News Karnataka Kannada
Sunday, April 21 2024
Cricket
ಕರ್ನಾಟಕ

ಕೆಂಪುಸಾಗರ ಕೆರೆ ಏರಿ ಬಿರುಕು: ರೈತರಿಗೆ ಆತಂಕ

Photo Credit :

ಕೆಂಪುಸಾಗರ ಕೆರೆ ಏರಿ ಬಿರುಕು: ರೈತರಿಗೆ ಆತಂಕ

ಗುಂಡ್ಲುಪೇಟೆ: ಮಳೆಗಾಲದಲ್ಲಿ ಮಳೆ ಸುರಿದಾಗ ಕೆರೆಗಳು ಭರ್ತಿಯಾಗುವುದರಿಂದ ಮುಂದಿನ ದಿನಗಳಲ್ಲಿ ಭೂಮಿಯಲ್ಲಿ ಅಂತರ್ಜಲ ಹೆಚ್ಚಳವಾಗುವುದರೊಂದಿಗೆ ಜನ ಜಾನುವಾರುಗಳಿಗೆ ಕೆರೆಯಲ್ಲಿ ನೀರನ್ನು ಸಂಗ್ರಹಿಸಿಟ್ಟುಕೊಳ್ಳುವುದು ಅಗತ್ಯವಾಗಿದೆ.

ಬಹಳಷ್ಟು ವರ್ಷಗಳಿಂದ ಭರ್ತಿಯಾಗದ ಕೆರೆಗಳು ಇತ್ತೀಚೆಗಿನ ವರ್ಷಗಳಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ತುಂಬುತ್ತಿವೆ. ಆದರೆ ಬಹಳಷ್ಟು ಕೆರೆಗಳನ್ನು ದುರಸ್ತಿಗೊಳಿಸದ ಕಾರಣ ಹೂಳು ಮತ್ತು ಕುರುಚಲು ಕಾಡು ಬೆಳೆದು ನೀರು ಸಂಗ್ರಹಕ್ಕೆ ತೊಂದರೆಯಾಗಿದೆ. ಈ ಬಾರಿ ಕೊರೋನಾ ಲಾಕ್ ಡೌನ್ ಸಂದರ್ಭ ಹಲವು ಕೆರೆಗಳನ್ನು ಪುನಶ್ಚೇತನಗೊಳಿಸಿರುವುದು ಉತ್ತಮ ಬೆಳವಣಿಗೆಯಾಗಿದೆ.

ಚಾಮರಾನಗರ ಜಿಲ್ಲೆಯಲ್ಲಿ ಹಲವು ಕೆರೆಗಳನ್ನು ಪುಶ್ಚೇತನಗೊಳಿಸಲಾಗಿದ್ದು, ಕೆರೆಗಳಲ್ಲಿ ಸಂಗ್ರಹವಾಗಿವೆ. ಈಗಾಗಲೇ ಕೆಲವು ಕೆರೆಗಳಲ್ಲಿ ನೀರು ಕಾಣಿಸಿಕೊಂಡಿದೆ. ಆದರೆ ಈ ನಡುವೆ ಗುಂಡ್ಲುಪೇಟೆ ತಾಲೂಕಿನ ಕೆಂಪುಸಾಗರ ಕೆರೆಯಲ್ಲಿ ನೀರು ಸಂಗ್ರಹವಾಗಿದ್ದರೂ ಅದು ಸೋರಿಕೆಯಾಗುತ್ತಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.

ಈ ಕೆರೆಯಲ್ಲಿ ನೀರು ತುಂಬುತ್ತಿದ್ದು ಆದರೆ ಕೆರೆಯ ಏರಿಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಮೊದಲಿಗೆ ಇದರ ಮೂಲಕ ನೀರು ಸಣ್ಣ ಪ್ರಮಾಣದಲ್ಲಿ ಸೋರಿಕೆಯಾಗುತ್ತಿದ್ದರೆ, ದಿನಕಳೆದಂತೆ ನೀರಿನ ಪ್ರಮಾಣದಲ್ಲಿ ಕಂಡು ಬರುತ್ತಿದೆ. ಒಂದು ವೇಳೆ ಇದು ಹೀಗೆಯೇ ಮುಂದುವರೆದರೆ, ಕೆರೆ ತುಂಬುವ ಮೊದಲೇ ಏರಿ ಒಡೆಯುವ ಅಪಾಯ ಎದುರಾಗಿದ್ದು ಇದು ಈ ವ್ಯಾಪ್ತಿಯ ರೈತರು ಸೇರಿದಂತೆ ಜನರಲ್ಲಿ ಆತಂಕವನ್ನು ಸೃಷ್ಠಿ ಮಾಡಿದೆ.

ಈ ಕೆರೆಯು ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಮದ್ದೂರು ವಲಯದ  ಕಾಡಂಚಿನ ಗ್ರಾಮಗಳಾದ ಬೇರಂಬಾಡಿ, ಕಗ್ಗಳದಹುಂಡಿ, ಮದ್ದೂರು, ಚನ್ನಮಲ್ಲೀಪುರ, ಕಣ್ಣೇಗಾಲ, ಮದ್ದಯ್ಯನಹುಂಡಿ ಸೇರಿದಂತೆ ಈ ಭಾಗದ ಹತ್ತಾರು ಗ್ರಾಮಗಳಿಗೆ ಅನುಕೂಲವಾಗಲಿದೆ. ಈ ಕೆರೆಯಲ್ಲಿ ನೀರು ಸಂಗ್ರಹವಾದರೆ ಅದರಿಂದ ಅಂತರ್ಜಲ ಮಟ್ಟ ಹೆಚ್ಚಳವಾಗಲಿದ್ದು, ಕೊಳವೆ ಬಾವಿಯನ್ನು ನಂಬಿ ಕೃಷಿ ಮಾಡುವ ರೈತರಿಗೆ  ಸಹಕಾರಿಯಾಗಿದೆ. ಜತೆಗೆ ವನ್ಯಜೀವಿಗಳಿಗೆ ಪ್ರಮುಖ ನೀರಿನ ಸೆಲೆಯಾಗಿದೆ. ಈ ಬಾರಿ ಉತ್ತಮ ಮಳೆ ಬೀಳುತ್ತಿರುವುದರಿಂದ ಕೆರೆ ಭರ್ತಿಯಾಗಿ ಕೋಡಿ ಬೀಳುವ ಸಾಧ್ಯತೆ ಇರುವುದರಿಂದ ಒಂದು ವೇಳೆ ಈಗಾಗಲೇ ಕಾಣಿಸಿಕೊಂಡಿರುವ ಬಿರುಕು ಇನ್ನಷ್ಟು ದೊಡ್ಡದಾಗಿ ಏರಿ ಒಡೆದರೆ ತಗ್ಗು ಪ್ರದೇಶದಲ್ಲಿರುವ  ಕನ್ನೇಗಾಲ, ಭೀಮನಬಿಡು, ಮದ್ದನಯ್ಯನಹುಂಡಿ ಹಾಗೂ ಇತರರ ಗ್ರಾಮಗಳ ನೂರಾರು ಎಕರೆ ಪ್ರದೇಶದಲ್ಲಿರುವ ಬೆಳೆ ನೀರು ಪಾಲಾಗುವ ಸಾಧ್ಯತೆ ಇಲ್ಲದಿಲ್ಲ.

ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಗೆ ಕೆರೆ ಸೇರಿದ್ದರೂ ಕೂಡ ಕೆರೆಯನ್ನು ಸರಿಯಾಗಿ ನಿರ್ವಹಣೆ  ಮಾಡದ ಕಾರಣ ಕೋಡಿಯ ಬಳಿ ಇದ್ದ ಸಣ್ಣ ಬಿರುಕು ದಿನೇ ದಿನೇ ದೊಡ್ಡದಾಗುತ್ತಿದ್ದು ಭಾರೀ ಪ್ರಮಾಣದ ನೀರು ಹರಿದುಹೋಗುತ್ತಿದ್ದು, ಇದರಿಂದ ಕೆರೆ ತುಂಬುವ ಮೊದಲೇ ನೀರು ಪೋಲಾಗುತ್ತಿದ್ದು ಕೂಡಲೇ ಅಧಿಕಾರಿಗಳು ಇತ್ತ ಗಮನಹರಿಸಬೇಕು ಎಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು