News Karnataka Kannada
Monday, April 15 2024
Cricket
ಕರ್ನಾಟಕ

ಕುಂಬಳೆ ಹರೀಶ್ ಕೊಲೆ ಪ್ರಕರಣ: ಆರೋಪಿಯ ಬಂಧನ 

Photo Credit :

ಕುಂಬಳೆ ಹರೀಶ್ ಕೊಲೆ ಪ್ರಕರಣ: ಆರೋಪಿಯ ಬಂಧನ 

ಕಾಸರಗೋಡು :  ಕುಂಬಳೆ ನಾಯ್ಕಾಪು ವಿನ   ಹರೀಶ್ ( 38 ) ರವರ ಕೊಲೆ ಪ್ರಕರಣದ  ಪ್ರಮುಖ ಆರೋಪಿಯನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಕುಂಬಳೆ  ಶಾಂತಿಪಳ್ಳದ   ಶ್ರೀಕುಮಾರ್ ( 26) ಎಂದು ಗುರುತಿಸಲಾಗಿದೆ .ಈತ ಹರೀಶ್  ಕೆಲಸ ನಿರ್ವಹಿಸುತ್ತಿರುವ ಮಿಲ್ ನ ವಾಹನದ ಚಾಲಕನಾಗಿದ್ದಾನೆ.

ಕೊಲೆಗೆ ವೈಯುಕ್ತಿಕ ದ್ವೇಷ ಕಾರಣ ಎಂದು ತನಿಖೆಯಿಂದ ತಿಳಿದು ಬಂದಿದೆ.  ಹುಡುಗಿ ವಿಷಯದಲ್ಲಿ ಇಬ್ಬರ ನಡುವೆ ದ್ವೇಷ ಇತ್ತೆನ್ನ ಲಾಗಿದೆ. ಈ ಕಾರಣದಿಂದ  ಕೃತ್ಯ ನಡೆಸಿದ್ದಾಗಿ ವಿಚಾರಣೆ ವೇಳೆ ಪೊಲೀಸರಿಗೆ ಮಾಹಿತಿ ಲಭಿಸಿದೆ.

ಕೆಲ ದಿನಗಳ ಹಿಂದೆ     ಕ್ಷುಲ್ಲಕ  ಕಾರಣಕ್ಕೆ  ಹರೀಶ್ ಮತ್ತು ಶ್ರೀಕುಮಾರ್ ನಡುವೆ  ಜಗಳ ನಡೆದಿತ್ತು  ಎನ್ನಲಾಗಿದೆ.

ಕೃತ್ಯದಲ್ಲಿ ನಾಲ್ಕಕ್ಕೂ ಅಧಿಕ ಮಂದಿ ಶಾಮೀಲಾಗಿದ್ದು, ಕೃತ್ಯದಲ್ಲಿ ನೇರವಾಗಿ ಶಾಮೀಲಾದ ಇನ್ನೋರ್ವನ ಪತ್ತೆಗೆ ಪೊಲೀಸರು  ತನಿಖೆ ನಡೆಸುತ್ತಿದ್ದಾರೆ.

 ಹರೀಶ್ ರ ಕೊಲೆ ಬಳಿಕ ಮಂಗಳವಾರ ರಾತ್ರಿ  ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ  ರೋಶನ್ ( 21) ಮತ್ತು ಮಣಿಕಂಠ (19)  ಕೂಡಾ ಭಾಗಿಯಾಗಿದ್ದರು ಎಂಬ ಸುಳಿವು ಪೊಲೀಸರಿಗೆ ಲಭಿಸಿದೆ.

ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ಮತ್ತೆ ಕಸ್ಟಡಿಗೆ ಪಡೆದು ಮತ್ತಷ್ಟು ಮಾಹಿತಿ ಕಲೆ ಹಾಕಲು ತೀರ್ಮಾನಿಸಿದ್ದಾರೆ.

ಕೊಲೆಗೆ ಬಳಸಿದ ಮಾರಕಾಯುಧ ಹಾಗೂ ಸಮೀಪದ ತೋಡಿಗೆ  ಎಸೆಯಲಾದ ಆರೋಪಿಗಳ  ರಕ್ತ ದ ಕಲೆ ಹೊಂದಿದ್ದ  ಶರ್ಟ್ ನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.

ಆರೋಪಿಯನ್ನು ಘಟನಾ ಸ್ಥಳಕ್ಕೆ ಕರೆ ತಂದು ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ.

ಸೋಮವಾರ ರಾತ್ರಿ ರಮೇಶ್  ನನ್ನು ತಂಡವು ಇರಿದು ಕೊಲೆ ಮಾಡಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು