News Karnataka Kannada
Thursday, April 25 2024
ಕರ್ನಾಟಕ

ಕೊರೋನಾ ವಾರಿಯರ್ಸ್‍ಗಳ ಕರ್ತವ್ಯಕ್ಕೆ ಬೆದರಿಕೆವೊಡ್ಡಿದರೆ ಕ್ರಮ

Photo Credit :

ಕೊರೋನಾ ವಾರಿಯರ್ಸ್‍ಗಳ ಕರ್ತವ್ಯಕ್ಕೆ ಬೆದರಿಕೆವೊಡ್ಡಿದರೆ ಕ್ರಮ

ಚಾಮರಾಜನಗರ: ಕೋವಿಡ್–19 ನಿಯಂತ್ರಣ ಸಂಬಂಧ ಕರ್ತವ್ಯಕ್ಕಾಗಿ ನಿಯೋಜಿತರಾಗಿರುವ ಅಧಿಕಾರಿ, ಸಿಬ್ಬಂದಿ ಸೇರಿದಂತೆ ಕೊರೊನಾ ವಾರಿಯರ್ಸ್‍ಗಳ ಕರ್ತವ್ಯ ನಿರ್ವಹಣೆಗೆ ಅಡ್ಡಿ ಮಾಡುವ ಅಥವಾ ಬೆದರಿಕೆ ಹಾಕುವವರ ವಿರುದ್ಧ ಜಿಲ್ಲಾಡಳಿತ ನಿರ್ದಾಕ್ಷಿಣ್ಯವಾಗಿ ವಿಪತ್ತು ನಿರ್ವಹಣಾ ಕಾಯಿದೆ ಹಾಗೂ ಐ.ಪಿ.ಸಿ ಸೆಕ್ಷನ್ 188ರ ಪ್ರಕಾರ  ಗಂಭೀರ ಕ್ರಮ ಜರುಗಿಸಲಿದೆ ಎಂದು ಜಿಲ್ಲಾಧಿಕಾರಿಯವರಾದ ಡಾ. ಎಂ.ಆರ್. ರವಿ ಅವರು ಎಚ್ಚರಿಕೆ ನೀಡಿದ್ದಾರೆ.

ಕೋವಿಡ್ ತಡೆಗಾಗಿ ಆರೋಗ್ಯ, ಕಂದಾಯ, ಪೊಲೀಸ್, ಚೆಸ್ಕಾಂ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರು ನಿಯೋಜಿತರಾಗಿದ್ದಾರೆ. ವಿವಿಧ ಸ್ಥಳಗಳಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಹಗಲಿರುಳು ಕರ್ತವ್ಯ ನಿರ್ವಹಿಸುತ್ತಿರುವ ಈ ಎಲ್ಲರ ಮನೋಸ್ಥೈರ್ಯ ಹೆಚ್ಚಿಸುವ ದಿಸೆಯಲ್ಲಿ ಸಾರ್ವಜನಿಕರು ಸಹಕರಿಸಿ ಉತ್ತೇಜನ ನೀಡಬೇಕಿದೆ. ಆದರೆ ಇತ್ತೀಚೆಗೆ ಗುಂಡ್ಲುಪೇಟೆ ಪಟ್ಟಣದಲ್ಲಿ ಕೊರೊನಾ ಸೈನಿಕರಿಗೆ ಮಾನಸಿಕ ಧೈರ್ಯ ತುಂಬುವ ಕಾರ್ಯಕ್ರಮದಲ್ಲಿ ಅಧಿಕಾರಿಗಳ ಮುಂದೆಯೇ ಆರೋಗ್ಯ ಇಲಾಖೆ ಮಹಿಳಾ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು ಕೆಲ ಕಂಟೈನ್‍ಮೆಂಟ್ ವಲಯಗಳಲ್ಲಿ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಕೆಲವರು ತಮಗೆ ಬೆದರಿಕೆ ಹಾಕಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ.

ಕರ್ತವ್ಯ ಸಂದರ್ಭದಲ್ಲಿ ಇಂತಹ ಬೆದರಿಕೆವೊಡ್ಡಿ ಕೆಲಸಕ್ಕೆ ಅಡ್ಡಿಪಡಿಸುವುದುನ್ನು ಸಹಿಸಲಾಗುವುದಿಲ್ಲ. ಕರ್ತವ್ಯಕ್ಕೆ ಪ್ರತಿಬಂಧಿಸಿ ಹೆದರಿಸುವ ಪ್ರಕರಣಗಳು ಕಂಡುಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಉಗ್ರ ಕ್ರಮ ತೆಗೆದುಕೊಳ್ಳಲು ಜಿಲ್ಲಾಡಳಿತ ಮುಂದಾಗಲಿದೆ. ಕಂಟೈನ್‍ಮೆಂಟ್ ವಲಯವಿರಲಿ ಅಥವಾ ಆಸ್ಪತ್ರೆಯ ಆವರಣದಲ್ಲಾಗಲಿ ಕರ್ತವ್ಯ ನಿರತ ಯಾವುದೇ ಅಧಿಕಾರಿ, ಸಿಬ್ಬಂದಿಯನ್ನು ಅಡ್ಡಿಪಡಿಸುವಂತಿಲ್ಲ. ಆರೋಗ್ಯ ಮುಂಜಾಗ್ರತಾ ಕ್ರಮಗಳಿಗಾಗಿ ನೇಮಕವಾಗಿರುವವರನ್ನು ಬೆದರಿಸುವ ಅಥವಾ ಮಾರಕ ಅಸ್ತ್ರಗಳಿಂದ ಹಲ್ಲೆ ಮಾಡುವುದಾಗಿ ಹೇಳುವ ಪ್ರಕರಣಗಳು ಮರುಕಳಿಸಿದರೆ ವಿಪತ್ತು ನಿರ್ವಹಣಾ ಕಾಯಿದೆ 2005ರ ಸೆಕ್ಷನ್ 51, 56ರ ಪ್ರಕಾರ ಹಾಗೂ ಐ.ಪಿ.ಸಿ. ಸೆಕ್ಷನ್ 188ರ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ. ಕಾಯಿದೆ ಉಲ್ಲಂಘಿಸುವವರ ವಿರುದ್ಧ ಜೈಲುವಾಸ ಹಾಗೂ ದಂಡ ವಿಧಿಸುವ ಅವಕಾಶವಿದ್ದು ತಕ್ಷಣವೇ ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಕೊರೊನಾ ನಿಯಂತ್ರಣಕ್ಕಾಗಿ ದುಡಿಯುತ್ತಿರುವ ಆರೋಗ್ಯ, ಪೊಲೀಸ್, ಕಂದಾಯ, ಆಶಾ, ಅಂಗನವಾಡಿ ಕಾರ್ಯಕರ್ತೆಯರ ರಕ್ಷಣೆ ಮಾಡುವುದು ಜಿಲ್ಲಾಡಳಿತದ ಅತ್ಯಂತ ಗುರುತರ ಹೊಣೆಗಾರಿಕೆಯಾಗಿದೆ. ಕರ್ತವ್ಯನಿರತ ಸ್ಥಳದಲ್ಲಿ ಯಾರೇ ಆಗಲಿ ಬೆದರಿಕೆವೊಡ್ಡುವುದು ಅಥವಾ ಹಲ್ಲೆ ಮಾಡುವುದಾಗಿ ಹೇಳುವ ಪ್ರಕರಣಗಳು ಕಂಡುಬಂದಲ್ಲಿ ತಕ್ಷಣವೇ ತಮ್ಮ ಮೇಲಿನ ಅಧಿಕಾರಿಗಳ ಗಮನಕ್ಕೆ ತರಬೇಕು. ನಿಮ್ಮೆಲ್ಲರ ಜತೆ ಜಿಲ್ಲಾಡಳಿತ ಸದಾ ಇರುತ್ತದೆ. ಯಾವುದೇ ಗೊಡ್ಡು ಬೆದರಿಕೆಗೆ ಅಧೀರರಾಗದೆ ಧೈರ್ಯವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿಯವರಾದ ಡಾ. ಎಂ.ಆರ್. ರವಿ ಅವರು ಆತ್ಮಸ್ಥೈರ್ಯ ತುಂಬಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು