ನು ಪ್ರಸ್ತಾಪಿಸಿದ್ದು ಸ್ವಾಗತಾರ್ಹ ವಿಚಾರ. ದೇಶ ವಿದೇಶಗಳಲ್ಲಿ ಪ್ರಸಿದ್ದಿ ಹೊಂದಿರುವ ಚನ್ನಪಟ್ಟಣದ ಬೊಂಬೆಗಳು, ಅಮೇರಿಕಾ ಅಧ್ಯಕ್ಷರ ವೈಟ್‍ಹೌಸ್‍ನಲಿಯ್ಲೂ ಸ್ಥಾನ ಪಡೆದಿವೆ. ಅಲ್ಲದೆ ಇತ್ತೀಚೆಗೆ ಅಯೋಧ್ಯೆಯ ಶ್ರೀ ರಾಮಮಂದಿರ ಶಿಲಾನ್ಯಾಸದ ವೇಳೆಯಲ್ಲಿ ಪ್ರಧಾನ ಮಂತ್ರಿಯವರಿಗೆ ನೀಡಿದ ಶ್ರೀರಾಮನ ಸುಂದರ ವಿಗ್ರಹ ಕೂಡ ಚನ್ನಪಟ್ಟಣದಿಂದಲೇ ಕೆತ್ತಲ್ಪಟ್ಟಿದ್ದು ಎಂಬುದು ಹೆಗ್ಗಳಿಕೆ ವಿಚಾರ ಎಂದರು.

ಚೈನಾದ ಆಟಿಕೆಗಳ ಆಮದಿನಿಂದ ಬೊಂಬೆ ಉದ್ಯಮ ಇತ್ತೀಚೆಗೆ ತತ್ತರಿಸಿಹೋಗಿದೆ. ಪ್ರಧಾನಿ ಮೋದಿಯವರು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿರುವಂತೆ ವಿಶ್ವಮಟ್ಟದಲ್ಲಿ 7 ಲಕ್ಷ ಕೋಟಿ ಗೂ ಅಧಿಕ ವಹಿವಾಟು ಹೊಂದಿರುವ ಉದ್ಯಮದಲ್ಲಿ ಭಾರತದ ಪಾಲು ಕಡಿಮೆ ಎಂದು ಉಲ್ಲೇಖಿಸಿದ್ದಾರೆ. ಚೈನಾದ ಆಟಿಕೆಗಳಿಗೆ ನಮ್ಮ ದೇಶವೇ ಅತಿದೊಡ್ಡ ಮಾರುಕಟ್ಟೆಯಾಗಿದೆ. ಆದರೆ ಆಟಿಕೆ ಉತ್ಪಾದನೆ ಮತ್ತು ರಫ್ತಿನಲ್ಲೂ ಹಿಂದುಳಿದಿದ್ದೇವೆ. ಹೀಗಾಗಿ ಉದ್ಯಮಕ್ಕೆ ಶಿಸ್ತುಬದ್ದ ವೃತ್ತಿಪರ ಸ್ವರೂಪ ಮತ್ತು ಹೊಸತನ ನೀಡಬೇಕಿದ್ದು ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ್ಯೋನ್ಮುಖವಾಗಬೇಕಿದೆ ಎಂದು ಹೇಳಿದರು.

ಹಿಂದಿನ ಮೈತ್ರಿ ಸರ್ಕಾರ ಸ್ಥಳೀಯರಿಗೆ ಉದ್ಯೋಗ ನೀಡಲು ಮುಂದಾಗಿತ್ತು. ಈಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಣ್ಣದ ಆಟಿಕೆಗಳ ತಯಾರಿಕೆ ಮತ್ತು ಮಾರಾಟಕ್ಕೆ ಉತ್ತೇಜನ ನೀಡಲು ಮುಂದಾಗಿರುವುದು ದೇಶಿಯ ಕಲೆ ಉಳಿವಿಗೆ ಮತ್ತು ಬೆಳವಣಗೆಗೆ ಸಹಕಾರಿಯಾಗಲಿದೆ. ಹೀಗಾಗಿ ಚನ್ನಪಟ್ಟಣದಲ್ಲಿ 15 ಸಾವಿರ ಕರಕುಶಲಕರ್ಮಿಗಳಿದ್ದು ಇಲ್ಲೂ ಕೂಡ ಆಟಿಕೆಗಳ ಕ್ಲಸ್ಟರ್ ಸ್ಥಾಪಿಸಬೇಕೆನ್ನುವುದು  ನಮ್ಮ ಹೋರಾಟದ ಉದ್ದೇಶ ಎಂದರು.

ಚನ್ನಪಟ್ಟಣ  ತಾಲ್ಲೂಕಿನ ಹೊಂಗನೂರು, ನೀಲಸಂದ್ರ, ಕೋಟೆ, ಪೇಟೆ, ಡೈರಾ, ಸುಣ್ಣಘಟ್ಟ, ಎಲೇಕೇರಿ, ಮಂಗಳವಾರಪೇಟೆ, ಸಯ್ಯದ್‍ವಾಡಿ, ಟಿಪ್ಪುನಗರ, ಜೆ.ಬ್ಯಾಡರಹಳ್ಳಿ, ಹರಿಸಂದ್ರ, ರಾಂಪುರ ಸೇರಿದಂತೆ 50ಕ್ಕೂ  ಹೆಚ್ಚು ಹಳ್ಳಿಗಳಲ್ಲಿ ಬೊಂಬೆ ತಯಾರಿಕರಿದ್ದಾರೆ. ಈ ಹಿಂದೆ ಹೆಲ್ತ್‍ಕಾರ್ಡ್ ಸೌಲಭ್ಯದಿಂದ ಖಾಸಗಿ ಆಸ್ಪತ್ರೆಗಳಲ್ಲಿ ಕ್ಯಾಷ್‍ಲೆಸ್ ಸೌಲಭ್ಯ ಸಿಗುತ್ತಿತ್ತು ಆದರೆ ಕೆಲ ವರ್ಷಗಳಿಂದ ನಿಂತಿದೆ. ಪುನಃ ಈ ಸೌಲಭ್ಯ ಜಾರಿಗೆ ಬರಬೇಕು. ಚನ್ನಪಟ್ಟಣದಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆ ಸ್ಥಾಪಿನೆ ಆಗಬೇಕು. ಮೈಸೂರಿನ ಕರಕುಶಲನಗರ ಮಾದರಿಯಲ್ಲಿ ಚನ್ನಪಟ್ಟಣದಲ್ಲಿಯೂ ವಸತಿ ಸೌಲಭ್ಯ ಒದಗಿಸಬೇಕು ಎಂದು ತಿಳಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು