News Karnataka Kannada
Sunday, April 14 2024
Cricket
ಕರ್ನಾಟಕ

ಗೂಂಡಾ, ಮಾಫಿಯಾ ತಡೆಯಲು ಮಂಜೇಶ್ವರದಲ್ಲಿ ವಿಶೇಷ ಪೊಲೀಸ್ ತಂಡ

Photo Credit :

ಗೂಂಡಾ, ಮಾಫಿಯಾ ತಡೆಯಲು ಮಂಜೇಶ್ವರದಲ್ಲಿ ವಿಶೇಷ ಪೊಲೀಸ್ ತಂಡ

ಕಾಸರಗೋಡು: ಭೂಗತ ಪಾತಕಿ, ಗೂಂಡಾ, ಮಾಫಿಯಾ  ಹತ್ತಿಕ್ಕಲು ಮಂಜೇಶ್ವರ ಪರಿಸರದಲ್ಲಿ ವಿಶೇಷ ಪೊಲೀಸ್  ತಂಡ ಕಾರ್ಯಾಚರಣೆಗೆ ಮುಂದಾಗಿದೆ. 

ಇದಕ್ಕಾಗಿ ಡಿವೈಎಸ್ ಪಿ ಬಾಲಕೃಷ್ಣನ್ ನಾಯರ್ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ಕೇರಳ ಅಲ್ಲದೆ ಹೊರ ರಾಜ್ಯಗಳ  ಕ್ರಿಮಿನಲ್ ಗಳು ಮಂಜೇಶ್ವರ ಪರಿಸರದಲ್ಲಿ ಠಿಕಾಣಿ ಹೂಡಿರುವುದಾಗಿ ಲಭಿಸಿದ ಮಾಹಿತಿಯಂತೆ ಮಂಜೇಶ್ವರ ವ್ಯಾಪ್ತಿಯಲ್ಲಿ ಕಾರ್ಯಾಚರಣೆ  ನಡೆಸಲಾಗುತ್ತಿದೆ.

ಇವರ ವಾಸ ಸ್ಥಳ ಪತ್ತೆಗೆ ದಾಳಿ ನಡೆಯುತ್ತಿದೆ.  ಈಗಾಗಲೇ 25ಕ್ಕೂ ಅಧಿಕ ಸ್ಥಳಗಳಿಗೆ ದಾಳಿ ನಡೆಸಲಾಗಿದೆ. ಮಂಜೇಶ್ವರ  ಠಾಣೆಯಲ್ಲಿ ದಾಖಲಾದ ಪ್ರಕರಣಗಳಲ್ಲಿ ತಲೆ  ಮರೆಸಿಕೊಂಡಿರುವವರ ಪತ್ತೆಗೆ ದಾಳಿ ನಡೆಸಲಾಗುತ್ತಿದೆ. ಗೂಂಡಾ, ಮಾಫಿಯಾ, ಮಾದಕ ವಸ್ತು ಸಾಗಾಟ ಹಾಗೂ ಇನ್ನಿತರ ಪ್ರಕರಣ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಯುತ್ತಿದೆ.

ಮಾದಕವಸ್ತು ಸಾಗಾಟ,  ದುಷ್ಕೃತ್ಯ ಹಾಗೂ ಇನ್ನಿತರ ಕೆಲ ಪ್ರಕರಣಗಳ ಬಳಿಕ ಆರೋಪಿಗಳು ತಲೆಮರೆಸಿಕೊಳ್ಳುತ್ತಿದ್ದು, ಪ್ರಮುಖವಾಗಿ ಮಂಜೇಶ್ವರ ಗಡಿ ಪ್ರದೇಶದಲ್ಲಿ ಠಿಕಾಣಿ ಹೂಡುತ್ತಿದ್ದಾರೆ ಎಂಬ ಮಾಹಿತಿಯಂತೆ ದಾಳಿ ನಡೆಯುತ್ತಿದೆ.

ಜಿಲ್ಲಾ  ಪೊಲೀಸ್ ವರಿಷ್ಠಾಧಿಕಾರಿ ಡಿ. ಶಿಲ್ಪಾ ನೇತೃತ್ವದಲ್ಲಿ ಈ  ತಂಡ ರಚಿಸಲಾಗಿದ್ದು, ಮಂಜೇಶ್ವರ ಠಾಣಾ ಸರ್ಕಲ್  ಇನ್ಸ್ ಪೆಕ್ಟರ್ ಅನೂಪ್, ಸಬ್ ಇನ್ಸ್ ಪೆಕ್ಟರ್ ರಾಘವನ್ ಈ ತಂಡದಲ್ಲಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು