News Karnataka Kannada
Thursday, April 18 2024
Cricket
ಕರ್ನಾಟಕ

ಕೊಳ್ಳೇಗಾಲದಲ್ಲಿ ಸೋಂಕಿತರ ಸಾವು; ಹೊರಗಿನವರಿಗೆ ನಿರ್ಬಂಧ

Photo Credit :

ಕೊಳ್ಳೇಗಾಲದಲ್ಲಿ ಸೋಂಕಿತರ ಸಾವು; ಹೊರಗಿನವರಿಗೆ ನಿರ್ಬಂಧ

ಚಾಮರಾಜನಗರ: ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿದ್ದಂತೆಯೇ ಎರಡು ದಿನದಲ್ಲಿ ಕೊಳ್ಳೇಗಾಲ ತಾಲೂಕಿನಲ್ಲಿ ಇಬ್ಬರು ಸೋಂಕಿತರು ಮೃತಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ. ಶನಿವಾರ ಕೊಳ್ಳೇಗಾಲ ಸಮೀಪದ ಕಾಮಗೆರೆ ಗ್ರಾಮದ ವೃದ್ಧರೊಬ್ಬರು ಮೃತಪಟ್ಟಿದ್ದರೆ, ಭಾನುವಾರ ಕೊಳ್ಳೇಗಾಲ ಪಟ್ಟಣದ ದೇವಾಂಗಪೇಟೆಯ 65 ವರ್ಷದ ವೃದ್ಧರು ಮೃತಪಟ್ಟಿದ್ದಾರೆ.

ಇವರಿಗೆ 4 ದಿನಗಳ ಹಿಂದೆ ಕೊರೊನಾ ಸೋಂಕು ದೃಢಪಟ್ಟಿತ್ತು. ಹೀಗಾಗಿ ಮೈಸೂರಿನ ಅಪೆÇೀಲೋ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮೃತರು ಆರೋಗ್ಯ ಇಲಾಖೆಯ ನಿವೃತ್ತ ಅಧೀಕ್ಷಕನಾಗಿದ್ದಾರೆ. ಇವರಿಗೆ 4 ದಿನದ ಹಿಂದೆ ಕೊರೊನಾ ಸೋಂಕು ದೃಢಪಟ್ಟಿತ್ತು. ಹೀಗಾಗಿ ತಾಲೂಕು ಆಡಳಿತ ದೇವಾಂಗಪೇಟೆ ಬಡಾವಣೆಯನ್ನು ಸೀಲ್ ಡೌನ್ ಮಾಡಿತ್ತು.

ಇದೀಗ ಕೊಳ್ಳೇಗಾಲ ವ್ಯಾಪ್ತಿಯಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿರುವುದು ಮತ್ತು ಸೋಂಕಿತರ ಪೈಕಿ ಇಬ್ಬರು ಮೃತಪಟ್ಟಿರುವ ಬೆನ್ನಹಿಂದೆಯೇ ಇಲ್ಲಿನ ಹಲವು ಗ್ರಾಮಗಳಲ್ಲಿ ಗ್ರಾಮಸ್ಥರು ಸ್ವಯಂ ಲಾಕ್‍ಡೌನ್‍ಗೆ ಮುಂದಾಗಿದ್ದು, ಬೆಂಗಳೂರು ಹಾಗೂ ಮೈಸೂರಿನಿಂದ ಬರುವ ಜನಗಳಿಗೆ ನಿರ್ಬಂಧ ಹೇರಿದ್ದಾರೆ.

 

ಒಂದು ವೇಳೆ ಊರೊಳಗೆ ಪ್ರವೇಶಿಸುವುದಾದರೆ ಕೊರೋನಾ ತಪಾಸಣೆ ಮಾಡಿಸಿಕೊಂಡು ನೆಗೆಟಿವ್ ವರದಿ ದೃಢಪಡಿಸಿಕೊಂಡು ಬರುವಂತೆ ಕಟ್ಟುನಿಟ್ಟಿನ ನಿರ್ಬಂಧ ಮಾಡಿಕೊಂಡಿದ್ದಾರೆ. ಆಯಾ ಗ್ರಾಮಗಳಲ್ಲಿ ಹೊರ ರಾಜ್ಯ ಮತ್ತು ಜಿಲ್ಲೆಗಳಿಂದ ಬರುವವರನ್ನು ಊರಿಗೆ ಸೇರಿಸಿಕೊಳ್ಳಬಾರದು. ಒಂದು ವೇಳೆ ಸೇರಿಸಿಕೊಂಡರೆ 10 ಸಾವಿರ ರೂ ದಂಡ ಎಂಬ ಕ್ರಮಗಳನ್ನು ಗ್ರಾಮದ ಮುಖಂಡರು ತೆಗೆದುಕೊಂಡಿದ್ದಾರೆ. ಇಲ್ಲಿನ ಪಾಳ್ಯ ಗ್ರಾಮದ ಯಜಮಾನರು ಮತ್ತು ಗ್ರಾಮಸ್ಥರು ಗ್ರಾಮದ ರಸ್ತೆಗೆ ಮುಳ್ಳುಗಳನ್ನು ಹಾಕಿ ಹಗ್ಗವನ್ನು ಅಡ್ಡಲಾಗಿ ಕಟ್ಟಿ ಗ್ರಾಮಕ್ಕೆ ಪ್ರವೇಶ ವಿಲ್ಲ ಎಂಬ ನಾಮಫಲಕ ಬರೆದು ರಸ್ತೆ ಬಂದ್ ಮಾಡಿಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು