News Karnataka Kannada
Sunday, April 14 2024
Cricket
ಕರ್ನಾಟಕ

ಕೊಡಗಿನಲ್ಲಿ ಮಕ್ಕಳನ್ನು ಕಾಡಿದ ಕೋವಿಡ್

Photo Credit :

ಕೊಡಗಿನಲ್ಲಿ ಮಕ್ಕಳನ್ನು ಕಾಡಿದ ಕೋವಿಡ್

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಇಂದು 10 ವರ್ಷದೊಳಗಿನ ಮೂವರು ಬಾಲಕರಕ್ಕಿ ಸೋಂಕು ದೃಢ ಪಟ್ಟಿದೆ. ವಿರಾಜಪೇಟೆ ಕೊಂಡಂಗೇರಿಯ 8 ಮತ್ತು 4 ವರ್ಷದ ಇಬ್ಬರು ಬಾಲಕರು ಹಾಗೂ ಪಂಜರುಪೇಟೆಯ ಸರ್ವೋದಯ ಕಾಲೇಜು ಸಮೀಪದ 6 ವರ್ಷದ ಬಾಲಕನಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸುಂಟಿಕೊಪ್ಪ ಚೆಟ್ಟಳ್ಳಿ ರಸ್ತೆಯ ಗದ್ದೆಹಳ್ಳದ 17 ವರ್ಷದ ಬಾಲಕಿಯೂ ಸೋಂಕಿಗೆ ತುತ್ತಾಗಿದ್ದಾಳೆ.

ಜಿಲ್ಲೆಯಲ್ಲಿನ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 1217 ಆಗಿದ್ದು, 911 ಮಂದಿ ಗುಣಮುಖರಾಗಿದ್ದಾರೆ. 290 ಸಕ್ರಿಯ ಪ್ರಕರಣಗಳಿದ್ದು, 16 ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 272 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಭಾನುವಾರ ಒಟ್ಟು 22 ಕೊರೋನಾ ಪ್ರಕರಣಗಳು ದೃಢಪಟ್ಟಿದೆ.

ವಿರಾಜಪೇಟೆಯ ಬಿಳುಗುಂದದ 24 ವರ್ಷದ ಮಹಿಳೆ, ವಿದ್ಯಾನಗರ ಬ್ರೈಟ್ ಶಾಲೆ ಬಳಿಯ 28 ವರ್ಷದ ಮಹಿಳೆ, ಕೊಂಡಂಗೇರಿಯ 43 ವರ್ಷದ ಪುರುಷ, ಪಂಜರುಪೇಟೆಯ ಸರ್ವೋದಯ ಕಾಲೇಜು ಸಮೀಪದ 32 ವರ್ಷದ ಮಹಿಳೆ, ಮಡಿಕೇರಿ ಬೊಯಿಕೇರಿಯ ಸಿಂಕೋನ ಸ್ಪೈಸಸ್ ಬಳಿಯ 53 ವರ್ಷದ ಪುರುಷ, ಮಡಿಕೇರಿ ಪಾರಣೆಯ ಅಂಗನವಾಡಿ ಬಳಿಯ 29 ವರ್ಷದ ಮಹಿಳೆಗೆ ಸೋಂಕು ದೃಢ ಪಟ್ಟಿದೆ.

ರಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ವಿರಾಜಪೇಟೆ ಬಿಳುಗುಂದ ಗ್ರಾಮದ 58 ವರ್ಷದ ಪುರುಷ, ಮಡಿಕೇರಿ ಎಲ್.ಐ.ಸಿ ಎದುರಿನ ನ್ಯೂ ಎಕ್ಸ್ ಟೆಂಷನ್ ನ 43 ವರ್ಷದ ಪುರುಷ, ಮೇಕೇರಿಯ ಪೌಲ್ ರೆಸಾರ್ಟಿನ 24 ವರ್ಷದ ಪುರುಷನಿಗೆ ಸೋಂಕು ತಗುಲಿದೆ.

ಕುಶಾಲನಗರ ಬಿ.ಎಂ ರಸ್ತೆಯ 1ನೇ ಬ್ಲಾಕ್‍ನ 55 ಮತ್ತು 22 ವರ್ಷದ ಪುರುಷರು, ಆರ್.ಸಿ ಲೇಔಟಿನ 62 ವರ್ಷದ ಪುರುಷ, ಕುಶಾಲನಗರ ಬಸಪ್ಪ ಲೇಔಟಿನ 37 ವರ್ಷದ ಮಹಿಳೆ, ಪೊಲೀಸ್ ಠಾಣೆ ಹಿಂಭಾಗದ 50 ವರ್ಷದ ಮಹಿಳೆ, ಸೋಮೇಶ್ವರ ಬಡಾವಣೆಯ 30 ವರ್ಷದ ಪುರುಷ, ಮಡಿಕೇರಿ ನ್ಯೂ ಎಕ್ಸ್ ಟೆಂಷನ್‍ನ 60 ವರ್ಷದ ಪುರುಷನಲ್ಲಿ ಸೋಂಕು ಇರುವುದು ತಿಳಿದು ಬಂದಿದೆ.

ರಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಮಡಿಕೇರಿ ವೈದ್ಯಕೀಯ ಕಾಲೇಜಿನ ಬೋಧಕೇತರ ಸಿಬ್ಬಂದಿ ವಸತಿಗೃಹದ 21 ವರ್ಷದ ಮಹಿಳೆ ಮತ್ತು ಮೈಸೂರು ಜಿಲ್ಲೆ ಎಚ್.ಡಿಕೋಟೆಯ 22 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು