News Karnataka Kannada
Thursday, April 25 2024
Cricket
ಕರ್ನಾಟಕ

ಕಾಸರಗೋಡು: ಸೆ.21ರಿಂದ ಜಿಲ್ಲೆಯಲ್ಲಿ ಲಾಕ್ ಡೌನ್ ಸಡಿಲಿಕೆ

Photo Credit :

ಕಾಸರಗೋಡು: ಸೆ.21ರಿಂದ ಜಿಲ್ಲೆಯಲ್ಲಿ ಲಾಕ್ ಡೌನ್ ಸಡಿಲಿಕೆ

ಕಾಸರಗೋಡು : ಸೆ. 21 ರಿಂದ ಜಿಲ್ಲೆಯಲ್ಲಿ ಲಾಕ್ ಡೌನ್ ಮತ್ತಷ್ಟು ಸಡಿಲಿಕೆಗೆ ಜಿಲ್ಲಾಡಳಿತ ತೀರ್ಮಾನಿಸಿದೆ.

ಮರಣ – ವಿವಾಹ ಸೇರಿದಂತೆ ಖಾಸಗಿ – ಸಾರ್ವಜನಿಕ ಸಮಾರಂಭಗಳಿಗೆ 100 ಮಂದಿ ಪಾಲ್ಗೊಳ್ಳಬಹುದು. ಆದರೆ ರಾಜಕೀಯ ಸಭೆ , ಸಮಾವೇಶಕ್ಕೆಇದು ಅನ್ವಯವಲ್ಲ .

ಈ ಬಗ್ಗೆ ಜಿಲ್ಲಾ ಕಂದಾಯ ಸಚಿವ ಇ . ಚಂದ್ರಶೇಖರನ್ ರವರ ಅಧ್ಯಕ್ಷತೆಯಲ್ಲಿ ರಾಜಕೀಯ ಪಕ್ಷ ಹಾಗೂ ಜನಪ್ರತಿನಿಧಿಗಳ ಸಭೆ ಕರೆದು ತೀರ್ಮಾನಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ . ಡಿ . ಸಜಿತ್ ಬಾಬು ತಿಳಿಸಿದರು .

ಅವರು ಶುಕ್ರವಾರ ಕೊರೋನಾ ನಿಯಂತ್ರಣ ಸಲಹಾ ಸಮಿತಿ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

21 ರಿಂದ ಕಾಸರಗೋಡು – ಮಂಗಳೂರು ನಡುವೆ ಬಸ್ಸು ಸಂಚಾರ

ಸೆ. 21 ರಿಂದ ಕಾಸರಗೋಡು – ಮಂಗಳೂರು , ಕಾಸರಗೋಡು – ಪಂಜಿಕಲ್ ನಡುವೆ ಕೆ ಎಸ್ ಆರ್ ಟಿ ಸಿ ಬಸ್ಸು ಸಂಚಾರ ನಡೆಸಲಿದೆ. ‘ಆನ್ ಡಿಮಾಂಡ್ ‘ ವ್ಯವಸ್ಥೆಯಂತೆ ಬಸ್ಸುಗಳು ಸಂಚಾರ ನಡೆಸಲಿದೆ .

ಪ್ರಯಾಣಿಕರು ಕೆ ಎಸ್ ಆರ್ ಟಿ ಸಿ ಯ ಆನ್ ಲೈನ್ ಬುಕ್ಕಿಂಗ್ ಮಾಡಬೇಕು . ಒಂದು ತಿಂಗಳಿಗೆ ಬುಕ್ ಮಾಡಬೇಕು . 40 ಪ್ರಯಾಣಿಕರಿದ್ದಲ್ಲಿ ಸಂಚಾರ ನಡೆಸಲಿದೆ .

ಪ್ರವಾಸಿ ಕೇಂದ್ರ ಬೇಕಲ ಕೋಟೆಗೆ 21ರಿಂದ ಪ್ರವೇಶ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು .

ಕೋವಿಡ್ ಮಾನದಂಡ ಪಾಲಿಸಬೇಕು . ಒಂದು ಬಾರಿ ನೂರು ಮಂದಿಗೆ ಮಾತ್ರ ಪ್ರವೇಶ ನೀಡಲಾಗುವುದು . ಪಳ್ಳಿಕೆರೆ ಬೀಚ್ , ರಾಣಿಪುರಕ್ಕೂ ಪ್ರವೇಶ ಅನುಮತಿ ನೀಡಲಾಗುವುದು. ಪ್ರವಾಸೋದ್ಯಮ ಇಲಾಖೆಯ ಬಿ ಆರ್ ಡಿ ಸಿ ಯ ರಿಸೋರ್ಟ್ ಗಳನ್ನು 21 ರಿಂದ ,ತೆರೆಯಲಿದ್ದು ಪ್ರವಾಸಿಗರಿಗೆ ಆಂಟಿಜನ್ ತಪಾಸಣೆ ಕಡ್ಡಾಯ ಗೊಳಿಸಲಾಗಿದೆ. ಕೋವಿಡ್ ಮಾನದಂಡ ಪಾಲಿಸಿ ಬೋಟ್ ಸರ್ವಿಸ್ ನಡೆಸಬಹುದಾಗಿದೆ.

ಉಪ ಜಿಲ್ಲಾಧಿಕಾರಿ ಡಿ.ಆರ್.ಮೇಘಶ್ರೀ, ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್, ವಲಯ ಕಂದಾಯಾಧಿಕಾರಿ ಸಂಶುದ್ದೀನ್ , ಡಿ.ವೈ.ಎಸ್.ಪಿಗಳಾದ ಬಾಲಕೃಷ್ಣನ್ ನಾಯರ್, ವಿನೋದ್ ಕುಮಾರ್, ಜಿಲ್ಲಾ ವಾರ್ತಾಧಿಕಾರಿ ಮಧುಸೂದನನ್ ಎಂ. ಮೊದಲಾದವರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು