News Karnataka Kannada
Wednesday, April 17 2024
Cricket
ಕರ್ನಾಟಕ

ಕೋಡಿ ಬಿದ್ದ ಕೆರೆಯಿಂದ ಸೃಷ್ಟಿಯಾದ ಜಲಧಾರೆ

Photo Credit :

ಕೋಡಿ ಬಿದ್ದ ಕೆರೆಯಿಂದ ಸೃಷ್ಟಿಯಾದ ಜಲಧಾರೆ

ಬೇಲೂರು: ಬೇಲೂರು ವ್ಯಾಪ್ತಿಯಲ್ಲಿ ಮಳೆ ಸುರಿಯುತ್ತಿದ್ದು, ಪಟ್ಟಣದ ಐತಿಹಾಸಿಕ ವಿಷ್ಣು ಸಮುದ್ರ ಕೆರೆ ಭರ್ತಿಯಾಗಿರುವ ಹಿನ್ನಲೆಯಲ್ಲಿ ಬಿಷ್ಟಮ್ಮನವರಕೆರೆ ಕೋಡಿ ಬಿದ್ದು ಚಿಕ್ಕ ಹಳ್ಳದ ಮೂಲಕ ಜಲಪಾತದಂತೆ ಧುಮ್ಮಿಕ್ಕಿ ಹರಿಯುತ್ತಿದ್ದು ನೋಡುಗರ ಕಣ್ಮನ ಸೆಳೆಯುತ್ತಿದೆ.

ಕಳೆದ ಕೆಲವು ದಿನಗಳಿಂದ ಧಾರಾಕಾರ ಮಳೆಯಿಂದ ಬಿಕ್ಕೋಡು ರಸ್ತೆಯಲ್ಲಿರುವ ಬಿಷ್ಟಮ್ಮನವರ ಕೆರೆ ಸೇರಿದಂತೆ ಕೆರೆಕಟ್ಟೆಗಳಿಗೆ ನೀರು ಹರಿದು ಬರುತ್ತಿದ್ದು, ಈಗಾಗಲೇ ಹಲವು ಕೆರೆಗಳು ಭರ್ತಿಯಾಗಿವೆ. ಮಳೆಯಿಂದ ಬಿಷ್ಟಮ್ಮನವರ ಕೆರೆಯೂ ಭರ್ತಿಯಾಗಿದ್ದು ಕೋಡಿ ಬಿದ್ದಿದೆ ಇದರಿಂದಾಗಿ ನೀರು ಹಳ್ಳದ ಕಡೆ ಹರಿಯುತ್ತಿದ್ದು, ಎತ್ತರದಿಂದ ತಗ್ಗು ಪ್ರದೇಶಕ್ಕೆ ಧುಮ್ಮಿಕ್ಕುವ ದೃಶ್ಯ ಜಲಪಾತದಂತೆ ಕಂಡು ಬರುತ್ತಿದೆ.

ಇನ್ನು ನೀರು ಹರಿಯುತ್ತಿರುವ ಕಾರಣ ಬಿಷ್ಟಮ್ಮನವರ ಕೆರೆಯ ಕೆಳಭಾಗದಲ್ಲಿರುವ ಹೊಲ, ಗದ್ದೆಗಳಿಗೆ ನೀರು ತುಂಬಿದ್ದು, ಜೋಳ, ಶುಂಠಿ ಹಾಗೂ ಭತ್ತದ ಪೈರಿಗೆ ನೀರು ನುಗ್ಗಿದ ಪರಿಣಾಮ ಸಂಪೂರ್ಣ ಕೊಚ್ಚಿಹೋಗಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಈ ಕರಿತಂತೆ ಜಿಪಂ ಮಾಜಿ ಅಧ್ಯಕ್ಷ ಬಿ.ಡಿ.ಚಂದ್ರೇಗೌಡ ಮಾತನಾಡಿದ ಅವರು, ಕಳೆದ ವರ್ಷದಂತೆ ಈ ವರ್ಷವೂ ಬಿಷ್ಟಮ್ಮನವರ ಕೆರೆ ಭರ್ತಿಯಾಗಿ ಕೋಡಿ ಬಿದ್ದಿದ್ದು, ಬಿಷ್ಟಮ್ಮನವರ ತಾಯಿ ನೆಲೆಸಿರುವ ಗದ್ದಿಗೆ ಮೇಲೆ ಶುಕ್ರವಾರ ಗಂಗಾ ಮಾತೆಗೆ ವಿಶೇಷ ಪೂಜೆ ಸಲ್ಲಿಸಲಾಗುವುದು. ಅದರಂತೆ ಕಳೆದ ವರ್ಷ ರಸ್ತೆಯ ಮೇಲ್ಬಾಗದಲ್ಲಿ ನೀರು ಹರಿದ ಪರಿಣಾಮವಾಗಿ ರಸ್ತೆ ಕೆಳಭಾಗದಲ್ಲಿ ಮಣ್ಣು ಕುಸಿಯುವ ಹಂತದಲ್ಲಿತ್ತು. ಈ ಬಾರಿಯೂ ಮಳೆ ವಿಪರೀತವಾಗಿ ಸುರಿಯುತ್ತಿರುವುದರಿಂದ ಸಾಕಷ್ಟು ಹಾನಿಸಂಭವಿಸುವ ಸಾಧ್ಯತೆ ಇರುವುದರಿಂದ ತಕ್ಷಣವೇ ಅಧಿಕಾರಿಗಳು ಎಚ್ಚೆತ್ತುಕೊಂಡು ಭಾರೀ ಗಾತ್ರದ ವಾಹನಗಳು ಓಡಾಡದಂತೆ ಎಚ್ಚರವಹಿಸಬೇಕೆಂದು ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು