News Karnataka Kannada
Sunday, April 21 2024
Cricket
ಕರ್ನಾಟಕ

ಕೊರೊನಾ ಸೋಂಕಿತ ಗರ್ಭಿಣಿಗೆ ಕಾರವಾರದ ಕಿಮ್ಸ್ ನಲ್ಲಿ ಸುರಕ್ಷಿತ ಹೆರಿಗೆ

Photo Credit :

ಕೊರೊನಾ ಸೋಂಕಿತ ಗರ್ಭಿಣಿಗೆ ಕಾರವಾರದ ಕಿಮ್ಸ್ ನಲ್ಲಿ ಸುರಕ್ಷಿತ ಹೆರಿಗೆ

ಕಾರವಾರ:ಇಲ್ಲಿನ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಕಿಮ್ಸ್) ಯ ಕೋವಿಡ್ ವಾರ್ಡ್ ನಲ್ಲಿ ದಾಖಲಾಗಿದ್ದ ತುಂಬು ಗರ್ಭಿಣಿ ಕೊರೊನಾ ಸೋಂಕಿತೆ ಸಿಜೆರಿಯನ್ ಮುಖಾಂತರ ಆರೋಗ್ಯಕರವಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಕಾರವಾರದ ಈ ಗರ್ಭಿಣಿ ಮಹಿಳೆಯಲ್ಲಿ ಜು.22 ರಂದು ಕೋವಿಡ್ ಸೋಂಕು ದೃಢ ಪಟ್ಟಿತ್ತು. ತುಂಬು ಗರ್ಭಿಣಿಯಾಗಿದ್ದ ಅವರನ್ನು ಅದೇ ದಿನ ಕಿಮ್ಸ್ ಕೋವಿಡ್ ವಾರ್ಡ್ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಇರಿಸಿ ಆರೈಕೆ ಮಾಡಲಾಗುತ್ತಿತ್ತು. ಶನಿವಾರ ಗರ್ಭಿಣಿಗೆ ಪ್ರಸವ ವೇದನೆಯಾಗಿದ್ದು ಆದರೆ ಸಾಮಾನ್ಯ ಹೆರಿಗೆ ಸಾಧ್ಯವಾಗದ ಕಾರಣ ಕಿಮ್ಸ್ ವೈದ್ಯರು ಸಿಜೆರಿಯನ್ ಹೆರಿಗೆ ಮುಖಾಂತರ ಮಗುವನ್ನು ಹೊರ ತೆಗೆದಿದ್ದಾರೆ.

 

ಸಂಸ್ಥೆಯ ವೈದ್ಯಕೀಯ ಅಧೀಕ್ಷಕ ಡಾ. ಶಿವಾನಂದ ಕುಡ್ತರಕರ ಅವರ ನೇತೃತ್ವದಲ್ಲಿ ಸ್ತ್ರೀರೋಗ ವಿಭಾಗದ ಡಾ. ನರೇಶ ಪಾವಸ್ಕರ, ಡಾ. ಪೂಜಾ, ಅರವಳಿಕೆ ವಿಭಾಗದ ಡಾ. ಮಂಜುನಾಥ ಭಟ್ ಹಾಗೂ ಡಾ. ಅರ್ಚನಾ ಪಿಕಳೆ, ಚಿಕ್ಕ ಮಕ್ಕಳ ತಜ್ಞರಾದ ಡಾ. ವಿಶ್ವನಾಥ, ಡಾ. ವಜ್ರಮಟ್ಟಿ ಹಾಗೂ ಶುಕ್ರೂಷಕಿಯರಾದ ಜಯಶ್ರೀ ನಾಯ್ಕ, ಸುಷ್ಮಾ ನಾಯ್ಕ, ಕನ್ಸೆಪ್ಟಾ ಅಲ್ಮೆಡಾ, ಮೇಘಾ ನಾಯ್ಕ ಮತ್ತು ಓಟಿ ವಿಭಾಗದ ಸಹಾಯಕರಾದ ಸಚಿನ ಇವರುಗಳನ್ನೊಳಗೊಂಡ ತಂಡವು ಯಶಸ್ವಿಯಾಗಿ ಸಿಜೆರಿಯನ್ ಹೆರಿಗೆಯನ್ನು ನಿರ್ವಹಿಸಿದೆ. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯಕರವಾಗಿದ್ದಾರೆ ಎಂದು ಕಿಮ್ಸ್ ನಿರ್ಧೇಶಕ ಡಾ. ಗನಾನನ ನಾಯಕ ತಿಳಿಸಿದ್ದಾರೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು