News Karnataka Kannada
Wednesday, April 24 2024
Cricket
ಕರ್ನಾಟಕ

ಕೊಡಗಿನಲ್ಲಿ ಮಳೆಯ ಅರ್ಭಟದೊಂದಿಗೆ ಕೊರೊನಾ ಸೋಂಕು ಪ್ರಕರಣ ಹೆಚ್ಚಳ

Photo Credit :

ಕೊಡಗಿನಲ್ಲಿ ಮಳೆಯ ಅರ್ಭಟದೊಂದಿಗೆ ಕೊರೊನಾ ಸೋಂಕು ಪ್ರಕರಣ ಹೆಚ್ಚಳ

ಕೊಡಗು: ಜಿಲ್ಲೆಯಲ್ಲಿ ಮಳೆಯ ಆರ್ಭಟದೊಂದಿಗೆ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿದ್ದು, ಗುರುವಾರದಂದು ಮಧ್ಯಾಹ್ನದ ವೇಳೆಗೆ ಹೊಸ 25 ಪ್ರಕರಣಗಳು ಪತ್ತೆಯಾಗುವುದರೊಂದಿಗೆ, ಸೋಂಕಿತರ ಸಂಖ್ಯೆ 610ಕ್ಕೇರಿತು.

 

ಸೋಂಕಿತರಲ್ಲಿ 369 ಮಂದಿ ಗುಣಮುಖರಾಗಿದ್ದು, 231 ಸಕ್ರಿಯ ಪ್ರಕರಣಗಳಿವೆ. 10 ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 169 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

 

ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ 9 ಹೊಸ ಕೊರೊನಾ ಪ್ರಕರಣಗಳು ದೃಢಪಟ್ಟಿದೆ.ಕುಶಾಲನಗರದ ನೇತಾಜಿ ಬಡವಾಣೆಯ 19 ವರ್ಷದ ಪುರುಷ, ಪಿರಿಯಾಪಟ್ಟಣದ ಆವರ್ತಿಯ 43 ವರ್ಷದ ಪುರುಷ, ಶನಿವಾರಸಂತೆಯ ತ್ಯಾಗರಾಜ ಕಾಲೋನಿಯ 46 ವರ್ಷದ ಪುರುಷ, ವಿರಾಜಪೇಟೆಯ ಮೊಗರಗಲ್ಲಿಯ 40 ವರ್ಷದ ಮಹಿಳೆ ಮತ್ತು 22 ವರ್ಷದ ಪುರುಷ, ಕುಶಾಲನಗರದ ಮುಳ್ಳುಸೋಗೆಯ 34 ವರ್ಷದ ಪುರುಷ, ವಿರಾಜಪೇಟೆಯ 37ಮತ್ತು 45 ವರ್ಷದ ಮಹಿಳೆ, ಮಾದಾಪುರದ 48 ವರ್ಷದ ಪುರುಷನಲ್ಲಿ ಸೋಂಕು ದೃಢಪಟ್ಟಿದೆ.

 

ಮಧ್ಯಾಹ್ನ 16 ಹೊಸ ಕೊರೊನಾ ಸೊಂಕಿನ ಪ್ರಕರಣಗಳು ಪತ್ತೆಯಾಗಿದೆ. ವಿರಾಜಪೇಟೆ ತಾಲ್ಲೂಕಿನ ಕುಟ್ಟದ ಪೂಜೆಕಲ್ಲುವಿನ 65 ವರ್ಷದ ಮಹಿಳೆ, ಸೋಮವಾರಪೇಟೆ ಚೌಡ್ಲುವಿನ 14 ವರ್ಷದ ಬಾಲಕ,

 

ವಿರಾಜಪೇಟೆಯ ಕುಟ್ಟಂದಿಯ 48 ವರ್ಷದ ಪುರುಷ, ಸೋಮವಾರಪೇಟೆಯ ದೊಡ್ಡಹಣÀಕೋಡುವಿನ 55 ವರ್ಷದ ಪುರುಷ, ಚೆಟ್ಟಳ್ಳಿ ಭೂತನಕಾಡುವಿನ 45 ವರ್ಷದ ಮಹಿಳೆಯಲ್ಲಿ ಸೋಂಕು ಕಾಣಿಸಿಕೊಮಡಿದೆ.

 

ಸೋಮವಾರಪೇಟೆ ತಾಲ್ಲೂಕಿನ ಒಂಟಿಯಂಗಡಿ ಅಭ್ಯತ್ ಮಂಗಲದ 25 ವರ್ಷದ ಮಹಿಳೆ, ಕುಶಾಲನಗರದ ತೊರೆನೂರುವಿನ 44 ವರ್ಷದ ಮಹಿಳೆ, ವಿರಾಜಪೇಟೆ ವಿಜಯನಗರದ 23 ವರ್ಷದ ಮಹಿಳೆ, ವಿರಾಜಪೇಟೆ ತೆಲುಗರ ಬೀದಿಯ 52 ವರ್ಷದ ಪುರುಷ, ಪೆರುಂಬಾಡಿಯ 55 ವರ್ಷದ ಪುರುಷ ಮತ್ತು 50 ವರ್ಷದ ಮಹಿಳೆ, ತೊರೆನೂರುವಿನ 50 ವರ್ಷದ ಪುರುಷ, ಗೋಣಿಕೊಪ್ಪಲುವಿನ ಅಚ್ಚಪ್ಪ ಲೇಔಟ್ ನ 37 ವರ್ಷದ ಪುರುಷ. ಮಡಿಕೇರಿ ಗೌಳಿಬೀದಿಯ ಲೋಕಾಯುಕ್ತ ಕಟ್ಟಡದ 36 ವರ್ಷದ ಪುರುಷ, ಮಡಿಕೇರಿಯ ಪೊಲೀಸ್ ವಸತಿ ಗೃಹದ 47 ವರ್ಷದ ಪುರುಷ, ಮಡಿಕೇರಿಯ ಹೈವೇ ಹೊಟೇಲ್ ಹಿಂಭಾಗದ 25 ವರ್ಷದ ಪುರುಷನಲ್ಲಿ ಸೋಂಕು ದೃಢಪಟ್ಟಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು