News Karnataka Kannada
Thursday, April 25 2024
ಕರ್ನಾಟಕ

ಕೇರಳ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ

Photo Credit :

ಕೇರಳ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ

ಕಾಸರಗೋಡು: ಆರೋಪಕ್ಕೆ ಸಿಲುಕಿರುವ ಮಂಜೇಶ್ವರ ಶಾಸಕ ಎಂ. ಸಿ. ಕಮರುದ್ದೀನ್ ಹಾಗೂ ಕೇರಳ ಉನ್ನತ ಶಿಕ್ಷಣ ಸಚಿವ  ಕೆ . ಟಿ ಜಲೀಲ್ ರಾಜೀನಾಮೆ   ನೀಡುವಂತೆ ಒತ್ತಾಯಿಸಿ ಬಿಜೆಪಿ ಯುವ  ಮೋರ್ಚಾ  ಜಿಲ್ಲಾ ಸಮಿತಿ  ನೇತೃತ್ವದಲ್ಲಿ ಶುಕ್ರವಾರ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಗೆ ನಡೆಸಿದ ಪ್ರತಿಭಟನಾ ಜಾಥಾ ಹಿಂಸೆಗೆ ತಿರುಗಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಜಲಫಿರಂಗಿ ಬಳಸಿದರು. ಓರ್ವ ಕಾರ್ಯಕರ್ತೆ ಗಾಯಗೊಂಡಿದ್ದಾರೆ.

ವಿದ್ಯಾನಗರ ಬಿ. ಸಿ. ರೋಡ್ ನಿಂದ ಮೆರವಣಿಗೆ  ಮೂಲಕ  ಆಗಮಿಸಿದ  ಕಾರ್ಯಕರ್ತರು ಜಿಲ್ಲಾಧಿಕಾರಿ ಗೇಟ್ ಬಳಿ ಹಾಕಲಾಗಿದ್ದ ಬ್ಯಾರಿಕೇಡ್ ಗಳನ್ನು  ದೂಡಿ ಹಾಕಿ ಮುನ್ನುಗ್ಗಲು ಯತ್ನಿಸಿದ್ದು, ಕೆಲ ಕಾರ್ಯಕರ್ತರು ಬ್ಯಾರಿಕೇಡ್ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣದೊಳಗೆ ನುಗ್ಗಲು ಯತ್ನಿಸಿದ್ದು, ಪರಿಸ್ಥಿತಿ  ನಿಯಂತ್ರಿಸಲು ಜಲಫಿರಂಗಿ ಪ್ರಯೋಗಿಸಿದರು. ಇದರಿಂದ ಓರ್ವ ಕಾರ್ಯಕರ್ತೆ ಅಂಜು ಜೋಸ್ ಗಾಯಗೊಂಡರು.

ಬಳಿಕ ನಡೆದ ಪ್ರತಿಭಟನೆಯನ್ನು ಬಿಜೆಪಿ ಜಿಲ್ಲಾಧ್ಯಕ್ಷ  ಕೆ. ಶ್ರೀಕಾಂತ್  ಉದ್ಘಾಟಿಸಿದರು. ಯುವ ಮೋರ್ಚಾ ಜಿಲ್ಲಾಧ್ಯಕ್ಷ  ಧನಂಜಯ ಮಧೂರು ಅಧ್ಯಕ್ಷತೆ ವಹಿಸಿದ್ದರು. ಅಂಜು ಜೋಸ್, ಸುಧಾಮ ಗೋಸಾಡ, ಎನ್. ಸತೀಶ್,  ಪಿ. ಆರ್ ಸುನಿಲ್, ವಿಜಯಕುಮಾರ್ ರೈ  ಮೊದಲಾದವರು ನೇತೃತ್ವ ನೀಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು