News Karnataka Kannada
Thursday, April 25 2024
ಕರ್ನಾಟಕ

ಕೊಡಗಿನಲ್ಲಿ ಮಕ್ಕಳನ್ನು ಕಾಡಿದ ಕೋವಿಡ್-19 ಸೋಂಕು

Photo Credit :

ಕೊಡಗಿನಲ್ಲಿ ಮಕ್ಕಳನ್ನು ಕಾಡಿದ ಕೋವಿಡ್-19 ಸೋಂಕು

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 2348ಕ್ಕೆ ಏರಿಕೆಯಾಗಿದ್ದು, 1911 ಮಂದಿ ಗುಣಮುಖರಾಗಿದ್ದಾರೆ. 406 ಸಕ್ರಿಯ ಪ್ರಕರಣಗಳಿದ್ದು 31 ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 361 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ 34 ಮತ್ತು ಮಧ್ಯಾಹ್ನ 6 ಸೇರಿದಂತೆ ಒಟ್ಟು 40 ಹೊಸ ಪ್ರಕರಣಗಳು ದೃಢಪಟ್ಟಿದೆ ಎಂದು ಮಾಹಿತಿ ನೀಡಿದ್ದಾರೆ.

ಮಡಿಕೇರಿಯ ಗಾಳಿಬೀಡು ಕಾಲೂರುವಿನ 12 ವರ್ಷದ ಬಾಲಕಿ ಮತ್ತು 5 ವರ್ಷದ ಬಾಲಕ, ನಗರದ ಪೆನ್ ಷನ್ ಲೈನ್ ಬಡಾವಣೆಯ 9 ವರ್ಷದ ಬಾಲಕ, ಭಾಗಮಂಡಲದ 12 ವರ್ಷದ ಬಾಲಕಿ ಮತ್ತು 11 ವರ್ಷದ ಬಾಲಕನಲ್ಲಿ ಕೋವಿಡ್ ಕಾಣಿಸಿಕೊಂಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು