News Karnataka Kannada
Thursday, April 25 2024
Cricket
ಕರ್ನಾಟಕ

ಗುಡುಗು ಸಿಡಿಲು ಮತ್ತು ಮೊಬೈಲು

Photo Credit :

ಗುಡುಗು ಸಿಡಿಲು ಮತ್ತು ಮೊಬೈಲು

ಸುರಿಯುವ ಮಳೆ, ಜೊತೆಗೆ ಗುಡುಗು-ಸಿಡಿಲು, ಕರೆಂಟ್ ಇಲ್ಲದೆ ಆವರಿಸಿದ ಕತ್ತಲು. ಆ ಸಮಯದಲ್ಲಿ ನಿಮಗೆ ಮೊಬೈಲ್ ಫೋನ್ ಕರೆ ಬರಲು, ಮನೆಯವರ  ಧ್ವನಿ: “ಗುಡುಗು-ಮಿಂಚಿನ ಸಮಯದಲ್ಲಿ ಫೋನ್ ಬಳಕೆ ಬೇಡ..ಸ್ವಿಚ್ ಆಫ್ ಮಾಡು”. ನಿಮ್ಮಲ್ಲಿ ಮೂಡುವ ಪ್ರಶ್ನೆ: ಇಂತಹ ಸಮಯದಲ್ಲಿ ಮೊಬೈಲ್ ಫೋನ್ ಬಳಕೆ ಸುರಕ್ಷಿತವೇ?

ಇಂತಹ ಸಮಯದಲ್ಲಿ ಟೆಲಿಫೋನ್ ಬಳಕೆ ಅಪಾಯಕಾರಿಯಾದದ್ದು. ಈವರೆಗೆ ಗುಡುಗು-ಸಿಡಿಲಿನ ಸಮಯದಲ್ಲಿ ಟೆಲಿಫೋನ್ ಬಳಕೆಯಿಂದಾಗಿ ಹಲವಾರು ಮಂದಿ ಸಾವಿಗೀಡಾಗಿದ್ದಾರೆ, ಬಹಳಷ್ಟು ಮಂದಿ ತೊಂದರೆ ಅನುಭವಿಸಿದ್ದಾರೆ. ಹಾಗಾದರೆ ಟೆಲಿಫೋನ್ ಬಳಕೆಯಂತೆಯೇ ಮೊಬೈಲ್ ಫೋನ್ ಬಳಕೆಯೂ ಅಪಾಯಕಾರಿಯೇ?

ಇಲ್ಲ. ಟೆಲಿಫೋನ್ ತಂತಿ ಕಂಬಗಳ ಮೂಲಕ ಕಾರ್ಯನಿರ್ವಹಿಸುವ ಜಾಲ. ಇಂತಹ ಯಾವುದೇ ಕಂಬಕ್ಕೆ ಸಿಡಿಲು ಬಡಿದರೂ ಅದರ ಸಂಪರ್ಕದಲ್ಲಿರುವ ಟೆಲಿಫೋನ್ ಬಳಕೆಯಿಂದ ಅನಾಹುತವಾಗಬಲ್ಲುದು. ಕೇವಲ ಟೆಲಿಫೋನ್ ಮಾತ್ರವಲ್ಲದೆ ವಿದ್ಯುತ್ ಸರಬರಾಜು, ವೈಫೈ ಮೊಡೆಮ್ ಗಳು ಹಾಗೂ ಯಾವುದೇ ತಂತಿ ಸಂಪರ್ಕದಿಂದ ಕೆಲಸ ಮಾಡುವ ಉಪಕರಣಗಳು ನಿಮಗೆ ಸಿಡಿಲಿನ ಸ್ಪರ್ಶ ನೀಡುವ ದಾರಿಯಾಗಬಲ್ಲುದು. ಆದರೆ, ಮೊಬೈಲ್ ಫೋನ್‍ಗಳಿಗೆ ಯಾವುದೇ ತಂತಿ ಸಂಪರ್ಕವಿರುವುದಿಲ್ಲ. ಹಾಗಾದರೆ ಅದು ಸುರಕ್ಷಿತವೇ?

2013ರ ಜುಲೈ 2 ರಂದು ಮಣಿಪುರದ ಗುಡ್ಡಗಾಡು ಪ್ರದೇಶದಲ್ಲಿ ಗುಡುಗು-ಸಿಡಿಲಿನ ವೇಳೆ ಓರ್ವ ವ್ಯಕ್ತಿ ಚಾರ್ಜಿಂಗ್ ನಲ್ಲಿದ್ದ ಮೊಬೈಲ್ ಫೋನ್ ಬಳಕೆಯಿಂದ ಸಾವನ್ನಪ್ಪಿದರು. ಮಹಾರಾಷ್ಟ್ರದ ಅಕೋಲ ಜಿಲ್ಲೆಯಲ್ಲಿ 22 ವರ್ಷದ ಯುವಕ ಮರದ ಅಡಿಯಲ್ಲಿ ನಿಂತು ಮೊಬೈಲ್ ಫೋನ್‍ನಲ್ಲಿ ಮಾತನಾಡುತ್ತಿರುವಾಗ ಸಿಡಿಲು ಬಡಿದು ಸಾವನ್ನಪ್ಪಿದರು. ಹಾಗಾದರೆ ಮೊಬೈಲ್

ನಾವು ಸರಿಯಾಗಿ ಗಮನಿಸಿದಾಗ, ಮಣಿಪುರದ ವ್ಯಕ್ತಿ ಸಾವಿಗೀಡಾಗಲು ಮುಖ್ಯ ಕಾರಣ ಅವರು ಫೋನ್ ಚಾರ್ಜರ್ ಮುಖಾಂತರ ಪರೋಕ್ಷವಾಗಿ ವಿದ್ಯುತ್ ವ್ಯವಸ್ಥೆಯ ಸಂಪರ್ಕದಲ್ಲಿದ್ದರು. ಮಹಾರಾಷ್ಟ್ರದ ಯುವಕ ಮಳೆಯಿಂದ ತನ್ನನ್ನು ರಕ್ಷಿಸಿಕೊಳ್ಳಲು ಮರದ ಅಶ್ರಯ ಪಡೆದಿದ್ದನು.

ಆದ್ದರಿಂದ ಮೊಬೈಲ್ ಫೋನ್ ಬಳಕೆ ಸಿಡಿಲು ಬಡಿಯುವ ಅಪಾಯವನ್ನು ಹೆಚ್ಚಿಸುವುದ್ದಲ್ಲ, ಬದಲಾಗಿ ನೀವು ಎತ್ತರದ ನೆಲದಲ್ಲಿದ್ದರೆ, ತೆರೆದ ಸ್ಥಳ, ನೀರಿನ ಹತ್ತಿರ, ಮರಗಳ ಬಳಿ ಅಥವಾ ದೊಡ್ಡ ಲೋಹಿಯ ರಚನೆಗಳ ಬಳಿ ಅಥವಾ ಯಾವುದೇ ತಂತಿ ವ್ಯವಸ್ಥೆಗೆ ಬೆಸೆದುಕೊಂಡಿರುವುದು ಕಾರಣವಾಗುತ್ತದೆ.

ಮೊಬೈಲ್ ಫೋನ್‍ಗಳು ಮಿಂಚನ್ನು ಆಕರ್ಷಿಸಬಲ್ಲುದು ಎನ್ನುವುದು ಒಂದು ಕಟ್ಟುಕತೆಯಾಗಿದೆ. ಮೊಬೈಲ್ ಫೋನ್‍ಗಳು ಕಡಿಮೆ ಶಕ್ತಿಯ ಸಾಧನಗಳಾಗಿವೆ. ಅವು ಅತ್ಯಲ್ಪ ಪ್ರಮಾಣದ ಲೋಹವನ್ನು ಹೊಂದಿರುತ್ತದೆ ಮತ್ತು ಮಿಂಚನ್ನು ಆಕರ್ಷಿಸುವ ಗುಣಲಕ್ಷಣಗಳನ್ನು ಹೊಂದಿರುವುದಿಲ್ಲ.  ಈ ಬಗ್ಗೆ 2006ರಲ್ಲಿ ಬಿಬಿಸಿ ನ್ಯೂಸ್ ಮತ್ತು ಬ್ರಿಟಿಷ್ ಮೆಡಿಕಲ್ ಜರ್ನಲ್

ಹಾಗೂ ಯುಎಸ್ ನ್ಯಾಷನಲ್ ಓಷಿಯಾನಿಕ್ ಅಂಡ್ ಅಟ್ಮಾಸ್ಫಿಯರಿಕ್ ಅಡ್ಮಿನಿಸ್ಟ್ರೇಷನ್ (ಎನ್‍ಒಎಎ) ಮೊಬೈಲ್ ಫೋನ್ ಮಿಂಚನ್ನು ಆಕರ್ಷಿಸುವುದಿಲ್ಲ ಎಂದು ಹೇಳಿಕೆ ನೀಡಿದೆ. ಇದನ್ನು ಬಲಪಡಿಸಿ ಹಲವಾರು ವಿಜ್ಞಾನಿ, ತಂತ್ರಜ್ಞಾನಿ ಮತ್ತು ಸಂಸ್ಥೆಗಳು ತಂತಿ ವ್ಯವಸ್ಥೆಯ ಸಂಪರ್ಕದಲ್ಲಿರುವುದು ಮತ್ತು ಮನೆಯ ಹೊರಗೆ ಇದ್ದು ಮೊಬೈಲ್ ಫೋನ್ ಉಪಯೋಗಿಸುವುದು ಅಪಾಯಕ್ಕೆ ಅಹ್ವಾನ ನೀಡಿದಂತೆ ಎಂದು ಹೇಳಿದ್ದಾರೆ. ನೀವು ಇಲ್ಲಿ ತಿಳಿಸಿರುವ ಯಾವುದೇ ಪ್ರದೇಶದಲ್ಲಿ ಇಲ್ಲದೆ ಮನೆಯಲ್ಲೇ ಇದ್ದು ಮೊಬೈಲ್ ಫೋನ್ ಬಳಸುವುದರಲ್ಲಿ ಯಾವುದೇ ತೊಂದರೆಯಿಲ್ಲ.

ಮೊಬೈಲ್ ಫೋನ್ ಬಳಕೆಯ ತಪ್ಪು ಕಲ್ಪನೆಯ ಬಗ್ಗೆ ಸ್ವಲ್ಪ ಬೆಳಕು ಚೆಲ್ಲುವ ಮೂಲಕ ಅದು ಅಪಾಯಕಾರಿಯದುದ್ದಲ್ಲ ಎಂದು ನಿಮಗೆ ಮನವರಿಕೆ ಮಾಡಲು ನಾವು ಪ್ರಯತ್ನಿಸಿದ್ದೇವೆ. ಇದು ಇನ್ನೂ ಸುರಕ್ಷಿತವಲ್ಲ ಎಂದು ನೀವು ಭಾವಿಸಿದರೆ ನಿಮ್ಮ ಫೋನ್ ಸ್ವಿಚ್ ಆಫ್ ಮಾಡಿ, ಮಳೆಯನ್ನು ನೋಡಿ!

ಯಾರು ಬಲ್ಲರು… ನಿಮ್ಮೊಳಗಿನ ಕವಿ ಜಾಗೃತನಾಗಿ ವೈಭವಕ್ಕೆ ಏರಬಹುದು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು