News Karnataka Kannada
Saturday, April 20 2024
Cricket
ಕರ್ನಾಟಕ

ಕೈಗೆಟುಕುವ ದರದಲ್ಲಿ ಕೋವಿಡ್ ಕೇಂದ್ರ ಅರಂಭಿಸಿದ ಬೆಳಗಾವಿಯ ಕೆಎಲ್ಇ ಮಹಿಳಾ ಸಬಲೀಕರಣ ಕೇಂದ್ರ

Photo Credit :

ಕೈಗೆಟುಕುವ ದರದಲ್ಲಿ ಕೋವಿಡ್ ಕೇಂದ್ರ ಅರಂಭಿಸಿದ ಬೆಳಗಾವಿಯ ಕೆಎಲ್ಇ ಮಹಿಳಾ ಸಬಲೀಕರಣ ಕೇಂದ್ರ

ಬೆಳಗಾವಿ; ದೇಶದ ಜನತೆಯನ್ನು ತಲ್ಲಣಗೊಳಿಸುತ್ತಿರುವ ಮಹಾಮಾರಿ ಕೋವಿಡ್ ಸೋಂಕಿನ ವಿರುದ್ಧದ ಸಮರಕ್ಕೆ ಬೆಳಗಾವಿಯ ಕೆಎಲ್ಇ ಸಂಸ್ಥೆಯ ಸ್ವಶಕ್ತಿ ಮಹಿಳಾ ಸಬಲೀಕರಣ ಕೇಂದ್ರವು ಕೈ ಜೋಡಿಸಿದೆ. ಕೋವಿಡ್ ರೋಗಿಗಳ ಆರೈಕೆಗಾಗಿ ಕೆ.ಎಲ್.ಇ ಲಿಂಗರಾಜ್ ಕ್ಯಾಂಪಸ್‌ನಲ್ಲಿ ಐಸೋಲೇಶನ್ ( ಕೋವಿಡ್ ಕೇರ್ ಸೆಂಟರ್ ) ಕೇಂದ್ರ ತೆರೆದಿದೆ.ಜಿಲ್ಲೆಯಲ್ಲಿ ಕೋವಿಡ್ ಉಲ್ಬಣಗೊಂಡಿದ್ದು, ಇತ್ತ ಆಸ್ಪತ್ರೆಗಳಲ್ಲಿ ಬೆಡ್ ಅಭಾವ ಕೂಡ ಕಾಡುತ್ತಿದೆ. ಸೋಂಕಿನ ಕಡಿಮೆ ಗುಣಲಕ್ಷಣವುಳ್ಳವರನ್ನ ಐಸೋಲೇಶನ್ ಗೆ ಒಳಪಡಿಸಲು ಕೂಡ ಸಮಸ್ಯೆಯಾಗುತ್ತದೆ. ಇದನ್ನ ಮನಗಂಡಿರುವ ಕೆ ಎಲ್ ಇ ಮಹಿಳಾ ಘಟಕ, ಕೈಗೆಟುಕುವ ದರದಲ್ಲಿ ಕೋವಿಡ್ ಕೇಂದ್ರ ಪ್ರಾರಂಭಿಸಿದೆ.
ಈ ಕೇಂದ್ರದಲ್ಲಿ ಉಳಿಯುವ ರೋಗಿಗಳ ಹಾಗೂ ಸಂಬಂಧಿಕರ ಜೊತೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಜ್ಯೂಮ್ ಆ್ಯಪ್ ಬಳಸಲಾಗುತ್ತಿದೆ. ಸಂಬಂಧಿಕರಿಗೆ ಹಾಗೂ ರೋಗಿಗಳಿಗೆ ಕೇಂದ್ರದಲ್ಲಿರುವ ಎರಡು ಪ್ರತ್ಯೇಕ ಕೊಠಡಿಯಲ್ಲಿ ಜ್ಯೂಮ್ ಆ್ಯಪ್ ಬಳಸುವ ವ್ಯವಸ್ಥೆ ಮಾಡಲಾಗಿದೆ.ಪ್ರತಿ ನಿತ್ಯ ಮನೆಯವರ ಜೊತೆ ಮಾತನಾಡುವ ಅವಕಾಶ ಮಾಡಿಕೊಡಲಾಗುತ್ತಿದೆ. ಇದರಿಂದ ರೋಗಿ ಹಾಗೂ ಅವರ ಸಂಬಂಧಿಕರ ಮಾನಸಿಕ ಸ್ಥೈರ್ಯ ಹೆಚ್ಚಿಸುವ ಪ್ರಯತ್ನ ಮಾಡುತ್ತಿದೆ.
ಇಲ್ಲಿ ದಾಖಲಾಗುವವರಿಗೆ ಆರೋಗ್ಯಯುತ ಹಾಗೂ ಗುಣಮಟ್ಟದ ಮುಂಜಾನೆ ,ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ ಹೊತ್ತು ಊಟ ಮತ್ತಯ ಸಂಜೆ ಚಹಾ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು