News Karnataka Kannada
Sunday, April 21 2024
Cricket
ಕರ್ನಾಟಕ

ಕೊಡಗಿನಲ್ಲಿ ಸೋಂಕಿತರ ಸಂಖ್ಯೆ 978 ಕ್ಕೆ ಏರಿಕೆ : 6 ತಿಂಗಳ ಮಗುವನ್ನು ಕಾಡಿದ ಕೋವಿಡ್

Photo Credit :

ಕೊಡಗಿನಲ್ಲಿ ಸೋಂಕಿತರ ಸಂಖ್ಯೆ 978 ಕ್ಕೆ ಏರಿಕೆ : 6 ತಿಂಗಳ ಮಗುವನ್ನು ಕಾಡಿದ ಕೋವಿಡ್

ಮಡಿಕೇರಿ : ಕೊಡಗು ಜಿಲ್ಲೆಯಲ್ಲಿ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 978 ಕ್ಕೆ ಏರಿಕೆಯಾಗಿದ್ದು, ಇಲ್ಲಿಯವರೆಗೆ 648 ಮಂದಿ ಗುಣಮುಖರಾಗಿದ್ದಾರೆ. 318 ಸಕ್ರಿಯ ಪ್ರಕರಣಗಳಿದ್ದು, 12 ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 277 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಭಾನುವಾರ ಬೆಳಗ್ಗೆ 8 ಗಂಟೆ ವೇಳೆಗೆ 17 ಮತ್ತು ಮಧ್ಯಾಹ್ನ 2 ಗಂಟೆ ವೇಳೆಗೆ 10 ಹೀಗೆ ಒಟ್ಟು 27 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದೆ. ಜೋಡುಪಾಲ ಗ್ರಾಮದ 6 ತಿಂಗಳ ಮಗುವಿನಲ್ಲೂ ವೈರಸ್ ಕಾಣಿಸಿಕೊಂಡಿದೆ.

ಮಡಿಕೇರಿ ಮುತ್ತಪ್ಪ ದೇವಾಲಯ ಬಳಿಯ 40 ವರ್ಷದ ಪುರುಷ, ಮಡಿಕೇರಿ ಮದೆಯ 22 ವರ್ಷದ ಪುರುಷ, ಕುಶಾಲನಗರ ನಿಜಾಮುದ್ದೀನ್ ಲೇಔಟಿನ 14 ವರ್ಷದ ಬಾಲಕಿ ಮತ್ತು 70 ವರ್ಷದ ಪುರುಷ, ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ವಿರಾಜಪೇಟೆ ಮೀನ್ ಪೇಟೆಯ ಮಲಬಾರ್ ರಸ್ತೆಯ 35 ವರ್ಷದ ಮಹಿಳೆ ಮತ್ತು 15 ವರ್ಷದ ಬಾಲಕ, ಕುಶಾಲನಗರ ಕೂಡಿಗೆ ಮಸೀದಿ ಬಳಿಯ 49 ವರ್ಷದ ಮಹಿಳೆ, ಸೋಮವಾರಪೇಟೆ ಹೊಸ ಬಡಾವಣೆಯ ಎಂ.ಜಿ ಬ್ಲಾಕಿನ 50 ವರ್ಷದ ಮಹಿಳೆ, ವಿರಾಜಪೇಟೆ ಸಿದ್ದಾಪುರ ಕರಡಿಗೋಡುವಿನ ಚಿಕ್ಕಂದಳ್ಳಿ ಪೈಸಾರಿಯ 19 ವರ್ಷದ ಮಹಿಳೆ, ಮಡಿಕೇರಿ ಕೆ.ನಿಡುಗಣೆಯ 42 ವರ್ಷದ ಪುರುಷ, ಮಡಿಕೇರಿ ಮುತ್ತಪ್ಪ ದೇವಾಲಯ ಬಳಿಯ 27 ವರ್ಷದ ಪುರುಷ, ಮಡಿಕೇರಿ ಪತ್ರಿಕಾ ಭವನ ಬಳಿಯ 49 ವರ್ಷದ ಪುರುಷ, ಮಡಿಕೇರಿ ಮುತ್ತಪ್ಪ ದೇವಾಲಯ ಬಳಿಯ 70 ವರ್ಷದ ಪುರುಷ, ಮಡಿಕೇರಿ ಜೋಡುಪಾಲದ 6 ತಿಂಗಳ ಮಗು, ಶನಿವಾರಸಂತೆ ಮುಖ್ಯ ರಸ್ತೆಯ 40 ವರ್ಷದ ಮಹಿಳೆ, 15 ವರ್ಷದ ಬಾಲಕಿ, 78 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.

ಮಧ್ಯಾಹ್ನ 2 ಗಂಟೆ ವೇಳೆಗೆ ಸುಂಟಿಕೊಪ್ಪ ಜ್ಯೂಸ್ ಫ್ಯಾಕ್ಟರಿ ಬಳಿಯ ಮಧುರಮ ಎಕ್ಸ್ ಟೆಂಷನ್ನಿನ 24 ವರ್ಷದ ಪುರುಷ, ಸುಂಟಿಕೊಪ್ಪ ಕೆಇಬಿ ಬಳಿಯ 32 ವರ್ಷದ ಪುರುಷ, ವಿರಾಜಪೇಟೆ ಕಡಂಗಮರೂರು ಗ್ರಾಮ ಮತ್ತು ಅಂಚೆಯ 55 ವರ್ಷದ ಮಹಿಳೆ, ಗೋಣಿಕೊಪ್ಪ ಮುಖ್ಯ ರಸ್ತೆಯ ವಿನಾಯಕ ಕಾಫೀ ವಕ್ರ್ಸ್ ಬಳಿಯ 63 ವರ್ಷದ ಮಹಿಳೆ ಮತ್ತು 38 ವರ್ಷದ ಪುರುಷ, ವಿರಾಜಪೇಟೆ ಪೂಜೆ ಕಲ್ಲು ಕೆಫೆ ರೊಬಸ್ಟಾ ಬಳಿಯ 60 ವರ್ಷದ ಪುರುಷ, 14 ವರ್ಷದ ಮಹಿಳೆ ಮತ್ತು 65 ವರ್ಷದ ಪುರುಷ, ಸೋಮವಾರಪೇಟೆ ನೆಲ್ಲಿಹುದಿಕೇರಿಯ 55 ವರ್ಷದ ಮಹಿಳೆ, ಸಿದ್ದಾಪುರ ಬಿಬಿಟಿಸಿ ಎಸ್ಟೇಟಿನ 23 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು