News Karnataka Kannada
Monday, April 15 2024
Cricket
ಕರ್ನಾಟಕ

ಕೆಂಪಯ್ಯನದೊಡ್ಡಿ ಶಾಲೆಗೆ ಶಿಕ್ಷಣ ಸಚಿವರ ಭೇಟಿ

Photo Credit :

ಕೆಂಪಯ್ಯನದೊಡ್ಡಿ ಶಾಲೆಗೆ ಶಿಕ್ಷಣ ಸಚಿವರ ಭೇಟಿ

ಹಲಗೂರು: ಮಾರಕ ಕೊರೋನ ವೈರಸ್‍ನಿಂದಾಗಿ ಆರ್ಥಿಕತೆ ಕುಸಿತವಾಗಿ ಜನಜೀವನದ ಮೇಲೆ ವ್ಯತಿರಿಕ್ತ ಬೀರಿದ್ದು, ಕೈಗಾರಿಕೋದ್ಯಮ, ವ್ಯಾಪಾರ ವಹಿವಾಟು ನೆಲಕಚ್ಚಿವೆ. ಅದರಲ್ಲಿಯೂ ಶಿಕ್ಷಣ ಕ್ಷೇತ್ರದ ಭಾರೀ ಪರಿಣಾಮ ಬೀರಿದ್ದು, ಮಕ್ಕಳ ಭವಿಷ್ಯ ತೂಗು ಉಯ್ಯಾಲೆಯಲ್ಲಿದೆ.

ಈಗಾಗಲೇ ವಿದ್ಯಾರ್ಥಿಗಳು ಶಾಲೆಗೆ ತೆರಳದೆ ಮನೆಯಲ್ಲಿಯೇ ಕಲಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ನಗರ ಪ್ರದೇಶಗಳಲ್ಲಿರುವ ಮಕ್ಕಳಿಗೆ ಹಲವು ರೀತಿಯ ಸೌಲಭ್ಯಗಳಿರುವುದರಿಂದ ಅದನ್ನು ಬಳಸಿಕೊಂಡು ಕಲಿಯುತ್ತಿದ್ದಾರೆಯಾದರೂ ಹಳ್ಳಿಗಳಲ್ಲಿರುವ ಬಹುತೇಕ ಮಕ್ಕಳು ವಿವಿಧ ಕಾರಣಗಳಿಗೆ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.

ಇದನ್ನರಿತ ಮಳವಳ್ಳಿ ತಾಲೂಕಿನ ಹಲಗೂರು ಹೋಬಳಿಯ ಕೆಂಪಯ್ಯನದೊಡ್ಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ತಮ್ಮ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಕಾರಣಕ್ಕೆ ಮಕ್ಕಳ ಮನೆ ಬಾಗಿಲಿಗೆ ಹೋಗಿ ಬೋಧನೆ ಮತ್ತು ಕಲಿಕಾ ಚಟುವಟಿಕೆಗಳನ್ನು ಹೇಳಿಕೊಡುವ ಮೂಲಕ ವಿದ್ಯಾರ್ಥಿಗಳ ಕಲಿಕೆಗೆ ಉತ್ತೇಜನ ನೀಡುತ್ತಿದ್ದಾರೆ.

ಶಿಕ್ಷಕರ ಈ ಕಾರ್ಯವನ್ನರಿತ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಅವರು ಕೆಂಪಯ್ಯನದೊಡ್ಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮಾತನಾಡಿದ ಅವರು, ಕೊರೋನಾ ಸೊಂಕು ಹೆಚ್ಚಿದ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷದ ಸಾಲಿನ ತರಗತಿಗಳ ಪ್ರವಚನಗಳು ನಡೆಯುತ್ತಿಲ್ಲ ಹೀಗಾಗಿ ಮಕ್ಕಳ ವಿದ್ಯಾಭ್ಯಾಸಕ್ಕೆ ಸ್ವಲ್ಪಮಟ್ಟಿಗೆ ಹಿನ್ನಡೆಯಾಗಿದ್ದು, ಇಂತಹ ಸಂದರ್ಭದಲ್ಲಿ ಕೆಂಪಯ್ಯನ ದೊಡ್ಡಿ ಗ್ರಾಮದ ಪ್ರಾಥಮಿಕ ಶಾಲೆಯ ಶಿಕ್ಷಕರ ಕರ್ತವ್ಯ ನಿಷ್ಠೆ ಹಾಗೂ ವೃತ್ತಿ ಪರತೆಯನ್ನು ನಾವು ಗೌರವಿಸಬೇಕಾಗಿದ್ದು, ಇಂತಹ ಆದರ್ಶನೀಯ ಕಾರ್ಯವು ರಾಜ್ಯಕ್ಕೆ ಮಾದರಿಯಾಗಿದೆ ಎಂದು ಹೇಳಿದರು.

ಮಾರಕ ಕೊರೋನದಿಂದಾಗಿ ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ  ಪರೀಕ್ಷೆ  ಆಗುತ್ತೊ ಇಲ್ಲವೋ ಎಂಬ  ಗೊಂದಲಕ್ಕೆ ತೆರೆ ಎಳೆದು ನಿಗದಿತ ಅವಧಿಯಲ್ಲಿ ನಡೆಸಲಾಗಿದೆ ಮುಂದೂಡಲ್ಪಟ್ಟು ತದನಂತರ ಜೂನ್‍ನಲ್ಲಿ ಪರೀಕ್ಷೆ ನಡೆಸಲಾಯಿತು. ಇಂತಹ ಸಂದರ್ಭದಲ್ಲಿ ರಾಜ್ಯದ ಎಲ್ಲ್ಲ ಮಕ್ಕಳು ನಿರ್ಭಿತರಾಗಿ ಪರೀಕ್ಷೆಯನ್ನು ಎದುರಿಸಿ ರಾಜ್ಯಕ್ಕೆ ಗೌರವ ತಂದುಕೊಟ್ಟ ನಮ್ಮ ಶಾಲಾ ಮಕ್ಕಳಿಗೆ ಸಲ್ಲಬೇಕು. ಇದು ಕೇವಲ ಪರೀಕ್ಷೆ  ಆಗಿರದೆ ಒಂದು ನಾಡ ಹಬ್ಬವಾಗಿ ಸಂಭ್ರಮದಿಂದ ನಡೆಸಲು ಸಹಕರಿಸಿದ ಸಾರಿಗೆ, ಆರೋಗ್ಯ, ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.

ಇದೇ ವೇಳೆ ಶಾಸಕ ಡಾ.ಕೆ ಅನ್ನದಾನಿ ಮಾತನಾಡಿ ತಾಲೂಕಿನ ಗಡಿ ಗ್ರಾಮವಾದ ಕೆಂಪಯ್ಯನ ದೊಡ್ಡಿ ಗ್ರಾಮಕ್ಕೆ ಹೆಸರಾಂತ ಶಿಕ್ಷಣ ಸಚಿವರು ಭೇಟಿ ನೀಡಿರುವುದು ಬಹಳ ಹೆಮ್ಮೆಯ ಸಂಗತಿಯಾಗಿದ್ದು, ಶಾಲೆಯ ಶಿಕ್ಷಕರ ವೃತ್ತಿಪರತೆಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಕ್ಷೇತ್ರಶಿಕ್ಷಣ ಅಧಿಕಾರಿಗಳು ಎ.ಟಿ.ಶಿವಲಿಂಗಯ್ಯ, ಯೋಗೇಶ್, ತಮ್ಮಣ್ಣಗೌಡ, ಎ.ಎಸ್.ದೇವರಾಜು, ಪರಮೇಶ್, ಬಸವರಾಜ್, ಮುಖ್ಯ ಶಿಕ್ಷಕರಾದ ಸುಂದರಪ್ಪ ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು