News Karnataka Kannada
Monday, April 22 2024
Cricket
ಕರ್ನಾಟಕ

ಕೇರಳ ಸಚಿವಾಲಯದಲ್ಲಿ ಬೆಂಕಿ ಪ್ರಕರಣ: ಸಮಗ್ರ ತನಿಖೆಗೆ ಒತ್ತಾಯಿಸಿ ಬಿಜೆಪಿ ಪ್ರತಿಭಟನೆ

Photo Credit :

ಕೇರಳ ಸಚಿವಾಲಯದಲ್ಲಿ ಬೆಂಕಿ ಪ್ರಕರಣ: ಸಮಗ್ರ ತನಿಖೆಗೆ ಒತ್ತಾಯಿಸಿ ಬಿಜೆಪಿ ಪ್ರತಿಭಟನೆ

ಕಾಸರಗೋಡು: ಕೇರಳ ರಾಜ್ಯ ಸಚಿವಾಲಯದಲ್ಲಿ ಮಂಗಳವಾರ ಸಂಜೆ  ನಡೆದ ಅಗ್ನಿ ಆಕಸ್ಮಿಕ ಘಟನೆ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿ ಹಾಗೂ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಅವರ ಬಂಧನ ಪ್ರತಿಭಟಿಸಿ ಬಿಜೆಪಿ ಕಾಸರಗೋಡು ಜಿಲ್ಲಾ  ನೇತೃತ್ವದಲ್ಲಿ ಇಂದು ಬೆಳಗ್ಗೆ ಕಾಸರಗೋಡು ತಾಲೂಕು ಕಚೇರಿಗೆ ಪ್ರತಿಭಟನಾ ಜಾಥಾ ನಡೆಸಿತು.

ಕರಂದಕ್ಕಾಡ್ ನಲ್ಲಿರುವ ಪಕ್ಷದ ಕಚೇರಿ ಪರಿಸರದಿಂದ ಹೋರಾಟ ಜಾಥಾವನ್ನು ತಾಲೂಕು ಕಚೇರಿ ಗೇಟ್ ಬಳಿ ಪೊಲೀಸರು ತಡೆದರು. ಪ್ರತಿಭಟನೆಯನ್ನು ಜಿಲ್ಲಾಧ್ಯಕ್ಷ ಕೆ. ಶ್ರೀಕಾಂತ್  ಉದ್ಘಾಟಿಸಿದರು. ಉಪಾಧ್ಯಕ್ಷ  ಸದಾನಂದ ರೈ  ಅಧ್ಯಕ್ಷತೆ ವಹಿಸಿದ್ದರು.

ರಾಜ್ಯ ಸಮಿತಿ ಸದಸ್ಯರಾದ ಪಿ. ಸುರೇಶ್ ಕುಮಾರ್,  ಜಿ. ಚಂದ್ರನ್, ನಗರಸಭಾ ಸದಸ್ಯೆ ಸವಿತಾ ಟೀಚರ್, ಶ್ರೀಲತಾ, ಉಮಾ  ಕಡಪ್ಪುರ, ದುಗ್ಗಪ್ಪ,  ಶಂಕರ, ಜಯಪ್ರಕಾಶ್, ಜಿಲ್ಲಾ ಸಮಿತಿ ಸದಸ್ಯ  ಮಾಧವ ಮಾಸ್ಟರ್,  ಮಂಡಲ  ಕಾರ್ಯದರ್ಶಿ  ಪಿ .ಆರ್ ಸುನಿಲ್, ಯುವ  ಮೋರ್ಚಾ ಜಿಲ್ಲಾಧ್ಯಕ್ಷ ಧನಂಜಯ ಮಧೂರು, ಕೋಶಾಧಿಕಾರಿ ಎನ್.  ಜಿತೇಶ್,  ಯೋಗೀಶ್` ಮೊದಲಾದವರು ನೇತೃತ್ವ ನೀಡಿದರು.

ಗಂಟೆಗಳ ಕಾಲ  ರಸ್ತೆಯಲ್ಲಿ ಧರಣಿ ಕುಳಿತು ಪ್ರತಿಭಟನೆ ನಡೆಸಿದ ಜಿಲ್ಲಾಧ್ಯಕ್ಷ   ಕೆ. ಶ್ರೀಕಾಂತ್, ಧನಂಜಯ ಮಧೂರು  ಮೊದಲಾದವರನ್ನು ಪೊಲೀಸರು ಬಲವಂತವಾಗಿ ಬಂಧಿಸಿ ಬಿಡುಗಡೆಗೊಳಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು