News Karnataka Kannada
Tuesday, April 16 2024
Cricket
ಕರ್ನಾಟಕ

ಕೋವಿಡ್ ಸಂದರ್ಭದಲ್ಲೂ ಮಾನವೀಯತೆ ಮರೆತ ಬಿಜೆಪಿ: ಕೆ. ಹರಿಪ್ರಸಾದ

Photo Credit :

ಕೋವಿಡ್ ಸಂದರ್ಭದಲ್ಲೂ ಮಾನವೀಯತೆ ಮರೆತ ಬಿಜೆಪಿ: ಕೆ. ಹರಿಪ್ರಸಾದ

ಕಾರವಾರ:ರಾಜ್ಯ ಸರಕಾರ ಬಿಜೆಪಿ ಸರಕಾರ  ಕೋವಿಡ್ ಹೆಸರಲ್ಲಿ ಭಾರೀ ಪ್ರಮಾಣದಲ್ಲಿ ಅವ್ಯವಹಾರ ನಡೆಸುತ್ತಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಬಿ. ಕೆ. ಹರಿಪ್ರಸಾದ ರಾಜ್ಯ ಸರಕಾದ ಮೇಲೆ ಆರೋಪ ಮಾಡಿದ್ದಾರೆ.

ಕಾರವಾರಕ್ಕೆ ಭೇಟಿ ನೀಡಿದ ಅವರು ಮಾಧ್ಯಮದವರೊಂದಿಗೆ ಮಾತನಾಡಿ ಸರಕಾರ ಕೊರೊನಾ ಸೋಂಕು ತಡೆಯುವಲ್ಲಿ ಕೇಂದ್ರ ಸರಕಾರ ಸಂಪೂರ್ಣ ವಿಫಲಾಗಿದೆ ಎಂದು ಆರೋಪಿಸಿದ ಅವರು, 2 ಸಾವಿರ ಕೋಟಿ ರೂ. ಅವ್ಯವಹಾರವಾಗಿದೆ. ಪ್ರಧಾನಿ ಮೋದಿ ಅವರು ಕೇವಲ ಭಾಷಣದಲ್ಲಿ ದಿನ ಕಳೆದಿದ್ದಾರೆ. ನಾಟಕ ಮಾಡುವುದರಲ್ಲಿ ಪ್ರಧಾನಿ ನಿಸ್ಸೀಮರು. ಗಂಟೆ, ಚಪ್ಪಾಳೆ ಬಾರಿಸಿ ದೀಪ ಹಚ್ಚಿ ನಾಟಕ ಮಾಡಿದ್ದಾರೆ ಎಂದು ಲೇವಡಿ ಮಾಡಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ರಾಜ್ಯ ಸರ್ಕಾರ ಇಂಥ ಕೊರೋನಾ ಸಾಂಕ್ರಾಮಿಕ ರೋಗದ ಸಂದರ್ಭದಲ್ಲೂ ಹಗರಣದಲ್ಲಿ ಸಿಕ್ಕಿ ಹಾಕಿಕೊಂಡಿದೆ.  ಕೊವಿಡ್ ಸಂದರ್ಭದಲ್ಲಿ ಮಾನವೀಯತೆ ಮರೆತ ಬಿಜೆಪಿ ಸರಕಾರದ ವಿರುದ್ಧ ಹೈಕೋರ್ಟ್ ನ್ಯಾಯಾಧೀಶರಿಂದ ಹಗರಣದ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದು ಸರ್ಕಾರ ಈ ಬಗ್ಗೆ ಶ್ವೇತ ಪತ್ರ ಹೊರಡಿಸಬೇಕು. ಭ್ರಷ್ಟಾಚಾರ ಆರೋಪ ಹೊತ್ತವರು ತಕ್ಷಣ ರಾಜೀನಾಮೆ ನೀಡಬೇಕು. ಹಗರಣದಲ್ಲಿ ಆರೋಪ ಕೇಳಿ ಬಂದವರು ತಕ್ಷಣದಲ್ಲೆ ರಾಜೀನಾಮೆ ಕೊಡಬೇಕೆಂದು ಆಗ್ರಹಿಸಿದರು.

ಮೂರು ತಿಂಗಳು ಘೋಷಿಸಿದ್ದ ಲಾಕ್ ಡೌನ್ ನ ಸಮಯದಲ್ಲಿ ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು ಹೆಚ್ಚಿಸಬಹುದಿತ್ತು. ಆದರೆ, ಮುಖ್ಯಮಂತ್ರಿ, ಪ್ರಧಾನಮಂತ್ರಿ ಇದರಲ್ಲಿ ವಿಫಲರಾಗಿದ್ದಾರೆ.  ಬೆಂಗಳೂರಿನಲ್ಲಿ ಸದ್ಯ ಹೆರಿಗೆಗೂ ಆಸ್ಪತ್ರೆಗಳಿಲ್ಲ. ವಯಸ್ಸಾದವರು ಆಸ್ಪತ್ರೆಗಳೆದುರು ಸತ್ತಿದ್ದಾರೆ ಎಂದು ಆರೋಪಿಸಿದರು. 

ರಾಜ್ಯ ಸರಕಾರ ಪಿಪಿಇ ಕಿಟ್, ಮಾಸ್ಕ್, ಥರ್ಮಲ್ ಸ್ಕ್ಯಾನಿರ್, ಸ್ಯಾನಿಟೈಸರ್, ಆಕ್ಸಿಜನ ಉಪಕರಣದಲ್ಲಿ ಭಾರೀ ಅವ್ಯವಹಾರ ಮಾಡಿದೆ. ಆರೋಗ್ಯ ಸಚಿವರ ಪ್ರಕಾರ 9.65 ಲಕ್ಷ ಪಿಪಿಇ ಕಿಟ್ ಗಳನ್ನು ಖರೀದಿ ಮಾಡಲಾಗಿದೆ. ಇದರಲ್ಲಿ ಮಹಾರಾಷ್ಟ್ರದ ಪ್ಲಾಸ್ಟ್ ಸರ್ಜಿ ಎಂಬ ಕಂಪೆನಿಯೊಂದಿಗೆ ಸುಮಾರು 3.50 ಲಕ್ಷ ಪಿಪಿಇ ಕಿಟ್‌ಗಳನ್ನು ಖರೀದಿ ಮಾಡಿದ್ದಾರೆ. ಇವು ಕಳಪೆ ದರ್ಜೆಯವು ಎಂದು ರಾಜ್ಯಾದ್ಯಂತ ತೀವ್ರ ಆರೋಪ ವ್ಯಕ್ತಿವಾಗಿದೆ. ಅನೇಕ ಕಡೆ ವೈದ್ಯರು ಪ್ರತಿಭಟನೆ ಮಾಡಿದ್ಆರೆ. ದೂರುಗಳು ಬಂದ ಬಳಿಕ 25 ಲಕ್ಷ ಪಿಪಿಇ ಕಿಟ್‌ಗಳನ್ನು ಸರ್ಕಾರ ವಾಪಸ್ ಪಡೆಯಿತು. ಉಳಿದವುಗಳನ್ನು ಈಗಾಗಲೇ ಬಳಸಲಾಗಿದೆ ಎಂದು ಅಪರ ನಿರ್ದೇಶಕರು ಆರೋಗ್ಯ ಇಲಾಖೆ ಆಯುಕ್ತರಿಗೆ ಬರೆದಿರುವ ಪತ್ರದಲ್ಲಿ ನಮೂದಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು