News Karnataka Kannada
Thursday, April 25 2024
Cricket
ಕರ್ನಾಟಕ

ಕೇರಳ ಗಡಿಯಲ್ಲಿ ಪ್ರವೇಶ ನಿರ್ಬಂಧ: ಪ್ರಯಾಣಿಕರ ಪರದಾಟ

Photo Credit :

ಕೇರಳ ಗಡಿಯಲ್ಲಿ ಪ್ರವೇಶ ನಿರ್ಬಂಧ: ಪ್ರಯಾಣಿಕರ ಪರದಾಟ

ಕಾಸರಗೋಡು : ಅಂತಾರಾಜ್ಯ ಸಂಚಾರಕ್ಕೆ ನಿರ್ಬಂಧವನ್ನು  ಹಿಂತೆಗೆದುಕೊಂಡು  ಕೇಂದ್ರ ಸರಕಾರ ಮಾರ್ಗಸೂಚಿ ಹೊರಡಿಸಿದ್ದರೂ ಕೇರಳ ಸರಕಾರ ಉಲ್ಲಂಘಿಸಿದ್ದು  ., ಇದರಿಂದ ಗಡಿನಾಡಿನ ಜನರು ಕರ್ನಾಟಕಕ್ಕೆ ತೆರಳಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪಾಸ್  ಹೊಂದಿರುವವರಿಗೆ ಮಾತ್ರ ಪ್ರವೇಶ ನೀಡಲಾಗುತ್ತಿದೆ. 

ಈ ನಡುವೆ ನಾಳೆ ( 25) ಕಾಸರಗೋಡು ಜಿಲ್ಲಾ ಬಿಜೆಪಿ ಕಾರ್ಯಕರ್ತರು ಪಾಸ್ ಉಲ್ಲಂಘನೆ ಹೋರಾಟ ನಡೆಸಲಿದ್ದು , ತಲಪಾಡಿ ಗಡಿ ಮೂಲಕ ಕರ್ನಾಟಕಕ್ಕೆ ಸಂಚರಿಸಲಿದ್ದಾರೆ.

ಬೆಳಿಗ್ಗೆ 10 ಗಂಟೆಗೆ ಪಾಸ್ ಇಲ್ಲದೆ ತಲಪಾಡಿ  ಗಡಿ ಮೂಲಕ ಕರ್ನಾಟಕಕ್ಕೆ ಪ್ರಯಾಣಿಸಿ ಮರಳಲು ತೀರ್ಮಾನಿಸಲಾಗಿದೆ.

ಕಾಸರಗೋಡು ಹಾಗೂ ಕೇರಳ ದ  ಇತರ ಕಡೆಗಳಿಂದ ದಿನಂಪ್ರತಿ ಸಾವಿರಾರು ಮಂದಿ ಮಂಗಳೂರು ಹಾಗೂ ರಾಜ್ಯದ ಇತರ ಕಡೆಗಳಿಗೆ ಉದ್ಯೋಗ , ವ್ಯವಹಾರ  , ಆಸ್ಪತ್ರೆ ಹಾಗೂ ಇನ್ನಿತರ ಕಾರಣಗಳಿಗಾಗಿ  ತೆರಳುತ್ತಿದ್ದಾರೆ.

ಆದರೆ ಕೇರಳ ಸರಕಾರ ಗಡಿ ತೆರೆಯಲು ಹಿಂದೇಟು  ಹಾಕಿದ್ದು , ಪಾಸ್ ಹೊಂದಿದವರಿಗೆ ಮಾತ್ರ ಅಂತಾರಾಜ್ಯ ಪ್ರಯಾಣಕ್ಕೆ ಅನುವು ಮಾಡಿ ಕೊಟ್ಟಿದೆ.

ಈ ಹಿನ್ನೆಲೆಯಲ್ಲಿ  ನಾಳೆ ( 25) ಪಾಸ್ ಉಲಂಘನೆ ಹೋರಾಟಕ್ಕೆ ಬಿಜೆಪಿ ಮುಂದಾಗಿದೆ.

ಬೆಳಿಗ್ಗೆ 10 ಗಂಟೆಗೆ ತಲಪಾಡಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕೆ . ಶ್ರೀಕಾಂತ್   ಹೋರಾಟವನ್ನು ಉದ್ಘಾಟಿಸುವರು 

 
 
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು