News Karnataka Kannada
Wednesday, April 17 2024
Cricket
ಕರ್ನಾಟಕ

ಕೊಡಗಿನ ಜನಾನುರಾಗಿ ವೈದ್ಯ ಡಾ ಸುರೇಶ್‌

Photo Credit :

 ಕೊಡಗಿನ ಜನಾನುರಾಗಿ ವೈದ್ಯ ಡಾ ಸುರೇಶ್‌

ಮಡಿಕೇರಿ ; ದಕ್ಷಿಣ ಕೊಡಗಿನ ಹುದಿಕೇರಿ ಪ್ರಾಥಮಿಕ ಆರೋಗ್ಯಕೇಂದ್ರದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಹೆಚ್. ಎಸ್ . ಸುರೇಶ್ ಕೊರೋನ ವಾರಿಯರ್ ಆಗಿ ಅದ್ಭುತ ಕೆಲಸ ಮಾಡುತ್ತಿದ್ದಾರೆ. ಹೆಚ್ಚುವರಿ ಇವರು ಪೊನ್ನಂಪೇಟೆ ಗಿರಿಜನ ಸಂಚಾರಿ ಘಟಕದ ವೈದ್ಯರಾಗಿ ನಿಯೋಜನೆಗೊಂಡಿದ್ದು ಪೊನ್ನಂಪೇಟೆ ತಾಲ್ಲೂಕಿನ ಗಡಿ ಭಾಗ ಬಿರುನಾಣಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಯೂ ವಾರಕ್ಕೆ ಎರಡು ದಿನ ಕೆಲಸ ಮಾಡುತ್ತಾರೆ.
ಸಾಮಾನ್ಯವಾಗಿ ವೈದ್ಯರುಗಳು ಪಟ್ಟಣದಲ್ಲಿ ಇರಲು ಬಯಸುತ್ತಾರೆ. ಆದರೆ ಸುರೇಶ್ ಮೈಸೂರಿನವರು ನಗರದವರಾಗಿದ್ದರೂ ಹಳ್ಳಿಗೆ ಬಂದು ಬಾಡಿಗೆ ಮನೆಯಲ್ಲಿದ್ದು ಮೂರು ಸರ್ಕಾರೀ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಬೇಸರ ಅಲಕ್ಷ್ಯ ಮಾಡದೆ ಸೇವೆ ಸಲ್ಲಿಸುತ್ತಿದ್ದಾರೆ. ಇಂದು ಹುದಿಕೇರಿ ಪ್ರಾಥಮಿಕ ಆರೋಗ್ಯ ಕೇಂದ್ರವು ಯಾವದೇ ಖಾಸಗಿ ಆಸ್ಪತ್ರೆಯನ್ನು ಮೀರಿಸುವಂತಿರುವುದು ವೈದ್ಯ ಸುರೇಶ್‌ ಅವರ ಎರಡು ವರ್ಷಗಳ ಸೇವೆಯ ಫಲವಾಗಿದೆ.
ಆಸ್ಪತ್ರೆ ಎಂದ ಕೂಡಲೇ ನಮ್ಮ ಜೇಬಿನಲ್ಲಿ ಹಣವಿದೆಯೇ ಎಂದು ಮುಟ್ಟಿ ನೋಡಿ ನಂತರ ಮೆಟ್ಟಿಲು ಹತ್ತಬೇಕಾದ ಪರಿಸ್ಥಿತಿ ಇರುವಾಗ ಸರ್ಕಾರೀ ಆಸ್ಪತ್ರೆಗಳಲ್ಲೂ ಉತ್ತಮ ಸೇವೆ ನಿರೀಕ್ಷಿಸುವುದೇ ಗಗನ ಕುಸುಮ ಆಗಿರುವ ಈ ದಿನಗಳಲ್ಲಿ ಡಾ ಸುರೇಶ್‌ ಮತ್ತು ಸಿಬ್ಬಂದಿಗಳ ಸೇವೆ ನಿಜಕ್ಕೂ ಶ್ಲಾಘನೀಯ.
ಪುಟ್ಟ ಗುಡ್ಡ ಗಾಡು ಜಿಲ್ಲೆ ಕೊಡಗಿನಲ್ಲಿ ವೈದ್ಯರ ಕೊರತೆ ತೀವ್ರವಾಗಿದೆ. ಗ್ರಾಮೀಣ ಪ್ರದೇಶ ಆಗಿರುವುದರಿಂದ ವೈದ್ಯರುಗಳು ಇಲ್ಲಿ ಸೇವೆ ಸಲ್ಲಿಸಲು ಉತ್ತಮ ಸಂಬಳ ನೀಡಿದರೂ ಬರುವುದಕ್ಕೆ ಹಿಂದೇಟು ಹಾಕುತ್ತಾರೆ. ವೈದ್ಯರುಗಳಿಗೆ ಸರ್ಕಾರ ಗ್ರಾಮೀಣ ಸೇವೆಯನ್ನು ಕಡ್ಡಾಯ ಮಾಡಿದ್ದರೂ ಜಿಲ್ಲೆಯಲ್ಲಿ ಶೇಕಡಾ 70 ಕ್ಕೂ ಹೆಚ್ಚು ವೈದ್ಯರ ಕೊರತೆ ಇದೆ. ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಡಾ ಸುರೇಶ್‌ ಅವರಿಗೂ 15 ದಿನಗಳ ಹಿಂದೆ ಕೋವಿಡ್‌ ಪಾಸಿಟಿವ್‌ ಆಗಿತ್ತು. ಎಲ್ಲಿಗೂ ತೆರಳದೆ ಮನೆಯಲ್ಲೇ 10 ದಿನಗಳವರೆಗೆ ಚಿಕಿತ್ಸೆ ಪಾಡೆದುಕೊಂಡ ಅವರು ಮಾರನೇ ದಿನವೇ ಕರ್ತವ್ಯಕ್ಕೆ ಹಾಜರಾದರು.
ಇವರು ರೋಗಿಗಳಿಂ ದ ಯಾವುದೇ ರೀತಿಯ ಲಂಚ ಅಥವಾ ಕಾಣಿಕೆ ಸ್ವೀಕರಿಸುವುದಿಲ್ಲ. ಜನರ ಸೇವೆಯೇ ಜನಾರ್ಧನನ ಸೇವೆ ಎನ್ನುವ ಇವರು ನಿಜಕ್ಕೂ ಆರೋಗ್ಯ ಇಲಾಖೆಯ ಆಸ್ಥಿ ಆಗಿದ್ದಾರೆ. ನಿತ್ಯವೂ ಕಿತ್ತು ತಿನ್ನುವ ವೈದ್ಯರ ನಡುವೆ ಡಾ ಸುರೇಶ್‌ ರವರ ಸೇವೆ ಸಾರ್ವಜನಿಕರಲ್ಲಿ ವೈದ್ಯರ ಬಗೆಗಿನ ಗೌರವವನ್ನು ಹೆಚ್ಚಿಸುವಂತೆ ಮಾಡಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು