News Karnataka Kannada
Monday, April 22 2024
Cricket
ಕರ್ನಾಟಕ

ಘಟಂ ನುಡಿಸುವ ಗ್ರಾಮೀಣ ಪ್ರತಿಭೆ

Photo Credit :

ಘಟಂ ನುಡಿಸುವ ಗ್ರಾಮೀಣ ಪ್ರತಿಭೆ

ನಾಗಮಂಗಲ: ಸಾತೇನಹಳ್ಳಿ ಗ್ರಾಮದ 19ರ ಹರೆಯದ ಷಮಿತ್ ಎಸ್. ಗೌಡ ಮೃದಂಗವನ್ನು ಕಲಿತು ಘಟ ನುಡಿಸುತ್ತಾ ಸಂಗೀತ ಕ್ಷೇತ್ರದಲ್ಲಿ ಗಮನಸೆಳೆಯುತಿದ್ದಾರೆಯಲ್ಲದೆ, ಚಿಕ್ಕವಯಸ್ಸಿನಲ್ಲಿಯೇ ಸಂಗೀತ ವಿದ್ವಾನ್‍ಗಳ ಬಳಿ ಘಟ ವಿದ್ಯೆ ಕಲಿತು ಹಲವು ಸಾಧಕರ ಜೊತೆ ಸಂಗೀತ ಕಾರ್ಯಕ್ರಮಗಳಲ್ಲಿ  ಭಾಗವಹಿಸಿದ್ದಾರೆ.

ಸಾತೇನಹಳ್ಳಿ ಗ್ರಾಮದ ಸದಾನಂದಗೌಡ ಹಾಗೂ ಶಕುಂತಲ ದಂಪತಿ ಪುತ್ರ ಷಮಿತಗೌಡ ಸಂಗೀತದ ಜೊತೆಗೆ ಮೈಸೂರಿನಲ್ಲಿ  ಬಿ.ಇ. ಎಲೆಕ್ಟ್ರಾನಿಕ್  ವ್ಯಾಸಂಗ ಮಾಡುತ್ತಿದ್ದು ಓದಿನಲ್ಲೂ ಮುಂದಿದ್ದಾರೆ. ಮೈಸೂರಿನ ಆಕಾಶವಾಣಿಯ ಎ ಗ್ರೇಡ್ ಕಲಾವಿದರಾದ ಎಚ್.ಎಲ್. ಶಿವಶಂಕರಸ್ವಾಮಿ ಅವರ ಬಳಿ ಮೃದಂಗ ಕಲಿತು ನಂತರ ಬೆಂಗಳೂರಿನ ಖ್ಯಾತ  ಘಟ ವಾದಕರಾದ ಗಿರಿಧರ್ ಉಡುಪ ಅವರ ಬಳಿ ಘಟಂ ಕಲಿಯುತ್ತಿದ್ದಾರೆ.

ಸಂಗೀತ ಕಲೆಗೆ ಸಂಬಂಧಿಸಿದಂತೆ ನಡೆಸುವ ಪರೀಕ್ಷೆಯಲ್ಲಿ ಸೀನಿಯರ್ ಮತ್ತು ಜೂನಿಯರ್ ಗಳಲ್ಲಿ ಉನ್ನತ ಶ್ರೇಣಿಯಲ್ಲಿ  ತೇರ್ಗಡೆ ಹೊಂದಿ  2019 ರ ಸೀನಿಯರ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೂರನೇ ಸ್ಥಾನ ಪಡೆದು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ವಿದ್ಯಾರ್ಥಿ ವೇತನವನ್ನು ಪಡೆದಿದ್ದಾರೆ.

ರಾಜ್ಯದ ವಿವಿಧೆಡೆ ತ್ಯಾಗರಾಜ ಸಂಗೀತ ಸಭೆ. ನಾದಬ್ರಹ್ಮ ಸಭೆ. ಸುರಭಿ ಕಲಾ ಟ್ರಸ್ಟ್. ಶಾರದ ಮಠ. ಗಾನಭಾರತಿ. ವೇದಿಕೆಗಳಲ್ಲಿ ಖ್ಯಾತ ಕಲಾವಿದರಾದ ಸಿ. ರಾಮದಾಸ್.   ಕೋವಿಲಾಡಿ ಆರ್.ಕಲಾ  ಬಳ್ಳಾರಿ. ಎಮ್ ರಾಘವೇಂದ್ರ. ಅಂಬಾಪ್ರಸಾದ್ ಇವರುಗಳ ಜೊತೆ ಸಂಗೀತ ಕಚೇರಿಗಳಲ್ಲಿ ಘಟಧಲ್ಲಿ ಸಾಥ್ ನೀಡಿದ್ದಾರೆ.

ಗ್ರಾಮಸ್ಥರು ಮತ್ತು ಕುಟುಂಬಸ್ಥರು ಯುವ ಪ್ರತಿಭೆ ಷಮಿತ್ ಗೌಡನ ಬಗ್ಗೆ  ಹೇಳುವುದಾದರೆ, ಇವರ ತಾತ ಕೂಡ ಗ್ರಾಮದೇವರ ಕಾರ್ಯಗಳಲ್ಲಿ ತಬಲ, ಕಂಸಾಳೆ ಸೇರಿದಂತೆ ತಾಳವಾದ್ಯ ನುಡಿಸುತ್ತಿದ್ದರು. ತಾತನಂತೆ ಷಮಿತ್ ಕೂಡ  ಕಲೆಯನ್ನು ಒಲಿಸಿಕೊಂಡು ಎಲ್ಲರ ಗಮನಸೆಳೆಯುತ್ತಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು