News Karnataka Kannada
Tuesday, April 23 2024
Cricket
ಕರ್ನಾಟಕ

ಕೊಳ್ಳೇಗಾಲದ ಕಂಟೈನ್‍ಮೆಂಟ್ ಝೋನ್‍ಗಳಿಗೆ ಔಷಧಿ ಸಿಂಪಡಣೆ

Photo Credit :

ಕೊಳ್ಳೇಗಾಲದ ಕಂಟೈನ್‍ಮೆಂಟ್ ಝೋನ್‍ಗಳಿಗೆ ಔಷಧಿ ಸಿಂಪಡಣೆ

ಕೊಳ್ಳೇಗಾಲ: ಕೋವಿಡ್-19 ಕಂಟೈನ್‍ಮೆಂಟ್ ಝೋನ್‍ಗಳಿಗೆ ಯಂತ್ರದ ಮೂಲಕ ಔಷಧಿ ಸಿಂಪಡಣೆ ಮಾಡುವಂತೆ ಮಾಜಿ ಸಚಿವ ಎನ್.ಮಹೇಶ್ ಸೂಚನೆ ನೀಡಿದ್ದಾರೆ.

ಪಟ್ಟಣದ ಹೊಸಕುರುಬರ ಬೀದಿ 2 ನೇ ಕ್ರಾಸ್ ಹಾಗೂ ಮಂಜುನಾಥನಗರ ಬಡಾವಣೆಗಳಿಗೆ ಭೇಟಿ ನೀಡಿ ಮಾತನಾಡಿದ ಅವರು, ಚಾಮರಾಜನಗರ  ಕೊರೋನಾ ಮುಕ್ತ ಜಿಲ್ಲೆಯಾಗಿತ್ತು, ಲಾಕ್‍ಡೌನ್ ತೆರವಾದ ಬಳಿಕ ಹೊರ ರಾಜ್ಯ ಹಾಗೂ ಹೊರಜಿಲ್ಲೆಗಳ ಜನ ಇಲ್ಲಿಗೆ ಬರಲು ಪ್ರಾರಂಭವಾದ ಮೇಲೆ ನಮ್ಮ ಜಿಲ್ಲೆಯಲ್ಲಿಯೂ ಕೊರೋನಾ ವೈರಸ್ ತೀವ್ರಗತಿಯಲ್ಲಿ ಹರಡುತ್ತಿದೆ. ಸುಮಾರು 205 ಸೋಂಕು ಪ್ರಕರಣ ಪತ್ತೆಯಾಗಿದೆ. ಅಲ್ಲದೆ 123 ಕಂಟೈನ್ ಮೆಂಟ್ ಝೋನ್‍ಗಳಾಗಿ ಪರಿವರ್ತಿಸಿದ್ದು ಸೋಂಕು ಹರಡದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ಹೇಳಿದರು.

ತಾಲೂಕಿನ ವ್ಯಾಪ್ತಿಯಲ್ಲಿ ಇದುವರೆಗೆ 45 ಕೊರೋನಾ ಸೋಂಕು ತಗುಲಿದ್ದ ಪ್ರದೇಶಗಳನ್ನು ಕಂಟೈನ್‍ಮೆಂಟ್ ಝೋನ್‍ಗಳನ್ನಾಗಿ ಮಾಡಿದ್ದು,  ಆ ಪ್ರದೇಶದ ಜನರ ರಕ್ಷಣೆ ಮಾಡುವಲ್ಲಿ ಜಿಲ್ಲಾಡಳಿತ ಶ್ರಮಿಸುತ್ತಿದೆ. ಸ್ವಚ್ಛತೆ ಹಾಗೂ ಔಷಧಿ ಸಿಂಪಡಿಸುವ ಮೂಲಕ ಕೊರೋನಾ ವೈರಸ್ ಬಗ್ಗೆ ಆತಂಕದಲ್ಲಿರುವ ಜನರ ರಕ್ಷಣೆ ಮಾಡಲಿರುವುದಾಗಿ ಹೇಳಿದರಲ್ಲದೆ  ಕಂಟೈನ್‍ಮೆಂಟ್ ಝೋನ್‍ಗಳಿಗೆ ಯಂತ್ರದ ಮೂಲಕ ದೂರದಿಂದ ಔಷಧಿ ಸಿಂಪಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದರು.

ಕಂಟೈನ್‍ಮೆಂಟ್ ಬಡಾವಣೆಗಳಲ್ಲಿ ವಾಸಿಸುವ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್‍ವುಳ್ಳ ಕುಟುಂಬದವರೆಗೆ ಇಂದಿನಿಂದಲೇ ಪಡಿತರವನ್ನು ವಿತರಿಸಬೇಕೆಂದು ಸೂಚಿಸಿರುವುದಾಗಿ ತಿಳಿಸಿದರು. ಪ್ರತಿಯೊಬ್ಬ ನಾಗರಿಕರು ಕೊರೋನಾ ವಿರುದ್ದ ಹೋರಾಟ ಮಾಡುವ ಮೂಲಕ ನಮ್ಮನ್ನು ನಾವೇ ರಕ್ಷಣೆ ಮಾಡಿಕೊಳ್ಳಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಕೊರೋನಾ ವೈರಸ್ ತಡೆಗಟ್ಟಲು ಸಾಧ್ಯವಾಗಲಿದೆ. ಜೊತೆಗೆ ಕಡ್ಡಾಯವಾಗಿ ಮಾಸ್ಕ್ ಧರಿಸಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ತಹಶೀಲ್ದಾರ್ ಕುನಾಲ್, ನಗರಸಭೆ ಪೌರಯುಕ್ತ ರವಿಕುಮಾರ್, ಪಿಎಸ್‍ಐ ರಾಜೇಂದ್ರ, ನಗರಸಭೆ ಸದಸ್ಯರು ರಾಮಕೃಷ್ಣ, ಪ್ರಕಾಶ್, ನಾಸೀರ್ ಷರೀಪ್, ಮುಖಂಡ ಜಗದೀಶ್ ಶಂಕನಪುರ ಸೇರಿದಂತೆ ಇತರರು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು