News Karnataka Kannada
Monday, April 22 2024
Cricket
ಕರ್ನಾಟಕ

ಕ್ರಿಕೆಟ್ ಬೆಟ್ಟಿಂಗ್; ಹಿರಿಯೂರು ನಗರಸಭೆ ಸದಸ್ಯ ಜಗದೀಶ್ ಬಂಧನ

Photo Credit :

ಕ್ರಿಕೆಟ್ ಬೆಟ್ಟಿಂಗ್; ಹಿರಿಯೂರು ನಗರಸಭೆ ಸದಸ್ಯ ಜಗದೀಶ್ ಬಂಧನ

ಚಿತ್ರದುರ್ಗ, ; ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದವರ ಮೇಲೆ ಖಚಿತ ಮಾಹಿತಿ ಮೇರೆಗೆ ಪೋಲಿಸರು ದಾಳಿ ಮಾಡಿದ್ದಾರೆ. ಮಾಜಿ ಸಚಿವ ಡಿ. ಸುಧಾಕರ್ ಬೆಂಬಲಿಗ ಹಾಗೂ ನೂತನ ನಗರಸಭೆ ಸದಸ್ಯ ಜಗದೀಶ್ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ.ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದಲ್ಲಿ ಶನಿವಾರ ರಾತ್ರಿ ನಡೆಸಿದ ಕಾರ್ಯಾಚರಣೆಯಲ್ಲಿ ನಾಲ್ವರನ್ನು ಬಂಧಿಸಲಾಗಿದೆ. ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ನಡುವೆ ಐಪಿಎಲ್ ಪಂದ್ಯ ಶನಿವಾರ ನಡೆದಿತ್ತು.
ಈ ಪಂದ್ಯಕ್ಕೆ ಬೆಟ್ಟಿಂಗ್ ನಡೆಸುತ್ತಿದ್ದರು ಎಂಬ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು. ಕಳೆದ ತಿಂಗಳು ನಡೆದ ನಗರಸಭೆಯ ಉಪಚುನಾವಣೆಯಲ್ಲಿ 15ನೇ ವಾರ್ಡ್‌ನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಗದೀಶ್ 548 ಮತಗಳಿಂದ ಗೆಲುವು ಕಂಡಿದ್ದರು.ಚುನಾವಣೆಯಲ್ಲಿ ಗೆದ್ದು ತಿಂಗಳು ಕಳೆಯುವ ಮೊದಲೇ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿರುವುದು ಪತ್ತೆಯಾಗಿದೆ. ಜಗದೀಶ್ ಜೊತೆಗೆ ಮಾರುತಿ, ಕಿರಣ್, ರವಿ ಅಲಿಯಾಸ್ ಉಂಡೆರವಿ ಎಂಬುವವರನ್ನು ಬಂಧಿಸಲಾಗಿದೆ.
ಬಂಧಿತರಿಂದ ಸುಮಾರು 1 ಲಕ್ಷಕ್ಕೂ ಹೆಚ್ಚು ನಗದು ಮತ್ತು 10 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಹಿರಿಯೂರು ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಕಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು