News Karnataka Kannada
Wednesday, April 17 2024
Cricket
ಕರ್ನಾಟಕ

ಕೋಲಾರದಲ್ಲಿಯೂ ಆರಂಭವಾಯಿತು ಆಕ್ಸಿಜನ್ ಸೇವೆಯುಳ್ಳ ಬಸ್

Photo Credit :

ಕೋಲಾರದಲ್ಲಿಯೂ ಆರಂಭವಾಯಿತು ಆಕ್ಸಿಜನ್ ಸೇವೆಯುಳ್ಳ ಬಸ್

ಕೋಲಾರ: ಆಕ್ಸಿಜನ್​ ಕೊರತೆ ನೀಗಿಸುವ ಸಲುವಾಗಿ ಈಗಾಗಲೇ ರಾಜ್ಯದಲ್ಲಿ ಎರಡು ಕಡೆ ಆಕ್ಸಿಜನ್ ಸೇವೆಗಳ ಗಳನ್ನು ಪ್ರಾರಂಭಿಸಿದ್ದು, ಇದೀಗ ಕೋಲಾರದಎಲ್ಲಿಯೂ ಬಸ್​ ಆಕ್ಸಿಜನ್​ ಬ್ಯಾಂಕ್​ ಸೇವೆಯುಳ್ಳ ಬಸ್ ಗೆ ಚಾಲನೆ ನೀಡಲಾಗಿದೆ. 

 

ಕೋಲಾರ ಉಸ್ತುವಾರಿ ಸಚಿವ ಅರವಿಂದ ಲಿಂಬಾವಳಿ ಇಂದು (ಮಂಗಳವಾರ) ಈ ಬಸ್​ಗಳಿಗೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ‘ಜಿಲ್ಲಾಸ್ಪತ್ರೆ ‌ಹಾಗೂ ಇತರೆಡೆ ಅವಶ್ಯಕತೆ ಇದ್ದಲ್ಲಿ ಇದನ್ನು ಬಳಸಿಕೊಳ್ಳಲು ಅವಕಾಶ ಮಾಡಿಕೊಡಲಾಗುವುದು. ಕೋಲಾರ ಜಿಲ್ಲೆಯ ಮಾರುಕಟ್ಟೆಗಳಲ್ಲಿ ಕರೊನಾ ನಿಯಮಗಳನ್ನು ಅಚ್ಚುಕಟ್ಟಾಗಿ ಪಾಲಿಸಬೇಕು. ಈಗಾಗಲೇ ಜಿಲ್ಲೆಯ 826 ಗ್ರಾಮಗಳು ಕರೊನಾ ಮುಕ್ತ ಗ್ರಾಮಗಳಾಗಿ ಘೋಷಣೆ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಯಾವ ಗ್ರಾಮವು ಕರೊನಾವನ್ನು ಸಂಪೂರ್ಣವಾಗಿ ತಡೆಯುವಲ್ಲಿ ಯಶಸ್ವಿಯಾಗುತ್ತದೆಯೋ ಅದಕ್ಕೆ ಪ್ರೋತ್ಸಾಹ ಧನ ನೀಡಲಾಗುವುದು’ ಎಂದು ತಿಳಿಸಿದರು.

 

ಕೊರೊನಾ ನಿಯಂತ್ರಣದ ಜತೆಗೆ ಲಸಿಕೆ ಪಡೆಯುವುದೂ ಅಷ್ಟೇ ಅವಶ್ಯಕ. ಯಾವ ಗ್ರಾಮವು ತನ್ನೆಲ್ಲ ನಿವಾಸಿಗಳಿಗೆ ಲಸಿಕೆ ನೀಡುವಲ್ಲಿ ಸಫಲವಾಗುತ್ತದೆಯೋ ಆ ಗ್ರಾಮಕ್ಕೂ ಕೂಡ ಪ್ರೋತ್ಸಾಹ ಧನ ಹಾಗೂ ಪ್ರಶಂಸಾ ಪತ್ರ ನೀಡಲು ಜಿಲ್ಲಾಡಳಿತ ನಿರ್ಧರಿಸಿದೆ. ಕುವೈತ್​ನಿಂದ ಬಂದಿರುವ ಆಕ್ಸಿಜನ್​ನಲ್ಲಿ 20 ಟನ್ ಆಕ್ಸಿಜನ್ ಕೋಲಾರಕ್ಕೆ ನೀಡಲು ಸರ್ಕಾರ ತೀರ್ಮಾನಿಸಿದೆ ಎಂದು ಸಚಿವರು ತಿಳಿಸಿದ್ದಾರೆ.

 

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು