News Karnataka Kannada
Tuesday, April 23 2024
Cricket
ಕರ್ನಾಟಕ

ಕೊಡಗಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 1724 ಕ್ಕೆ ಏರಿಕೆ : ಮಕ್ಕಳಲ್ಲಿ ಸೋಂಕು

Photo Credit :

ಕೊಡಗಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 1724 ಕ್ಕೆ ಏರಿಕೆ : ಮಕ್ಕಳಲ್ಲಿ ಸೋಂಕು

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 1724 ಕ್ಕೆ ಏರಿಕೆಯಾಗಿದ್ದು, 1319 ಮಂದಿ ಗುಣಮುಖರಾಗಿದ್ದಾರೆ. 382 ಸಕ್ರಿಯ ಪ್ರಕರಣಗಳಿದ್ದು, 23 ಮರಣ ಪ್ರಕರಣಗಳು ವರದಿಯಾಗಿದೆ.

ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 279 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಭಾನುವಾರ ಬೆಳಗ್ಗೆ 22 ಹಾಗೂ ಮಧ್ಯಾಹ್ನ 22 ಸೇರಿದಂತೆ ಒಟ್ಟು 44 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ.

ವಿರಾಜಪೇಟೆ ತಾಲ್ಲೂಕಿನಲ್ಲಿ ಇಂದು ಹೆಚ್ಚಿನ ಸಂಖ್ಯೆಯ ಸೋಂಕಿತರು ಕಂಡು ಬಂದಿದ್ದು, ಗೋಣಿಕೊಪ್ಪ ಅರವತ್ತೊಕ್ಲುವಿನ ಮಸೀದಿ ಬಳಿಯ 33 ವರ್ಷದ ಮಹಿಳೆ ಮತ್ತು 57 ವರ್ಷದ ಪುರುಷ, ಕಾಫಿ ಬೋರ್ಡ್ ಬಳಿಯ 31 ವರ್ಷದ ಪುರುಷ, ಗೋಣಿಕೊಪ್ಪದ ಕೋಣನಕಟ್ಟೆ ಮಾರಿಯಮ್ಮ ದೇವಾಲಯ ಬಳಿಯ 24 ವರ್ಷದ ಮಹಿಳೆ, 2ನೇ ಬ್ಲಾಕಿನ 77 ವರ್ಷದ ಮಹಿಳೆ, ಕುಟ್ಟದ ಸಿಂಕೋನ ಗ್ರಾಮದ 38 ವರ್ಷದ ಮಹಿಳೆ, ಅಂಗನವಾಡಿ ಬಳಿಯ 57 ವರ್ಷದ ಪುರುಷ, ವಿರಾಜಪೇಟೆ ಕಲ್ಲುಬಾಣೆಯ ವಾಟರ್ ಟ್ಯಾಂಕ್ ಸಮೀಪದ 61 ವರ್ಷದ ಮಹಿಳೆ, ಪೊಲೀಸ್ ವಸತಿಗೃಹದ 53 ವರ್ಷದ ಪುರುಷ, ಮುತ್ತಪ್ಪ ದೇವಾಲಯ ಬಳಿಯ 29 ವರ್ಷದ ಮಹಿಳೆ, ತಿತಿಮತಿಯ ಹೆಬ್ಬಾಲೆ ಗ್ರಾಮದ ದೇವರಪುರದ 58 ವರ್ಷದ ಮಹಿಳೆ, ಸಿಗೇತೋಡುವಿನ ಆರ್.ಎಂ.ಸಿ ಬಳಿಯ 42 ವರ್ಷದ ಪುರುಷ ಮತ್ತು 6 ವರ್ಷದ ಬಾಲಕಿ, ವಿಜಯನಗರ 1ನೇ ಹಂತದ 36 ವರ್ಷದ ಪುರುಷ, ಗೋಣಿಕೊಪ್ಪದ ಎಚ್.ಸಿ ಪುರ ಟೆಲಿಫೋನ್ ಎಕ್ಸ್ ಚೇಂಚ್ ಬಳಿಯ 19 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.
::: ಮಕ್ಕಳಲ್ಲಿ ಸೋಂಕು :::
ಕೊಡ್ಲಿಪೇಟೆ ದೊಡ್ಡಕೊಡ್ಲಿಯ ಅರ್ಕನಹಳ್ಳಿ ಗ್ರಾಮದ 5 ವರ್ಷದ ಬಾಲಕಿ, ವಿರಾಜಪೇಟೆ ಸಿಗೇತೋಡುವಿನ ಆರ್.ಎಂ.ಸಿ ಬಳಿಯ 6 ವರ್ಷದ ಬಾಲಕಿ ಹಾಗೂ ಮಡಿಕೇರಿ ಭಗವತಿ ನಗರದ 9 ವರ್ಷದ ಬಾಲಕಿಯಲ್ಲಿ ಸೋಂಕು ಇರುವುದು ಕಂಡು ಬಂದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು