News Karnataka Kannada
Wednesday, April 24 2024
Cricket
ಕರ್ನಾಟಕ

ಕಾಸರಗೋಡು ಸೋಮವಾರ 28 ಮಂದಿಗೆ  ಕೊರೋನಾ ಪಾಸಿಟಿವ್

Photo Credit :

ಕಾಸರಗೋಡು ಸೋಮವಾರ 28 ಮಂದಿಗೆ  ಕೊರೋನಾ ಪಾಸಿಟಿವ್

ಕಾಸರಗೋಡು:  ಜಿಲ್ಲೆಯಲ್ಲಿ ಸೋಮವಾರ 28 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. ಇವರಲ್ಲಿ 11 ಮಂದಿಗೆ ಸಂಪರ್ಕದಿಂದ ಸೋಂಕು ತಗುಲಿದೆ.(5 ಮಂದಿಯ ಸಂಪರ್ಕ ಮೂಲ ಪತ್ತೆಯಾಗಿಲ್ಲ). 8 ಮಂದಿ ವಿದೇಶದಿಂದ, 9 ಮಂದಿ ಇತರ ರಾಜ್ಯಗಳಿಂದ ಬಂದವರು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದ್ದಾರೆ.

 ಸಂಪರ್ಕ ದಿಂದ ಸೋಂಕು

ಮೀಂಜ ಪಂಚಾಯತ್ ನ 40, ಕಾರಡ್ಕ ಪಂಚಾಯತ್ ನ 34, ಮಂಗಲ್ಪಾಡಿ ಪಂಚಾಯತ್ ನ 31 ವರ್ಷದ ಪುರುಷರು, ಕಾಸರಗೋಡು ನಗರಸಭೆಯ 48 ವರ್ಷದ ಮಹಿಳೆ(ಇವರಲ್ಲಿ ಯಾರದ್ದೂ ಸಂಪರ್ಕ ಮೂಲ ಪತ್ತೆಯಾಗಿಲ್ಲ.), 47 ವರ್ಷದ ಪುರುಷ, ಇವರ ಪತ್ನಿ 38 ವರ್ಷದಾಕೆ, ತ್ರಿಕರಿಪುರ ಪಂಚಾಯತ್ ನ 47 ವರ್ಷದ ಪುರುಷ, ಕುಂಬಳೆ ಪಂಚಾಯತ್ ನ 4 ವರ್ಷದ ಬಾಲಕ, ಮೊಗ್ರಾಲ್ ಪುತ್ತೂರು ಪಂಚಾಯತ್ ನ ಒಂದು ವರ್ಷದ ಬಾಲಕ(ಬಾಲಕರಿಬ್ಬರಿಗೆ ಪ್ರಾಥಮಿಕ ಸಂಪರ್ಕ) ಸೋಂಕು ತಗುಲಿದವರು.

ವಿದೇಶದಿಂದ ಬಂದವರು

ಖತಾರ್ ನಿಂದ ಬಂದಿದ್ದ ನೀಲೇಶ್ವರ ನಗರಸಭೆಯ 34, ವರ್ಕಾಡಿ ಪಂಚಾಯತ್ ನ 36, ಸೌದಿಯಿಂದ ಆಗಮಿಸಿದ್ದ ಮಂಜೇಶ್ವರ ಪಂಚಾಯತ್ ನ 37, ಎಣ್ಮಕಜೆ ಪಂಚಾಯತ್ ನ 52, ದುಬಾಯಿಯಿಂದ ಬಂದಿದ್ದ ಬಳಾಲ್ ಪಂಚಾಯತ್ ನ 22 ವರ್ಷದ ಪುರುಷರು, 28 ವರ್ಷದ ಮಹಿಳೆ. ಚೆಮ್ನಾಡಿನ 43, ಅಬುದಾಭಿಯಿಂದ ಆಗಮಿಸಿದ್ದ ಪಳ್ಳಿಕ್ಕರೆ ಪಂಚಾಯತ್ ನ 45 ವರ್ಷದ ಪುರುಷ ರೋಗ ಖಚಿತಗೊಂಡವರು.

ಇತರ ರಾಜ್ಯಗಳಿಂದ ಆಗಮಿಸಿದವರು

ಹಾಸನದಿಂದ ಬಂದಿದ್ದ ಮಡಿಕೈ ಪಂಚಾಯತ್ ನ 50, ಜಮ್ಮುವಿನಿಂದ ಆಗಮಿಸಿದ್ದ ಬಳಾಲ್ ಪಂಚಾಯತ್ ನ 29 ವರ್ಷದ ಪುರುಷರು, ಮೈಸೂರಿನಿಂದ ಬಂದಿದ್ದ 27 ವರ್ಷದ ಮಹಿಳೆ, ಮಂಜೇಶ್ವರ ಪಂಚಾಯತ್ ನ 26 ವರ್ಷದ ಪುರುಷ(ತರಕಾರಿ ವಾಹನದ ಚಾಲಕ), ಚೆನೈಯಿಂದ ಆಗಮಿಸಿದ್ದ ಪುಲ್ಲೂರು-ಪೆರಿಯ ಪಂಚಾಯತ್ ನ 21, ಮಂಗಳೂರಿನ ಹೋಟೆಲೊಂದರ ಸಿಬ್ಬಂದಿ ವರ್ಕಾಡಿ ಪಂಚಾಯತ್ ನ 42, ಕುಂಬಳೆ ಪಂಚಾಯತ್ ನ 26, ಬೆಂಗಳೂರಿನ ಹೋಟೆಲೊಂದರ ಸಿಬ್ಬಂದಿ ಕಾಸರಗೋಡು ನಗರಸಭೆಯ 26, ಮಂಗಳೂರಿನ ಸಂಸ್ಥೆಯೊಂದರ ಸೇಲ್ಸ್ ಮ್ಯಾನ್ ಮೊಗ್ರಾಲ್ ಪುತ್ತೂರು ಪಂಚಾಯತ್ ನ 34 ವರ್ಷದ ಪುರುಷರಿಗೆ ಸೋಂಕು ಖಚಿತವಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು