News Karnataka Kannada
Saturday, April 20 2024
Cricket
ಕರ್ನಾಟಕ

ಕಾಸರಗೋಡು: ಪರಾರಿಯಾಗಿದ್ದ ಕೊರೊನಾ ಸೋಂಕಿತ ಕಳವು ಪ್ರಕರಣದಲ್ಲಿ ಬಂಧನ

Photo Credit :

ಕಾಸರಗೋಡು: ಪರಾರಿಯಾಗಿದ್ದ ಕೊರೊನಾ ಸೋಂಕಿತ ಕಳವು ಪ್ರಕರಣದಲ್ಲಿ ಬಂಧನ

ಕಾಸರಗೋಡು : ಕ್ವಾರಂಟೈನ್ ನಿಂದ ಪರಾರಿಯಾಗಿದ್ದ ಕೊರೋನಾ ಸೋಂಕಿತ ಆರೋಪಿ ಯನ್ನು ಜಾನುವಾರು ಕಳವು ನಡೆಸುತ್ತಿದ್ದಾಗ ನಾಗರಿಕರು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಬದಿಯಡ್ಕ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕಾಸರಗೋಡು ತೆಕ್ಕಿಲ್ ಮಾಂಗಾಡ್ ನ ರಂಶಾನ್ ಸೈನುದ್ದೀನ್ ( 20) ನನ್ನು ಬದಿಯಡ್ಕ ಠಾಣಾ ವ್ಯಾಪ್ತಿ ಯಿಂದ ಬಂಧಿಸಿದ್ದಾರೆ. ಶುಕ್ರವಾರ ಮುಂಜಾನೆ ಬದಿಯಡ್ಕ ಠಾಣಾ ವ್ಯಾಪ್ತಿಯ ಚಂಬಲ್ತಿಮಾರ್ ಎಂಬಲ್ಲಿ ಜಾನುವಾರು ಕಳವು ಮಾಡುತ್ತಿದ್ದಾಗ ನಾಗರಿಕರು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ದನವನ್ನು ವ್ಯಾನ್ ನಲ್ಲಿ ಸಾಗಿಸುತ್ತಿತ್ತುವುದನ್ನು ಗಮನಿಸಿದ ನಾಗರಿಕರು ಸಂಶಯಗೊಂಡು ತಡೆದು ಪೊಲೀಸರಿಗೆ ಮಾಹಿತಿ ನೀಡಿದ್ದು , ಪೊಲೀಸರು ಠಾಣೆ ಗೆ ಕೊಂಡೊಯ್ದು ವಿಚಾರಣೆ ನಡೆಸಿದಾಗ ಕಳವು ನಡೆಸಿ ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ.

ಪೊಯಿನಾಚಿ ಪೊನ್ನಡ್ಕದ ರಾಧಾಕೃಷ್ಣ ಎಂಬವರ ದನವನ್ನು ಕಳವು ಗೈದು ಸಾಗಿಸಿದ್ದಾಗಿ ತನಿಖೆಯಿಂದ ತಿಳಿದುಬಂದಿದೆ . ಈತನ ಜೊತೆಗಿದ್ದ ಪೊವ್ವಲ್ ನ ಮುನೀರ್ ( 30) ಎಂಬಾತನನ್ನೂ ಬಂಧಿಸಲಾಗಿದೆ .

ಆಗಸ್ಟ್ 24 ರಂದು ಬೆಳಿಗ್ಗೆ ಪರಾರಿಯಾಗಿದ್ದನು . ಕಣ್ಣೂರು ಎಡಕ್ಕಾಡ್ ಕ್ವಾರಂಟೈನ್ ಕೇಂದ್ರದಿಂದ ಕೆಲ ದಿನಗಳ ಹಿಂದೆ ಪರಾರಿಯಾಗಿ ಈತನನ್ನು ಹಿಡಿದು ಬಳಿಕ ಅಂಜರಕಂಡಿಯಲ್ಲಿರುವ ಕ್ವಾರಂಟೈನ್ ಕೇಂದ್ರದಲ್ಲಿರಿಸಲಾಗಿತ್ತು .

ವಾಹನ ಕಳವು ಸೇರಿದಂತೆ ಹಲವಾರು ಪ್ರಕರಣಗಳ ಆರೋಪಿಯಾಗಿರುವ ಈತನನ್ನು ಎಡಕ್ಕಾಡ್ ಪೊಲೀಸರು ಬಂಧಿಸಿ ಕ್ವಾರಂಟೈನ್ ನಲ್ಲಿರಿಸಿದ್ದರು .

ಈ ನಡುವೆ ಈತ ತಪ್ಪಿಸಿಕೊಂಡಿದ್ದನು . ಬಳಿಕ ಈತನನ್ನು ಚೆಮ್ನಾಡ್ ಸೇತುವೆ ಸಮೀಪದಿಂದ ಕಾಸರಗೋಡು ಪೊಲೀಸರು ಬಂಧಿಸಿ ಎಡಕ್ಕಾಡ್ ಪೊಲೀಸರಿಗೆ ಹಸ್ತಾಂತರಿಸಿದ್ದರು .

ಆರೋಪಿಯನ್ನು ಅಂಜರಕಂಡಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ನಿಗಾ ಕೇಂದ್ರದಲ್ಲಿರಿಸಲಾಗಿತ್ತು . ಈ ಕೇಂದ್ರದಿಂದಲೂ ಈತ ಪರಾರಿಯಾಗಿದ್ದನು. ಈತನಿಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾಗ ಇನ್ನೊಂದು ಕಳವು ಪ್ರಕರಣದಲ್ಲಿ ಈತ ಸೆರೆ ಸಿಕ್ಕಿದ್ದಾನೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು