News Karnataka Kannada
Thursday, April 25 2024
Cricket
ಕರ್ನಾಟಕ

ಕೊಡಗಿನಲ್ಲಿ ಕೊರೋನಾ : ಸಾವಿನ ಸಂಖ್ಯೆ 4 ಕ್ಕೆ ಏರಿಕೆ

Photo Credit :

ಕೊಡಗಿನಲ್ಲಿ ಕೊರೋನಾ : ಸಾವಿನ ಸಂಖ್ಯೆ 4 ಕ್ಕೆ ಏರಿಕೆ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 239 ಕ್ಕೆ ಏರಿಕೆಯಾಗಿದ್ದು, ಇಂದು ವೃದ್ಧೆಯೊಬ್ಬರು ಸೋಂಕಿನಿಂದ ಸಾವಿಗೀಡಾಗಿದ್ದಾರೆ.

::: ವೃದ್ಧೆ ಸಾವು :::

ಇಂದು ಬೆಳಗ್ಗೆ ಸೋಮವಾರಪೇಟೆ ತಾಲ್ಲೂಕು ತೊರೆನೂರು ಗ್ರಾಮದ ನಿಯಂತ್ರಿತ ಪ್ರದೇಶದಲ್ಲಿ ವಾಸವಿದ್ದ 90 ವರ್ಷದ ವೃದ್ಧೆಯೊಬ್ಬರು ಮೃತಪಟ್ಟಿದ್ದಾರೆ. ತಕ್ಷಣ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.

ಮೃತರಿಗೆ ಬೇರಾವುದೇ ರೋಗ ಲಕ್ಷಣಗಳಿಲ್ಲ ಮತ್ತು ಕೋವಿಡ್ ಸೋಂಕು ದೃಢಪಟ್ಟಿರುವುದರಿಂದ ಇದನ್ನು ಕೋವಿಡ್ ಸಂಬಂಧಿತ ಮರಣ ಎಂದು ನಿರ್ಧರಿಸಿ ಸರ್ಕಾರದ ಮಾರ್ಗಸೂಚಿಯನುಸಾರ ಅಂತ್ಯ ಸಂಸ್ಕಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 239ಕ್ಕೇರಿದ್ದು, ಇವರಲ್ಲಿ 141 ಮಂದಿ ಗುಣಮಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. 94 ಸಕ್ರಿಯ ಪ್ರಕರಣಗಳಿದ್ದು, ಇಲ್ಲಿಯವರೆಗೆ ನಾಲ್ವರು ಸಾವಿಗೀಡಾಗಿದ್ದಾರೆ.

ಸೋಮವಾರಪೇಟೆ ತಾಲೂಕಿನ ಸುಂಟಿಕೊಪ್ಪದ ಎಮ್ಮೆಗುಂಡಿ ರಸ್ತೆಯ ಸೋಂಕಿತನ ಪ್ರಾಥಮಿಕ ಸಂಪರ್ಕ ಹೊಂದಿದ್ದ 55 ಹಾಗೂ 28 ವರ್ಷದ ಮಹಿಳೆಯರು ಹಾಗೂ 3 ವರ್ಷದ ಬಾಲಕನಲ್ಲಿ ಸೋಂಕು ದೃಢಪಟ್ಟಿದ್ದು, ಕುಶಾಲನಗರದ ಬೈಚನಹಳ್ಳಿಯ ಡೀಸೆಲ್ ಕೇರ್ ಮುಂಭಾಗದ 64 ವರ್ಷದ ಮಹಿಳೆಯಲ್ಲೂ ಸೋಂಕು ಕಾಣಿಸಿಕೊಂಡಿದೆ. ಈಕೆಗೆ ಮೈಸೂರಿನ ಸೋಂಕಿತರ ಪ್ರಾಥಮಿಕ ಸಂಪರ್ಕದಿಂದ ಸೋಂಕು ತಗಲಿರುವುದಾಗಿ ಹೇಳಲಾಗಿದೆ.

ವೀರಾಜಪೇಟೆ ತಾಲೂಕಿನ ವಿವಿಧೆಡೆಗಳಲ್ಲಿ ಗುರುವಾರ 8 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಗೋಣಿಕೊಪ್ಪದ ಅಚ್ಚಪ್ಪ ಲೇಔಟ್‍ನ ಸೋಂಕಿತರ ಪ್ರಾಥಮಿಕ ಸಂಪರ್ಕ ಹೊಂದಿದ್ದ 23, 58 ಹಾಗೂ 63 ವರ್ಷದ ಮಹಿಳೆಯರು ಹಾಗೂ 57 ವರ್ಷದ ಪುರುಷನಲ್ಲಿ ಸೋಂಕು ದೃಢಪಟ್ಟಿದ್ದು, ವೀರಾಜಪೇಟೆ ತಾಲೂಕಿನ ಲಕ್ಕುಂದ ಗ್ರಾಮದ 20 ವರ್ಷದ ಮಹಿಳೆ, ಬೆಂಗಳೂರು ಪ್ರಯಾಣದ ಇತಿಹಾಸವಿರುವ ವೀರಾಜಪೇಟೆ ಅಪ್ಪಯ್ಯ ಸ್ವಾಮಿ ರಸ್ತೆಯ 26 ವರ್ಷದ ಮಹಿಳೆಯಲ್ಲಿ ಸೋಂಕು ಕಂಡುಬಂದಿದೆ.

ಮತ್ತೊಂದೆಡೆ  ಗೋಣಿಕೊಪ್ಪಲು ಸಮೀಪದ ಅರುವತ್ತೊಕ್ಲುವಿನ ವಿದ್ಯಾನಿಕೇತನ ರಸ್ತೆಯ 39 ವರ್ಷದ ಆರೋಗ್ಯ ಕಾರ್ಯಕರ್ತೆ ಹಾಗೂ ಆಕೆಯ 43 ವರ್ಷದ ಪತಿಯಲ್ಲಿ ಸೋಂಕು ದೃಢಪಟ್ಟಿದ್ದು, ಇನ್ನೊಂದೆಡೆ ಮಡಿಕೇರಿಯ ದೇಚೂರು ಗಣಪತಿ ದೇವಸ್ಥಾನ ಬಳಿಯ ಜ್ವರ ಲಕ್ಷಣವಿದ್ದ 21 ವರ್ಷದ ಯುವಕನಲ್ಲೂ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

::: ನಿಯಂತ್ರಿತ ಪ್ರದೇಶಗಳು :::

ಜಿಲ್ಲೆಯಲ್ಲಿ ಗುರುವಾರ ಹೊಸದಾಗಿ ಕುಶಾಲನಗರ ಬೈಚನಹಳ್ಳಿಯ ಡೀಸೆಲ್ ಕೇರ್ ಮುಂಭಾಗ, ಮಡಿಕೇರಿ ದೇಚೂರು ಗಣಪತಿ ದೇವಸ್ಥಾನ ಬಳಿ,  ವೀರಾಜಪೇಟೆಯ ಅಪ್ಪಯ್ಯ ಸ್ವಾಮಿ ರಸ್ತೆ ಹಾಗೂ ಗೋಣಿಕೊಪ್ಪ ಅರುವತ್ತೊಕ್ಲುವಿನ ವಿದ್ಯಾನಿಕೇತನ ರಸ್ತೆಯಲ್ಲಿ ನಿಯಂತ್ರಿತ ಪ್ರದೇಶಗಳನ್ನು ತೆರೆಯಲಾಗಿದ್ದು, ಇದರೊಂದಿಗೆ ನಿಯಂತ್ರಿತ ಪ್ರದೇಶಗಳ ಸಂಖ್ಯೆ 101ಕ್ಕೇ ಏರಿಕೆಯಾಗಿದೆ. ಮಡಿಕೇರಿಯ ಡೈರಿ ಫಾರಂ ಹಾಗೂ ಗೋಣಿಕೊಪ್ಪದ ಕೆಇಬಿ ರಸ್ತೆಯ ನಿಯಂತ್ರಿತ ಪ್ರದೇಶಗಳನ್ನು ಗುರುವಾರದಿಂದ ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು