News Karnataka Kannada
Sunday, April 14 2024
Cricket
ಕರ್ನಾಟಕ

ಕೆ.ಆರ್.ಪೇಟೆಯಲ್ಲಿ ಕೊರೋನಾಗೆ ವೈದ್ಯ ಬಲಿ

Photo Credit :

ಕೆ.ಆರ್.ಪೇಟೆಯಲ್ಲಿ ಕೊರೋನಾಗೆ ವೈದ್ಯ ಬಲಿ

ಕೆ.ಆರ್.ಪೇಟೆ: ಪಟ್ಟಣದಲ್ಲಿ ಕ್ಲಿನಿಕ್ ನಡೆಸುತ್ತಿದ್ದ ಹಿರಿಯ ವೈದ್ಯರೊಬ್ಬರು ಕೊರೋನಾ ಸೋಂಕಿನಿಂದಾಗಿ ಮಂಗಳವಾರ  ಮೃತಪಟ್ಟಿದ್ದಾರೆ.

ತಾಲೂಕಿನ ಬೂಕನಕೆರೆ ಹೋಬಳಿಯ ಅರಳಕುಪ್ಪೆ ಗ್ರಾಮದ ದೇವಮ್ಮ-ಸಿದ್ದಲಿಂಗೇಗೌಡ ದಂಪತಿ ಪುತ್ರ ಡಾ.ಎ.ಎಸ್.ಪ್ರಕಾಶ್(64) ಮೃತಪಟ್ಟವರು.

ಕೆ.ಆರ್.ಪೇಟೆ ಪಟ್ಟಣದಲ್ಲಿ ಚಿಕಿತ್ಸಾಲಯ ತೆರೆದು ಕಳೆದ 30ಕ್ಕೂ ಹೆಚ್ಚು ವರ್ಷಗಳಿಂದ ಪಟ್ಟಣದಲ್ಲಿ ಕಡಿಮೆ ದರದಲ್ಲಿ ಗ್ರಾಮೀಣ ಜನರಿಗೆ ಚಿಕಿತ್ಸೆ ನೀಡುವ ಮೂಲಕ ಬಡ ಜನರ ಪ್ರೀತಿ ಪಾತ್ರರ ವೈದ್ಯರಾಗಿದ್ದರು. ಯಾರಾದರೂ ರೋಗಿಗಳು ತಮ್ಮಲ್ಲಿಗೆ ಬಂದು ತಮ್ಮ ಶಕ್ತಿಮೀರಿ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮೈಸೂರು ಅಥವಾ ಮಂಡ್ಯಕ್ಕೆ ಕಳುಹಿಸಬೇಕಾದ ಸಂದರ್ಭದಲ್ಲಿ ರೋಗಿಗಳ ಬಳಿ ಹಣ ಇಲ್ಲದೇ ಇದ್ದಾದ ಡಾ.ಪ್ರಕಾಶ್ ಅವರೇ ತಮ್ಮ ಸ್ವಂತ ಹಣವನ್ನು ನೀಡಿ ಕಳುಹಿಸುತ್ತಿದ್ದರು.

ಮೃತರ ಅಂತ್ಯಕ್ರಿಯೆಯು ಕೋವಿಡ್-19 ನಿಯಮಾನುಸಾರ ಮೈಸೂರಿನಲ್ಲಿ ನೆರವೇರಿಸಲಾಯಿತು.  ಡಾ.ಎ.ಎಸ್.ಪ್ರಕಾಶ್ ಅವರ ಅಕಾಲಿನ ನಿಧನದ ಹಿನ್ನೆಲೆಯಲ್ಲಿ ಪಟ್ಟಣದ ಎಲ್ಲಾ ಖಾಸಗಿ ಕ್ಲಿನಿಕ್‍ಗಳು ಮತ್ತು ಮೆಡಿಕಲ್ ಗಳನ್ನು ಬಂದ್ ಮಾಡಿದ ಭಾರತೀಯ ವೈದ್ಯರ ಸಂಘ ಮತ್ತು ಔಷಧ ವ್ಯಾಪಾರಿಗಳ ಸಂಘದ ಸದಸ್ಯರು ಅಗಲಿದ ವೈದ್ಯ ಡಾ.ಎ.ಎಸ್.ಪ್ರಕಾಶ್ ಅವರಿಗೆ ತಮ್ಮ ಗೌರವ ಸಲ್ಲಿಸಿದರು.

ಡಾ.ಪ್ರಕಾಶ್ ಅವರ ವಾತ್ಸಲ್ಯ ಕ್ಲಿನಿಕ್ ನಲ್ಲಿ ಚಿಕಿತ್ಸೆ ಪಡೆದ ರೋಗಿಗಳು  ಸ್ವಯಂಪ್ರೇರಿತರಾಗಿ ಬಂದು ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ಕೋವಿಡ್ 19 ಪರೀಕ್ಷೆ ಮಾಡಿಸಿ ಕೊಳ್ಳಬೇಕೆಂದು ತಹಸೀಲ್ದಾರ್ ಎಂ.ಶಿವಮೂರ್ತಿ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಇನ್ನಾದರೂ ಸಾರ್ವಜನಿಕರು, ಕಡ್ಡಾಯವಾಗಿ ಮಾಸ್ಕುಗಳನ್ನು ಧರಿಸಿ ಓಡಾಡಬೇಕು, ಸ್ಯಾನಿಟೈಸರ್ ಬಳಕೆ ಮಾಡಬೇಕು, ಸಾಮಾಜಿಕ ಅಂತರವನ್ನು ಕಾಪಾಡಬೇಕು ಈ ಮೂಲಕ ಕೋರೋನಾ ಸೋಂಕಿನಿಂದ ದೂರವಿರಬೇಕು ಎಂದು ಸಬ್ ಇನ್ಸ್ ಪೆಕ್ಟರ್ ಬ್ಯಾಟರಾಯಗೌಡ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು