News Karnataka Kannada
Monday, April 22 2024
Cricket
ಕರ್ನಾಟಕ

ಕಾಸರಗೋಡು: ೨.೮೭ ಕೋಟಿ ರೂಪಾಯಿಯ ಹವಾಲ ಹಣ ವಶಕ್ಕೆ

Photo Credit :

ಕಾಸರಗೋಡು: ೨.೮೭ ಕೋಟಿ ರೂಪಾಯಿಯ ಹವಾಲ ಹಣ ವಶಕ್ಕೆ

ಕಾಸರಗೋಡು : ಕುಂಬಳೆ ಅಬಕಾರಿ  ದಳದ ಸಿಬಂದಿಗಳು ನಡೆಸಿದ ಕಾರ್ಯಾಚರಣೆಯಿಂದ ಸುಮಾರು 2. 87 ಕೋಟಿ  ರೂ . ಹವಾಲ ಹಣ ಹಾಗೂ 20 ಪವನ್  ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದು , ಮಂಗಳೂರು ಮೂಲದ ಯುವಕನೋರ್ವನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಮೂಲತಃ ಮಂಗಳೂರು ನಿವಾಸಿ , ಪ್ರಸ್ತುತ ಮಂಜೇಶ್ವರ ಉದ್ಯಾವರದಲ್ಲಿ ವಾಸವಾಗಿರುವ ಇರ್ಷಾದ್  (33) ಬಂಧಿತ ಯುವಕ . ಸೋಮವಾರ ರಾತ್ರಿ ರಾಷ್ಟೀಯ ಹೆದ್ದಾರಿಯ ತೂಮಿನಾಡು ಎಂಬಲ್ಲಿ  ವಾಹನ ತಪಾಸಣೆ ನಡೆಸುತ್ತಿದ್ದ ಅಬಕಾರಿ ದಳದ ಸಿಬಂದಿಗಳು ನಡೆಸಿದ ಕಾರ್ಯಾಚರಣೆಯಿಂದ ಹವಾಲ  ಸಾಗಾಟ ಬೆಳಕಿಗೆ  ತರಲಾಗಿದೆ . ಅಬಕಾರಿ ದಳದ ಸಿಬಂದಿಗಳನ್ನು ಕಂಡು ಪರಾರಿಯಾದ  ಸ್ವಿಪ್ಟ್  ಕಾರನ್ನು ಬೆನ್ನ ಟ್ಟಿದ  ಸಿಬಂದಿಗಳು ವಶಕ್ಕೆ ತೆಗೆದು ತಪಾಸಣೆ ನಡೆಸಿದಾಗ ಹಣ ಪತ್ತೆಯಾಗಿದೆ.  ಎರಡು ಸಾವಿರ ಹಾಗೂ 500 ರೂ . ಮುಖಬೆಲೆಯ ನೋಟುಗಳನ್ನು ಸಾಗಿಸಲಾಗುತ್ತಿತ್ತು .

ವಶಪಡಿಸಿಕೊಂಡ ನಗದು ಹಾಗೂ ಚಿನ್ನಭರಣವನ್ನು ಮುಂದಿನ ತನಿಖೆಗಾಗಿ ಮಂಜೇಶ್ವರ ಪೊಲೀಸರಿಗೆ  ಹಸ್ತಾ0 ತರಿಸಲಾಗಿದೆ   

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು