News Karnataka Kannada
Thursday, April 18 2024
Cricket
ಕರ್ನಾಟಕ

ಕೊಡಗಿನಲ್ಲಿ 1014 ಸೋಂಕಿತರು: ಆರೋಗ್ಯ ಸಿಬ್ಬಂದಿಗಳಿಗೆ 1 ಲಕ್ಷ ರೂ. ಪ್ರೋತ್ಸಾಹ ಧನ

Photo Credit :

ಕೊಡಗಿನಲ್ಲಿ 1014 ಸೋಂಕಿತರು: ಆರೋಗ್ಯ ಸಿಬ್ಬಂದಿಗಳಿಗೆ 1 ಲಕ್ಷ ರೂ. ಪ್ರೋತ್ಸಾಹ ಧನ

ಮಡಿಕೇರಿ: ಜಿಲ್ಲೆಯಲ್ಲಿ ಮಂಗಳವಾರ ಒಟ್ಟು 11 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ. ಸೋಂಕಿತರಲ್ಲಿ 710 ಮಂದಿ ಗುಣಮುಖರಾಗಿದ್ದು, 292 ಸಕ್ರಿಯ ಪ್ರಕರಣಗಳಿವೆ. 12 ಮರಣ ಪ್ರಕರಣಗಳು ವರದಿಯಾಗಿದೆ. ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 258 ಆಗಿದೆ.

ಮಡಿಕೇರಿ ಗೌಳಿ ಬೀದಿಯ ಹಳೆ ಇಂಡೇನ್ ಗ್ಯಾಸ್ ಕಚೇರಿ ಎದುರಿನ 30 ವರ್ಷದ ಪುರುಷ. ಸೋಮವಾರಪೇಟೆ ಆದರ್ಶ ದ್ರಾವಿಡ ಕಾಲೋನಿಯ 55 ವರ್ಷದ ಪುರುಷ. ಮಡಿಕೇರಿ ಕಾನ್ವೆಂಟ್ ರಸ್ತೆಯ ಮುತ್ತಪ್ಪ ದೇವಾಲಯ ಬಳಿಯ 47 ವರ್ಷದ ಮಹಿಳೆ. ವಿರಾಜಪೇಟೆ ಅಯ್ಮಂಗಲ ಕೊಮ್ಮೆತೋಡುವಿನ ಅಂಚೆ ಕಚೇರಿ ಬಳಿಯ 55 ವರ್ಷದ ಮಹಿಳೆ. ಮಡಿಕೇರಿ ಚಾಮುಂಡೇಶ್ವರಿ ನಗರದ ಅಂಗನವಾಡಿ ಬಳಿಯ 15 ವರ್ಷದ ಬಾಲಕ. ಮಡಿಕೇರಿ ಮಹದೇವಪೇಟೆಯ ಕಾಜಲ್ ಲೇಔಟಿನ 3 ನೇ ಬ್ಲಾಕಿನ 50 ವರ್ಷದ ಪುರುಷ. ಕುಶಾಲನಗರ ನಿಜಾಮುದ್ದೀನ್ ಲೇಔಟಿನ 37 ಮತ್ತು 40 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.

ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಮಡಿಕೇರಿ ಮಾರ್ಕೆಟ್ ರಸ್ತೆಯ ನಗರ ಆರೋಗ್ಯ ಕೇಂದ್ರ ಬಳಿಯ 62 ವರ್ಷದ ಪುರುಷ. ಮಡಿಕೇರಿ ಕನಕದಾಸ ರಸ್ತೆಯ ರಾಯಲ್ ಬಿರಿಯಾನಿ ಹೊಟೇಲ್ ಬಳಿಯ 17 ವರ್ಷದ ಪುರುಷ. ಕುಶಾಲನಗರ ಸಿದ್ದಯ್ಯ ಪುರಾಣಿಕ್ ಬಡಾವಣೆಯ 5 ವರ್ಷದ ಬಾಲಕನಿಗೆ ಸೋಂಕು ದೃಢಪಟ್ಟಿದೆ.

ಪ್ರೋತ್ಸಾಹ ಧನ

ನಗರದ ಕೋವಿಡ್ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯಕೀಯ ಸಿಬ್ಬಂದಿಗಳಿಗೆ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಪ್ರೋತ್ಸಾಹ ಧನ ವಿತರಿಸಲಾಯಿತು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ನೀಡಲಾದ 1 ಲಕ್ಷ ರೂ.ಗಳನ್ನು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ವೈದ್ಯಕೀಯ ಸಿಬ್ಬಂದಿಗಳಿಗೆ ಹಸ್ತಾಂತರಿಸಿದರು. 

ಕೋವಿಡ್ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಡಿ.ಗ್ರೂಪ್‍ನ 100 ವೈದ್ಯಕೀಯ ಸಿಬ್ಬಂದಿಗಳಿಗೆ ತಲಾ 1 ಸಾವಿರ ರೂ.  ಪ್ರೋತ್ಸಾಹ ಧನ ನೀಡಲಾಯಿತು ಎಂದು ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪಿ.ಎಂ.ಸಂದೀಪ್ ತಿಳಿಸಿದರು.

  ರೋಟರಿ ಮಿಸ್ಟಿ ಹಿಲ್ಸ್ ನೆರವನ್ನು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಶ್ಲಾಘಿಸಿದರು. ಈ ಸಂದರ್ಭ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಡಾ.ಕಾರ್ಯಪ್ಪ, ಡಾ.ಅಯ್ಯಪ್ಪ, ಮಿಸ್ಟಿ ಹಿಲ್ಸ್ ಸ್ಥಾಪಕಾಧ್ಯಕ್ಷ ಬಿ.ಜಿ.ಅನಂತಶಯನ, ಕಾರ್ಯದರ್ಶಿ ಸತೀಶ್ ಸೋಮಣ್ಣ, ಸಮುದಾಯ ಸೇವಾ ವಿಭಾಗದ ನಿರ್ದೇಶಕಿ ಗಾನಾ ಪ್ರಶಾಂತ್, ಸಾರ್ವಜನಿಕ ಸಂಪರ್ಕ ವಿಭಾಗದ ವಲಯಾಧ್ಯಕ್ಷ ಅನಿಲ್ ಎಚ್.ಟಿ. ರೆಡ್‍ಕ್ರಾಸ್ ಜಿಲ್ಲಾ ಸಭಾಧ್ಯಕ್ಷ ಬಿ.ಕೆ.ರವೀಂದ್ರ ರೈ, ನಗರ ಚೇಂಬರ್ ಅಧ್ಯಕ್ಷ ಎಂ.ಧನಂಜಯ್ ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು