News Karnataka Kannada
Thursday, April 25 2024
ಕರ್ನಾಟಕ

ಕೃಷಿ ರಪ್ತು ಅಭಿವೃದ್ಧಿ ಕುರಿತಂತೆ  ಜಿಲ್ಲಾ ಮಟ್ಟದ ಸಮಿತಿ ಸಭೆ

Photo Credit :

ಕೃಷಿ ರಪ್ತು ಅಭಿವೃದ್ಧಿ ಕುರಿತಂತೆ  ಜಿಲ್ಲಾ ಮಟ್ಟದ ಸಮಿತಿ ಸಭೆ

ಕಾರವಾರ:ಉತ್ತರ ಕನ್ನಡ ಜಿಲ್ಲೆಯಲ್ಲಿ ಕೃಷಿ ವಾಣಿಜ್ಯ ಆಹಾರ ಸಂಸ್ಕರಣೆ ಮತ್ತು ಕೃಷಿ ರಪ್ತು ಅಭಿವೃದ್ಧಿ ಕುರಿತಂತೆ  ಜಿಲ್ಲಾ ಮಟ್ಟದ ಸಮಿತಿ ಸಭೆ ಜಿಲ್ಲಾಧಿಕಾರಿ  ಡಾ. ಹರೀಶಕುಮಾರ್. ಕೆ ಅವರ ಅಧ್ಯಕ್ಷತೆಯಲ್ಲಿ ಕಚೇರಿಯಲ್ಲಿ ನಡೆಯಿತು.

ಪ್ರಧಾನ ಮಂತ್ರಿ ಆತ್ಮ ನಿರ್ಭರ ಭಾರತ ಅಭಿಯಾನದ ಭಾಗವಾಗಿ ಪ್ರಧಾನಮಂತ್ರಿಗಳ ಹೊಸ ಯೋಜನೆ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಜಿಲ್ಲೆಗೆ ಸಂಬಂದಿಸಿದಂತೆ ಒಂದು ಬೆಳೆಯನ್ನು ಆಯ್ಕೆ ಮಾಡುವ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ನಬಾರ್ಡ್ ಪ್ರತಿನಿಧಿಗಳೊಂದಿಗೆ ಚರ್ಚಿಸಿದರು.

ಜಿಲ್ಲೆಯಲ್ಲಿ  ಅವಕಾಶವಿರುವ ಸಣ್ಣ ಮತ್ತು ಅತಿ ಸಣ್ಣ ರೈತ ಆಹಾರ ಸಂಸ್ಕರಣೆ ಉದ್ದ್ದಿಮೆ ಸ್ಥಾಪಿಸಲು ಅವಶ್ಯವಿರುವ ಬೆಳೆ ಮತ್ತು ಉತ್ಪನ್ನಗಳ ಬಗ್ಗೆ ವಿಸ್ತಾರವಾಗಿ ವಿಚಾರಿಸಿ ಹಾಜರಿದ್ದ ಎಲ್ಲ ಇಲಾಖಾ ಅಧಿಕಾರಿಗಳ ಅಭಿಪ್ರಾಯ ಪಡೆದು  ಮೊದಲನೇ ಬೆಳೆಯಾಗಿ ಕಾಳುಮೆಣಸನ್ನು ಹಾಗೂ ಎರಡನೇ ಉತ್ಪನ್ನವಾಗಿ ತೆಂಗು ಬೆಳೆಗೆ ಪ್ರಾಶಸ್ತ್ಯ ನೀಡುವ ಬಗ್ಗೆ ನಿರ್ದೇಶನ ನೀಡಿದರು. ಅಲ್ಲದೇ ಈ ಯೋಜನೆ ಕುರಿತಾಗಿ ವ್ಯಾಪಕ ಪ್ರಚಾರ ಕೈಗೊಂಡು ಜಿಲ್ಲೆಯಲ್ಲಿ ಇರುವ ರೈತರು, ರೈತ ಉತ್ಪಾದಕರ ಸಂಸ್ಥೆಗಳು ಹಾಗೂ ಸಹಕಾರಿ ರೈತ ಸಂಘಗಳು ಹೆಚ್ಚಿನ ರೀತಿಯಲ್ಲಿ ಪಾಲ್ಗೊಳ್ಳುವಂತೆ ಕ್ರಮ ವಹಿಸಲು ಸೂಚನೆ ನೀಡಿದರು.

ಜೊತೆಗೆ ಜಿಲ್ಲಾ ಮಟ್ಟದ ರೈತ ಉತ್ಪಾದಕರ ಉತ್ತೇಜನ ಸಮನ್ವಯ ಮೇಲ್ವಿಚಾರಣೆ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯನ್ನು ಕೂಡಾ ನಡೆಸಿದ ಜಿಲ್ಲಾಧಿಕಾರಿ, ರೈತ ಉತ್ಪಾದಕರ ಸಂಸ್ಥೆಗಳನ್ನು ರಚಿಸಿ ರೈತರ ಆರ್ಥಿಕ ಪ್ರಗತಿಗೆ ನೆರವಾಗಲು ಹಾಗೂ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ಹೋಬಳಿವಾರು ರೈತ ಉತ್ಪಾಕದರ ಸಂಸ್ಥೆಗಳನ್ನು ರಚಿಸಲು ಸೂಕ್ತ  ಕ್ರಮವಹಿಸಲು  ಸೂಚಿಸಿದರು.

 ಈ ಸಂದರ್ಭದಲ್ಲಿ  ಪೊಲೀಸ್ ಅಧೀಕ್ಷಕ  ಶಿವಪ್ರಕಾಶ ದೇವರಾಜು, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಎಚ್. ಕೆ, ಜಂಟಿ ಕೃಷಿ ನಿರ್ದೇಶಕರಾದ  ಹೊನ್ನಪ್ಪ ಗೌಡ , ಮೀನುಗಾರಿಕಾ ಉಪ ನಿರ್ದೇಶಕ  ನಾಗರಾಜ, ತೋಟಗಾರಿಕಾ ಉಪ ನಿರ್ದೇಶಕ ಸತೀಶ, ಪಶು ಸಂಗೋಪನಾ ಉಪ ನಿರ್ದೇಶಕ ಡಾ. ನಂದಕುಮಾರ್ ಪೈ  ಹಾಗೂ ಇತರರು ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು