News Karnataka Kannada
Thursday, April 18 2024
Cricket
ಕರ್ನಾಟಕ

ಕೊಡಗಿನಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 1741 ಏರಿಕೆ

Photo Credit :

ಕೊಡಗಿನಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 1741 ಏರಿಕೆ

ಮಡಿಕೇರಿ: ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ 8 ಗಂಟೆ ವೇಳೆಗೆ 2 ಮತ್ತು ಮಧ್ಯಾಹ್ನ 2 ಗಂಟೆ ವೇಳೆಗೆ 15 ಸೇರಿದಂತೆ ಒಟ್ಟು 17 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

ಒಟ್ಟು ಪ್ರಕರಣಗಳ ಸಂಖ್ಯೆ 1741 ಆಗಿದ್ದು, 1391 ಮಂದಿ ಗುಣಮುಖರಾಗಿದ್ದಾರೆ. 327 ಸಕ್ರಿಯ ಪ್ರಕರಣಗಳಿದ್ದು, 23 ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್‍ಮೆಂಟ್ ವಲಯಗಳ ಸಂಖ್ಯೆ 286 ಆಗಿದೆ ಎಂದು ಮಾಹಿತಿ ನೀಡಿದ್ದಾರೆ.

ಮಡಿಕೇರಿ ಚೇರಂಬಾಣೆ ಕೊಳಗದಾಳುವಿನ 63 ವರ್ಷದ ಪುರುಷ. ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಸೋಮವಾರಪೇಟೆ ಮಾದಾಪುರದ ಎಸ್.ಎಂ.ಸಿ.ಲೇಔಟಿನ ಜಂಬೂರು ಬಾಣೆಯ 62 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.

ವಿರಾಜಪೇಟೆ ಬಾಳೆಲೆಯ ಗಂಧದಗುಡಿ ಕಾಲೋನಿಯ 27 ವರ್ಷದ ಪುರುಷ. ವಿರಾಜಪೇಟೆ ಮಹಿಳಾ ಸಮಾಜ ಬಳಿಯ ರೋಟರಿ ಶಾಲೆ ಎದುರಿನ 59 ವರ್ಷದ ಪುರುಷ. ವಿರಾಜಪೇಟೆ ಚರ್ಚ್ ರಸ್ತೆಯ ಕಾನ್ವೆಂಟ್ ಬಳಿಯ 71 ವರ್ಷದ ಪುರುಷ. ವಿರಾಜಪೇಟೆ ಸಿದ್ದಾಪುರ ಗ್ರಾಮದ ಕೆನರಾ ಬ್ಯಾಂಕ್ ಎದುರಿನ 63 ವರ್ಷದ ಪುರುಷ. ವಿರಾಜಪೇಟೆ ಮಾಲ್ದಾರೆ ಅಂಚೆಯ ಗುಡ್ಲೂರು ಶಾಲೆ ಬಳಿಯ 33 ವರ್ಷದ ಪುರುಷ. ವಿರಾಜಪೇಟೆ ಪಿಡಬ್ಲ್ಯೂಡಿ ವಸತಿಗೃಹದ 28 ವರ್ಷದ ಪುರುಷ. ವಿರಾಜಪೇಟೆ ಮೀನುಪೇಟೆಯ ಪೆÇಲೀಸ್ ವಸತಿಗೃಹದ 48 ವರ್ಷದ ಪುರುಷ. ಪಾಲಿಬೆಟ್ಟ ಕಲ್ಲುಕೊರೆಯ ದುಬಾರೆಯ ಗಣಪತಿ ದೇವಾಲಯ ಬಳಿಯ 76 ವರ್ಷದ ಮಹಿಳೆ. ಪಾಲಿಬೆಟ್ಟ ಟಾಟಾ ಕಾಫೀ ಎಸ್ಟೇಟಿನ ಹೊಸಹಳ್ಳಿ ವಸತಿಗೃಹದ 30 ವರ್ಷದ ಪುರುಷ. ಕುಶಾಲನಗರ ಬಿಎಂ ರಸ್ತೆಯ ರೋಟರಿ ಕ್ಲಬ್ ಎದುರಿನ 73 ವರ್ಷದ ಪುರುಷ ಮತ್ತು 17 ವರ್ಷದ ಬಾಲಕಿ.

ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ವಿರಾಜಪೇಟೆ ಚಿಕ್ಕಮಂದೂರು ಗ್ರಾಮ ಮತ್ತು ಅಂಚೆಯ ಅಚ್ಚುನಾಯಕ ದೇವಾಲಯ ಬಳಿಯ 40 ವರ್ಷದ ಪುರುಷ. ಸೋಮವಾರಪೇಟೆ ನೆಲ್ಲಿಹುದಿಕೇರಿಯ ಚರ್ಚ್ ಸೈಡಿನ 11 ವರ್ಷದ ಬಾಲಕ. ಕುಶಾಲನಗರದ ಬಸವೇಶ್ವರ ಬಡಾವಣೆಯ ಜನತಾ ಕಾಲೋನಿಯ 19 ವರ್ಷದ ಪುರುಷ. ಸುಂಟಿಕೊಪ್ಪ ಕೂರ್ಗಳ್ಳಿ ಎಸ್ಟೇಟ್ ವಸತಿ ಗೃಹದ 53 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು