News Karnataka Kannada
Sunday, April 21 2024
Cricket
ಕರ್ನಾಟಕ

ಕಾಸರಗೋಡು ಮೀಯಪದವು ಯುವಕನ ಕೊಲೆ ಪ್ರಕರಣ: ನಾಲ್ವರ ಸೆರೆ

Photo Credit :

ಕಾಸರಗೋಡು ಮೀಯಪದವು ಯುವಕನ ಕೊಲೆ ಪ್ರಕರಣ: ನಾಲ್ವರ ಸೆರೆ

ಕಾಸರಗೋಡು: ಮೀಯಪದವು ಬೆರಿಕೆಯ ಕೃಪಾಕರ (28) ಎಂಬಾತನ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ವರನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಉಮೇಶ್( 28), ಜನಾರ್ಧನ( 29) ಶಿವ ಪ್ರಸಾದ್ (32), ನಂದೀಶ್ (30) ಎಂದು ಗುರುತಿಸಲಾಗಿದೆ.

ಆಗಸ್ಟ್ 26ರಂದು ರಾತ್ರಿ ಕೊಲೆ ನಡೆದಿತ್ತು. ಮೀಯಪದವಿನ ಜಿತೇಶ್ ಎಂಬವರ ಮನೆ ಸಮೀಪ ಕೃತ್ಯ ನಡೆದಿತ್ತು. ಗುಂಪೊಂದು ಕೃಪಾಕರನನ್ನು ಬಡಿದು ಕೊಲೆಗೈದಿತ್ತು.

ಜಿತೇಶ್ ನ ಮೇಲೆ ಹಲ್ಲೆಗೆ ಮುಂದಾಗಿದ್ದಾಗ ಸ್ಥಳಕ್ಕೆ ತಲಪಿದ ತಂಡವು ಕೃಪಾಕರನ ಮೇಲೆ ಹಲ್ಲೆ ನಡೆಸಿದ್ದು, ಗಂಭೀರ ಸ್ಥಿತಿಯಲ್ಲಿ ಕೃಪಾಕರನನ್ನು ಕಾಸರಗೋಡು ಆಸ್ಪತ್ರೆಗೆ ಕೊಂಡೊಯ್ದರೂ ಜೀವ ಉಳಿಸಲಾಗಲಿಲ್ಲ. ತಲೆಗೆ ಬಿದ್ದ ಗಂಭೀರ ಗಾಯಗಳಿಂದ ಕೃಪಾಕರ ಮೃತಪಟ್ಟಿದ್ದಾಗಿ ಮರಣೋತ್ತರ ಪರೀಕ್ಷೆಯಿಂದ ತಿಳಿದು ಬಂದಿತ್ತು.

ಈ ಹಿಂದೆ ಜಿತೇಶ್ ಮತ್ತು ಕೃಪಾಕರ ಸ್ನೇಹಿತರಾಗಿದ್ದರು. ಆದರೆ ಕೃಪಾಕರ ಗಾಂಜಾ ಹಾಗೂ ಮದ್ಯ ವ್ಯಸನಿಯಾದ ಹಿನ್ನೆಲೆಯಲ್ಲಿ ಕಳೆದ ಒಂದು ತಿಂಗಳಿಂದ ಜಿತೇಶ್ ದೂರ ಉಳಿದಿದ್ದನು. ಇದರಿಂದ ಕೃಪಾಕರ ಜಿತೇಶ್ ನೊಂದಿಗೆ ಹಲವು ಬಾರಿ ಜಗಳವಾಡಿದ್ದನು ಎನ್ನಲಾಗಿದೆ.

ಈ ನಡುವೆ 26 ರಂದು ರಾತ್ರಿ ಮನೆಯ ಹಿಂಬದಿಯ ಆವರಣ ಗೋಡೆ ಹಾರಿ ಕೃಪಾಕರ ಜಿತೇಶ್ ನ ಮನೆಗೆ ಬಂದಿದ್ದನು. ಹಲವು ಬಾರಿ ಕೃಪಾಕರ ಬಾಗಿಲು ತೆರೆಯಲು ಒತ್ತಾಯಿಸಿದರೂ ಸಹೋದರಿ ಮತ್ತು ಸಹೋದರಿಯ ಒತ್ತಡಕ್ಕೆ ಮಣಿದು ಜಿತೇಶ್ ಬಾಗಿಲು ತೆರೆಯಲು ಮುಂದಾಗಲಿಲ್ಲ. ಆದರೆ ಕೃಪಾಕರ ಬಾಗಿಲು ಬಡಿದು ಮುರಿಯುವ ಭಯದಿಂದ ಜಿತೇಶ್ ಬಾಗಿಲು ತೆರೆದಿದ್ದು, ಒಳ ಬಂದ ಕೃಪಾಕರ ಕೈಯಲ್ಲಿದ್ದ ಕತ್ತರಿಯಿಂದ ಜಿತೇಶ್ ನ ಮೇಲೆ ಹಲ್ಲೆ ನಡೆಸಿದ್ದು, ಕಣ್ಣಿಗೆ ಗಾಯವಾಗಿತ್ತು. ಹಲ್ಲೆಯಿಂದ ತಡೆಯುವ ಯತ್ನದಿಂದ ಜಿತೇಶ್ ನೆಲಕ್ಕೆ ಬಿದ್ದಿದ್ದು , ಮನೆಯವರ ಬೊಬ್ಬೆ ಕೇಳಿ ಧಾವಿಸಿ ಬಂದ ಪರಿಸರವಾಸಿಗಳು ಕೃಪಾಕರನನ್ನು ಹಿಡಿಯಲೆತ್ನಿಸಿದ್ದು, ಈ ಸಂದರ್ಭದಲ್ಲಿ ಹೊಡೆದಾಟ ನಡೆದು ಗುಂಪು ಕೃಪಾಕರನನ್ನು ಥಳಿಸಿದೆ. ಇದರಿಂದ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ .

ಘಟನೆ ತಿಳಿದು ಸ್ಥಳಕ್ಕೆ ಆಗಮಿಸಿದ್ದ ಮಂಜೇಶ್ವರ ಠಾಣಾ ಪೊಲೀಸರು ಕೃಪಾಕರನನ್ನು ಕಾಸರಗೋಡಿನ ಆಸ್ಪತ್ರೆಗೆ ಕೊಂಡೊಯ್ದಿದ್ದರು. ತನಿಖೆ ನಡೆಸಿದಾಗ ಇದು ಕೊಲೆ ಎಂದು ಸಾಬೀತಾಗಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು