News Karnataka Kannada
Thursday, April 18 2024
Cricket
ಕರ್ನಾಟಕ

ಕಾಸರಗೋಡು: ಯುವಕನ ಬರ್ಬರ ಕೊಲೆ

Photo Credit :

ಕಾಸರಗೋಡು: ಯುವಕನ ಬರ್ಬರ ಕೊಲೆ

ಕಾಸರಗೋಡು : ಯುವಕನನ್ನು ಕಡಿದು ಕೊಲೆಗೈದ ಘಟನೆ ಕುಂಬಳೆ ಸಮೀಪದ ನಾಯ್ಕಾಪು ಎಂಬಲ್ಲಿ ಸೋಮವಾರ ತಡರಾತ್ರಿ ನಡೆದಿದೆ.

ಕೊಲೆ ಗೀಡಾದವರನ್ನು ನಾಯ್ಕಾಪು ವಿನ ಹರೀಶ್ ಎಂದು ಗುರುತಿಸಲಾಗಿದೆ.

ಮನೆಯಿಂದ 100 ಮೀಟರ್ ದೂರದ ದಾರಿ ಮಧ್ಯೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಹರೀಶ್ ನನ್ನು ಗಮನಿಸಿದ ಪಾದಚಾರಿಯೋರ್ವರು ಕೂಡಲೇ ಕುಂಬಳೆ ಪೊಲೀಸರಿಗೆ ಮಾಹಿತಿ ನೀಡಿದ್ದು , ಪೊಲೀಸರು ಕುಂಬಳೆ ಹಾಗೂ ಬಳಿಕ ಕಾಸರಗೋಡು ಖಾಸಗಿ ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಲಿಲ್ಲ .

ನಾಯ್ಕಾಪು ವಿನ ಆಯಿಲ್ ಮಿಲ್ ವೊಂದರ ಲ್ಲಿ ಕಳೆದ ದುಡಿಯುತ್ತಿದ್ದ ಹರೀಶ್ ರಾತ್ರಿ ಮನೆಗೆ ತೆರಳುತ್ತಿದ್ದಾಗ ಘಟನೆ ನಡೆದಿದೆ. ಕುತ್ತಿಗೆ ಹಾಗೂ ತಲೆಗೆ ಬಿದ್ದ ಗಂಭೀರ ಸ್ವರೂಪದ ಪೆಟ್ಟು ಸಾವಿಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ .

ವೈಯುಕ್ತಿಕ ದ್ವೇಷ ಕೃತ್ಯಕ್ಕೆ ಕಾರಣವಾಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಬೇರೆ ಯಾವುದಾದರೂ ಕಾರಣ ಇರಬಹುದೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಕೃತ್ಯದ ಹಿಂದೆ ಯಾರೆಂಬುದು ತಿಳಿದು ಬಂದಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ . ಹರೀಶ್ 15 ವರ್ಷಗಳಿಂದ ನಾಯ್ಕಾಪು ವಿನ ಭಗವತಿ ಅಕ್ಕಿ ಮಿಲ್ ನಲ್ಲಿ ದುಡಿಯುತ್ತಿದ್ದರು .
ಕೊಲೆ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು