News Karnataka Kannada
Thursday, April 18 2024
Cricket
ಕರ್ನಾಟಕ

ಕೋವಿಡ್ ನಿಂದ ನರಳಾಡುತ್ತಿರುವ ತಾಯಿಯನ್ನು ಕಂಡು, ನೊಂದ ಮಗ ನೇಣಿಗೆ ಶರಣು

Photo Credit :

ಕೋವಿಡ್ ನಿಂದ ನರಳಾಡುತ್ತಿರುವ ತಾಯಿಯನ್ನು ಕಂಡು, ನೊಂದ ಮಗ ನೇಣಿಗೆ ಶರಣು

ಹಾಸನ: ಕೋವಿಡ್ ಸೋಂಕಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತನ್ನ ತಾಯಿಯ ನರಳಾಟ ಕಂಡು ಮನನೊಂದ ಪುತ್ರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನದ ಹಿಮ್ಸ್‌ ಆಸ್ಪತ್ರೆಯ ಕೋವಿಡ್ ವಿಭಾಗದ ಕಟ್ಟಡದಲ್ಲಿ ಸೋಮವಾರ ನಡೆದಿದೆ.

ಕೊಡಗು ಜಿಲ್ಲೆಯ ಸೋಮವಾರ ಪೇಟೆ ತಾಲೂಕಿನ ಶನಿವಾರಸಂತೆ ಗ್ರಾಮ ಸಮೀಪದ ಮಾದರೆಗ್ರಾಮದ ಶರತ್‌ ಕುಮಾರ್‌ (30) ಆತ್ಮಹತ್ಯೆ ಮಾಡಿಕೊಂಡವರು.

ಹಿಮ್ಸ್‌ ಆಸ್ಪತ್ರೆ 7ನೇ ಮಹಡಿಯಲ್ಲಿರುವ ನೀರಿನ ಟ್ಯಾಂಕ್‌ಗಳ ಪೈಪ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೋಮವಾರ ಬೆಳಗ್ಗೆ ಆಸ್ಪತ್ರೆ ಸಿಬ್ಬಂದಿ ಸ್ವಚ್ಛಗೊಳಿಸಲು ಹೋಗಿದ್ದಾಗ ನೀರಿನ ಪೈಪ್‌ನಲ್ಲಿ ಶವ ನೇತಾಡುತ್ತಿತ್ತು.

ಭಾನುವಾರ ರಾತ್ರಿ ತನ್ನ ಸಹೋದರ ಶಶಿಕುಮಾರ್‌ರಿಗೆ ಫೋನ್‌ ಮಾಡಿದ್ದ ಶರತ್‌ ಕುಮಾರ್‌, “ಅಮ್ಮಾ ತುಂಬಾ ನೋವು ಅನುಭವಿಸುತ್ತಿದ್ದಾರೆ. ಅದನ್ನು ನೋಡಲು ನನ್ನಿಂದ ಸಾಧ್ಯವಾಗುತ್ತಿಲ್ಲ. ನೀನು ಆಸ್ಪತ್ರೆಗೆ ಬಂದು ಅಮ್ಮನನ್ನು ನೋಡು’ಎಂದಿದ್ದರು ಎನ್ನಲಾಗಿದೆ. ಸೋಮವಾರ ಬೆಳಗ್ಗೆ ಶಶಿಕುಮಾರ್‌ ಆಸ್ಪತ್ರೆಯ ಬಳಿ ಬಂದು ಫೋನ್‌ ಮಾಡಿದಾಗ ಕರೆ ಸ್ವೀಕರಿಸಲಿಲ್ಲ. ಕೆಲ ಸಮಯದ ನಂತರ ಶರತ್‌ಕುಮಾರ್‌ ಆಸ್ಪತ್ರೆ ಕಟ್ಟಡದಲ್ಲಿಯೇ ಆತ್ಮಹತ್ಯೆ ಮಾಡಿಕೊಂಡ ವಿಷಯ ತಿಳಿದು ಶಶಿಕುಮಾರ್‌ ದುಃಖದಲ್ಲಿ ಮುಳುಗಿದ್ದರು.

ನೇಣಿಗೆ ಶರಣಾದ ವಿಷಯ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ ಮಹಜರು ನಡೆಸಿದ ನಂತರ ಆಸ್ಪತ್ರೆ ಸಿಬ್ಬಂದಿ ಶವವನ್ನು ಶವಾಗಾರಕ್ಕೆ ಸಾಗಿಸಿದರು. ಆನಂತರ ಮರಣೋತ್ತರಪರೀಕ್ಷೆ ನಡೆಸಿರುವ ಪೊಲೀಸರು, ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಮುಂದುವರಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು