News Karnataka Kannada
Tuesday, April 16 2024
Cricket
ಕರ್ನಾಟಕ

ಕೊಡಗಿನಲ್ಲಿ ಸೋಂಕಿತರ ಸಂಖ್ಯೆ 879 ಕ್ಕೆ ಏರಿಕೆ : 556 ಮಂದಿ ಗುಣಮುಖ

Photo Credit :

ಕೊಡಗಿನಲ್ಲಿ ಸೋಂಕಿತರ ಸಂಖ್ಯೆ 879 ಕ್ಕೆ ಏರಿಕೆ : 556 ಮಂದಿ ಗುಣಮುಖ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ 20 ಮತ್ತು ಮಧ್ಯಾಹ್ನ 39 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದರೊಂದಿಗೆ ದಿನದ ಸೋಂಕಿತರ ಸಂಖ್ಯೆ 59 ಆಗಿದ್ದು, ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 879 ಕ್ಕೆ ಏರಿಕೆಯಾಗಿದೆ.

ಈ ಪೈಕಿ 556 ಮಂದಿ ಗುಣಮುಖರಾಗಿದ್ದು,  312 ಸಕ್ರಿಯ ಪ್ರಕರಣಗಳಿವೆ. 11 ಮಂದಿ ಸಾವಿಗೀಡಾಗಿದ್ದು, ಈ ವಾರಾಂತ್ಯಕ್ಕೆ ಸೋಂಕಿತರ ಸಂಖ್ಯೆ ಸಾವಿರದ ಗಡಿ ದಾಟುವ ನಿರೀಕ್ಷೆಯಿದೆ.

ಗುರುವಾರ ಬೆಳಗ್ಗೆ ಸೋಮವಾರಪೇಟೆಯ ಬಳಗುಂದದ 88 ವರ್ಷದ ಪುರುಷ, ಸೋಮವಾರಪೇಟೆ ಶಾಂತಳ್ಳಿಯ 46 ವರ್ಷದ ಮಹಿಳೆ, ವೀರಾಜಪೇಟೆಯ ಪಂಜರಪೇಟೆ ಗಣಪತಿ ಬೀದಿಯ 29 ವರ್ಷದ ಮಹಿಳೆ, ವೀರಾಜಪೇಟೆ ಬೆಕ್ಕೆಸೊಡ್ಲೂರುವಿನ 48 ವರ್ಷದ ಮಹಿಳೆಯಲ್ಲಿ ಸೋಂಕು ಕಾಣಿಸಿಕೊಂಡಿದೆ.

ವೀರಾಜಪೇಟೆಯ ಚೆಂಬೆಬೆಳ್ಳೂರು ರಸ್ತೆಯ 55ವರ್ಷದ ಮಹಿಳೆ, ಕುಶಾಲನಗರ ಚಿಕ್ಕಣ್ಣ ಬಡಾವಣೆಯ 20 ವರ್ಷದ ಮಹಿಳೆ, ಕುಶಾಲನಗರದ ಗಂಧದಕೋಟೆಯ 27 ವರ್ಷದ ಮಹಿಳೆ ಮತ್ತು 15ವರ್ಷದ ಬಾಲಕನಲ್ಲಿ ಸೋಂಕು ದೃಢಪಟ್ಟಿದೆ

ವೀರಾಜಪೇಟೆ ಪೊನ್ನಂಪೇಟೆಯ ಕೃಷ್ಣ ಕಾಲೋನಿಯ 33 ವರ್ಷದ ಪುರುಷ, ಮಡಿಕೇರಿ ಭಗವತಿ ನಗರದ 58ವರ್ಷದ ಪುರುಷ,ಸೋಮವಾರಪೇಟೆ ಮಾದಾಪುರದ ಮುವ್ವತ್ತೊಕ್ಲು ಗ್ರಾಮದ 35ವರ್ಷದ ಪುರುಷ, ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಮಡಿಕೇರಿ ಗುಂಡೂರಾವ್ ಬಡಾವಣೆಯ 66 ವರ್ಷದ ಮಹಿಳೆ, ಮಡಿಕೇರಿ ಕಾವೇರಿ ಲೇಔಟಿನ 63ವರ್ಷದ ಮಹಿಳೆ,ಮೈಸೂರಿನ ಕುಮಾರ್ ಬಾರ್ ರಸ್ತೆಯ 44ವರ್ಷದ ಮಹಿಳೆಯಲ್ಲಿ ಸೋಂಕು ಗೋಚರಿಸಿದೆ.

ಸೋಮವಾರಪೇಟೆ ಚಾಮುಂಡೇಶ್ವರಿ ದೇವಾಲಯ ಹಿಂಭಾಗದ ಜನತಾ ಕಾಲೋನಿಯ 39ವರ್ಷದ ಮಹಿಳೆ ಮತ್ತು 36 ವರ್ಷದ ಪುರುಷ,ಮಡಿಕೇರಿ ತ್ಯಾಗರಾಜ ಕಾಲೋನಿಯ ಅಂಗನವಾಡಿ ಬಳಿಯ 18ವರ್ಷದ ಮಹಿಳೆ, ವೀರಾಜಪೇಟೆ ಕಲ್ಲುಬಾಣೆ ಅಂಚೆಯ ಅರ್ಜಿ ಗ್ರಾಮದ 48 ವರ್ಷದ ಪುರುಷ, ಮಡಿಕೇರಿ ನಿಡುಗಣೆ ಗ್ರಾಮದ 68ವರ್ಷದ ಮಹಿಳೆ,ಮಡಿಕೇರಿ  ಮೈತ್ರಿ ಹಾಲ್ ಬಳಿಯ ಪೊಲೀಸ್ ವಸತಿ ಗೃಹದ 36ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.

ಜಿಲ್ಲೆಯಲ್ಲಿ ಗುರುವಾರ ಮಧ್ಯಾಹ್ನ 2 ಗಂಟೆ ವೇಳೆಗೆ 39 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ವೀರಾಜಪೇಟೆ ತಿತಿಮತಿಯ 35 ವರ್ಷದ ಪುರುಷ ಮತ್ತು 30 ವರ್ಷದ ಮಹಿಳೆ, ವೀರಾಜಪೇಟೆ ಸುಂಕದ ಕಟ್ಟೆಯ 46 ವರ್ಷದ ಪುರುಷ, ಮರಪಾಲದ 40 ವರ್ಷದ ಪುರುಷ,  ಕಲ್ಲುಬಾಣೆ ಅರ್ಜಿ ಗ್ರಾಮದ 51 ವರ್ಷದ ಪುರುಷ, ವೀರಾಜಪೇಟೆ ವಿದ್ಯಾನಗರದ 8 ವರ್ಷದ ಬಾಲಕ, ಸಿದ್ದಾಪುರದ ಕರಡಿಗೋಡು ಗ್ರಾಮದ 56 ವರ್ಷದ ಪುರುಷ, ವೀರಾಜಪೇಟೆ ಚಿಕ್ಕಪೇಟೆಯ 32 ಮತ್ತು 20 ವರ್ಷದ ಮಹಿಳೆಯರು,   ಹೈಸೊಡ್ಲೂರು ಬೆಳ್ಳೂರು ಗ್ರಾಮದ 73 ವರ್ಷದ ಪುರುಷ, ಕಲ್ತೋಡು ಗ್ರಾಮದ ಹಾತೂರು ಕಾಲೋನಿಯ 21 ವರ್ಷದ ಪುರುಷನಲ್ಲಿ ಸೋಂಕು ಗೋಚರಿಸಿದೆ.

ಸೋಮವಾರಪೇಟೆ ತಾಲೂಕು: ಸೋಮವಾರಪೇಟೆ ಬಸವೇಶ್ವರ ರಸ್ತೆಯ 59 ವರ್ಷದ ಪುರುಷ, ನಲ್ವತ್ತೆಕ್ರೆ ಗ್ರಾಮದ ಎಸ್‍ಎನ್‍ಡಿಪಿ ಕಟ್ಟಡ ಬಳಿಯ 27 ವರ್ಷದ ಮಹಿಳೆ, ಹಾಲೇರಿಯ ಕಾಂಡನಕೊಲ್ಲಿ ಗ್ರಾಮದ 45 ವರ್ಷದ ಪುರುಷ, ನಂಜರಾಯಪಟ್ಟಣ ದಾಸವಾಳ ಪೈಸಾರಿಯ 56 ವರ್ಷದ ಪುರುಷ, ಗುಡ್ಡೆಹೊಸೂರುವಿನ 27 ವರ್ಷದ ವರ್ಷದ ಪುರುಷ, ಕುಶಾಲನಗರ ಮುತ್ತಪ್ಪ ದೇವಾಲಯ ರಸ್ತೆಯ 18 ವರ್ಷದ ಮಹಿಳೆ, ಕೂಡುಮಂಗಳೂರುವಿನ ಸಾಗರ್ ಸಾಮಿಲ್ ಬಳಿಯ 20 ವರ್ಷದ ಪುರುಷ, ದೊಡ್ಡಮಳ್ತೆ ಪಂಚಾಯತ್ ಬಳಿಯ 54 ವರ್ಷದ ಮಹಿಳೆ, ಕುಶಾಲನಗರ ಕೂಡಿಗೆಯ ಮಸೀದಿ ಬಳಿಯ 27 ವರ್ಷದ ಮಹಿಳೆ, ಕೂಡುಮಂಗಳೂರು ಜನತಾ ಕಾಲೋನಿಯ 18 ವರ್ಷದ ಮಹಿಳೆ, ಕೂಡಿಗೆಯ ಡಿಎಟಿಸಿ ವಸತಿ ಗೃಹದ 31 ವರ್ಷದ ಮಹಿಳೆ, ಕುಶಾಲನಗರ ಆದರ್ಶ ದ್ರಾವಿಡ ಕಾಲೋನಿಯ 3 ನೇ ಬ್ಲಾಕಿನ 65 ವರ್ಷದ ಮಹಿಳೆ, ದಂಡಿನಪೇಟೆಯ ಮಸೀದಿ ಬಳಿಯ 50 ವರ್ಷದ ಮಹಿಳೆ, ಸೋಮವಾರಪೇಟೆ ಚೌಡ್ಲುವಿನ 3 ವರ್ಷದ ಬಾಲಕಿ, ಬೈಚನಹಳ್ಳಿಯ ಯೋಗಾನಂದ ಬಡಾವಣೆ ಮುತ್ತಪ್ಪ ದೇವಾಲಯದ ಬಳಿಯ 21 ವರ್ಷದ ಮಹಿಳೆ, ಕುಶಾಲನಗರ ಗಂಧದಕೋಟೆಯ 73  ವರ್ಷದ ಪುರುಷ ಮತ್ತು 3 ವರ್ಷದ ಬಾಲಕನಲ್ಲಿ ಸೋಂಕು ದೃಢಪಟ್ಟಿದೆ.

ಮಡಿಕೇರಿ ತಾಲೂಕು: ಮಡಿಕೇರಿ ಹಳೆ ರೇಸ್ ಕೋರ್ಸ್ ರಸ್ತೆಯ 32 ವರ್ಷದ ಪುರುಷ,   ಮಹದೇವಪೇಟೆಯ ಚೌಡೇಶ್ವರಿ ದೇವಾಲಯ ಬಳಿಯ 35 ವರ್ಷದ ಪುರುಷ ಮತ್ತು 35 ವರ್ಷದ ಮಹಿಳೆ, ಮಡಿಕೇರಿ ಪುಟಾಣಿನಗರದ ಅಂಗನವಾಡಿ ಬಳಿಯ 34 ವರ್ಷದ ಪುರುಷ, ಮಡಿಕೇರಿ ಉಕ್ಕುಡದ 32 ವರ್ಷದ ಪುರುಷ, ಮಡಿಕೇರಿ ಅರೆಕಾಡು ಗ್ರಾಮದ 40 ವರ್ಷದ ಪುರುಷನಲ್ಲಿ ಸೋಂಕು ಕಂಡುಬಂದಿದೆ.

ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಕುಶಾಲನಗರದ ನಿಜಾಮುದ್ದೀನ್ ಲೇಔಟಿನ 6 ವರ್ಷದ ಬಾಲಕ ಮತ್ತು 41 ವರ್ಷದ ಪುರುಷ. ಮಡಿಕೇರಿ ಕತ್ತಲೆಕಾಡು ಜೇನುಕೊಲ್ಲಿ ಪೈಸಾರಿಯ 27 ವರ್ಷದ ಪುರುಷ,  ಜೋಡುಪಾಲದ 10 ನೇ ಮೈಲಿನ 27 ವರ್ಷದ ಪುರುಷ, ವೀರಾಜಪೇಟೆ ತಾಲೂಕಿನ ಗೋಣಿಕೊಪ್ಪ ಮಾಯಮುಡಿ ಬಾಳಾಜಿ ಗ್ರಾಮದ 67 ವರ್ಷದ ಪುರುಷನಲ್ಲಿ ಸೋಂಕು ದೃಢಪಟ್ಟಿದೆ.

ಇದರೊಂದಿಗೆ ಜಿಲ್ಲೆಯಲ್ಲಿನ ಕೋವಿಡ್-19 ಪ್ರಕರಣಗಳ ಸಂಖ್ಯೆ 879ರಷ್ಟಾಗಿದ್ದು, ಈ ಪೈಕಿ 556 ಮಂದಿ ಗುಣಮುಖರಾಗಿದ್ದಾರೆ. 312 ಸಕ್ರಿಯ ಪ್ರಕರಣಗಳಿದ್ದು, 11 ಮಂದಿ ಸಾವಿಗೀಡಾಗಿದ್ದಾರೆ.   ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 263 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು