News Karnataka Kannada
Monday, April 22 2024
Cricket
ಕರ್ನಾಟಕ

ಕೊಡಗಿನಲ್ಲಿ ಕೊರೊನಾ ಸೋಂಕಿನಿಂದ 201 ಮಂದಿ ಗುಣಮುಖ

Photo Credit :

ಕೊಡಗಿನಲ್ಲಿ ಕೊರೊನಾ ಸೋಂಕಿನಿಂದ 201 ಮಂದಿ ಗುಣಮುಖ

ಮಡಿಕೇರಿ: ಕೊರೊನಾ ಸೋಂಕಿನ ಒಂದು ಪ್ರಕರಣವಷ್ಟೆ ಇಂದು ಕೊಡಗು ಜಿಲ್ಲೆಯಲ್ಲಿ ದಾಖಲಾಗಿದ್ದು,  ಒಟ್ಟು ಪ್ರಕರಣಗಳಲ್ಲಿ 201 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಇಂದು ವಿರಾಜಪೇಟೆ ತಾಲ್ಲೂಕಿನ ತೊತ್ತೇರಿ ಗ್ರಾಮದ ಸೋಂಕಿತ ಪ್ರಕರಣದ ಸಂಪರ್ಕಕ್ಕೆ ಬಂದಿದ್ದ 63 ವರ್ಷ ಪ್ರಾಯದ ಮಹಿಳೆಯಲ್ಲಿ ಕೊರೊನಾ ಸೋಂಕು ದೃಢ ಪಟ್ಟಿದೆ.

ಜಿಲ್ಲಾ ವ್ಯಾಪ್ತಿಯಲ್ಲಿ ಇಲ್ಲಿಯವರೆಗೆ 282 ಸೋಂಕಿತ ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿನ 5 ಪ್ರಕರಣಗಳಲ್ಲಿ ಸಾವು ಸಂಭವಿಸಿದೆ. ಸೋಂಕಿತ ಪ್ರಕರಣಗಳಿಗೆ ಸಮಬಂಧಿಸಿದಂತೆ ಒಟ್ಟು 108 ನಿರ್ಬಂಧಿತ ಪ್ರದೇಶಗಳನ್ನು ತೆರೆಯಲಾಗಿದೆ.

ನಿರ್ಬಂಧಿತ ಪ್ರದೇಶಗಳಾಗಿದ್ದ ಸೋಮವಾರಪೇಟೆ ತಾಲ್ಲೂಕಿನ ಬಳಗುಂದ, ಮಡಿಕೇರಿ ಜಿಲ್ಲಾ ಆಸ್ಪತ್ರೆಯ ವಸತಿ ಗೃಹ, ಕರಿಕೆಯ ಎಳ್ಳುಕೊಚ್ಚಿ,  ತಿತಿಮತಿ, ಕರಿಕೆ ಮತ್ತು ಶ್ರೀಮಂಗಲದ ಆರೋಗ್ಯ ಇಲಾಖಾ ವಸತಿ ಗೃಹಗಳ   ನಿರ್ಬಂಧವನ್ನು  ತೆಗೆದು ಹಾಕಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು