News Karnataka Kannada
Thursday, April 25 2024
Cricket
ಕರ್ನಾಟಕ

ಕೊಡಗಿನಲ್ಲಿ 970 ಮಂದಿ ಕೋವಿಡ್ ಸೋಂಕಿತರು ಗುಣಮುಖ

Photo Credit :

ಕೊಡಗಿನಲ್ಲಿ 970 ಮಂದಿ ಕೋವಿಡ್ ಸೋಂಕಿತರು ಗುಣಮುಖ

ಮಡಿಕೇರಿ: ಕೊಡಗಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 1250ಕ್ಕೆ ಏರಿಕೆಯಾಗಿದ್ದು, 970 ಮಂದಿ ಗುಣಮುಖರಾಗಿದ್ದಾರೆ. 263 ಸಕ್ರಿಯ ಪ್ರಕರಣಗಳಿದ್ದು, ಕಂಟೈನ್ಮೆಂಟ್ ವಲಯಗಳ ಸಂಖ್ಯೆ 226 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಬುಧವಾರ 11 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದರೆ, ಮಂಗಳವಾರ ರಾತ್ರಿ ಸೋಂಕಿಗೆ ಒಳಗಾಗಿದ್ದ ವೃದ್ಧೆಯೊಬ್ಬರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 17 ಕ್ಕೇರಿದೆ.

ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದ ಕುಶಾಲನಗರದ ಬೈಚನಹಳ್ಳಿ ನಿವಾಸಿ, 77 ವರ್ಷದ ಮಹಿಳೆ ಸಾವನ್ನಪ್ಪಿದ್ದು,  ಆಂಟಿಜೆನ್ ಕಿಟ್ ಮೂಲಕ ಪರೀಕ್ಷೆ ನಡೆಸಿದಾಗ ಇವರಲ್ಲಿ ಕೊರೊನಾ ಸೋಂಕಿರುವುದು ಪತ್ತೆಯಾಗಿದೆ.

ಜಿಲ್ಲೆಯಲ್ಲಿ ಬೆಳಗ್ಗೆ 3 ಮತ್ತು ಮಧ್ಯಾಹ್ನ 8 ಹೊಸ ಕೊರೊನಾ ಸೋಂಕು  ಪತ್ತೆಯಾಗಿದೆ. ಜಿಲ್ಲೆಯಲ್ಲಿ  ಬೆಳಗ್ಗೆ  ಕುಶಾಲನಗರ ಬಸಪ್ಪ ಲೇಔಟಿನ 45 ವರ್ಷದ ಪುರುಷ, ಸೋಮವಾರಪೇಟೆ ನೀರುಗುಂದ ಗ್ರಾಮದ ಸರ್ಕಾರಿ ಶಾಲೆ ಬಳಿಯ 21 ವರ್ಷದ ಮಹಿಳೆ ಮತ್ತು ಕುಶಾಲನಗರ ಬೈಚನಹಳ್ಳಿಯ 77 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ.

ಮಧ್ಯಾಹ್ನ ಮಡಿಕೇರಿ ಕನ್ನಂಡಬಾಣೆಯ ದೃಷ್ಠಿ ಗಣಪತಿ ದೇವಾಲಯ ಸಮೀಪದ 52 ವರ್ಷದ ಪುರುಷ, ಕೂಡಿಗೆ ಕೂಡ್ಲೂರುವಿನ ನವಗ್ರಾಮ ಬಡಾವಣೆಯ 50 ವರ್ಷದ ಪುರುಷ, 16 ವರ್ಷದ ಬಾಲಕ, 45 ಮತ್ತು 20 ವರ್ಷದ ಮಹಿಳೆಯರು, ಹೆಬ್ಬಾಲೆ ಮರೂರಿನ ಬಸವೇಶ್ವರ ಆಂಜನೇಯ ದೇವಾಲಯ ಬಳಿಯ 45 ವರ್ಷದ ಪುರುಷ,  ವಿರಾಜಪೇಟೆ ಸುಣ್ಣದಬೀದಿಯ 76 ವರ್ಷದ ಪುರುಷ, ಗೋಣಿಕೊಪ್ಪ ಪಟೇಲ್ ನಗರದ 27 ವರ್ಷದ ಪುರುಷನಲ್ಲಿ  ಸೋಂಕು ದೃಢಪಟ್ಟಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು