News Karnataka Kannada
Tuesday, April 23 2024
Cricket
ಕರ್ನಾಟಕ

ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ 18 ಮಂದಿಗೆ ಕೋವಿಡ್ ಪಾಸಿಟಿವ್

Photo Credit :

ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ 18 ಮಂದಿಗೆ ಕೋವಿಡ್ ಪಾಸಿಟಿವ್

ಕಾಸರಗೋಡು : ಜಿಲ್ಲೆಯಲ್ಲಿ ಗುರುವಾರ 18 ಮಂದಿಗೆ ಕೋವಿಡ್ ಪಾಸಿಟಿವ್  ಡ್ರಾದಓಪಟ್ಟಿದೆ ಇವರಲ್ಲಿ 11 ಮಂದಿಗೆ ಸಂಪರ್ಕ ಮೂಲಕ ಸೋಂಕು ತಗಲಿದೆ. ನಾಲ್ಕು ಮಂದಿ ವಿದೇಶಗಳಿಂದ, ಮೂವರು ಇತರ ರಾಜ್ಯಗಳಿಂದ ಆಗಮಿಸಿದವರು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿ ದ್ದಾರೆ .

ಸಂಪರ್ಕದಿಂದ ಸೋಂಕು
ಮಂಗಲ್ಪಾಡಿ ಪಂಚಾಯತ್ ನ 30 ವರ್ಷದ ಮಹಿಳೆ, 46, 30, 36 ವರ್ಷದ ಪುರುಷರು, 14, 3 ವರ್ಷ ಮತ್ತು 40 ದಿನಗಳ ವಯೋಮಾನದ ಮಕ್ಕಳು, ಮಧೂರು ಪಂಚಾಯತ್ ನ 21 ವರ್ಷದ ಪುರುಷ, ಚೆಮ್ನಾಡ್ ಪಂಚಾಯತ್ ನ 46 ವರ್ಷದ ಮಹಿಳೆ, ಪನತ್ತಡಿ ಪಂಚಾಯತ್ ನ 65 ವರ್ಷದ ಪುರುಷ ಸಂಪರ್ಕದಿಂದ ಸೋಂಕು ಖಚಿತಗೊಂಡವರು.
ಇತರ ರಾಜ್ಯ ಗಳಿಂದ ಬಂದವರು
ಮಂಗಳೂರಿನಿಂದ ಆಗಮಿಸಿದ್ದ ಕುಂಬಳೆ ಪಂಚಾಯತ್ ನ 26,55 ವರ್ಷದ ಪುರುಷರು, ಬೆಂಗಳೂರಿನಿಂದ ಬಂದಿದ್ದ ಕಳ್ಳಾರ್ ಪಂಚಾಯತ್ ನ 27 ವರ್ಷದ ಪುರುಷ ಸೋಂಕು ತಗುಲಿದವರು.
ವಿದೇಶಗಳಿಂದ ಆಗಮಿಸಿದವರು
ಷಾರ್ಜಾದಿಂದ ಬಂದಿದ್ದ ಚೆಂಗಳ ಪಂಚಾಯತ್ ನ 30 ವರ್ಷದ ಮಹಿಳೆ, ಅಜ್ ಮಾನ್ ನಿಂದ ಆಗಮಿಸಿದ್ದ ಪಳ್ಳಿಕ್ಕರೆ ಪಂಚಾಯತ್ ನ 20 ವರ್ಷದ ಪುರುಷ, ದುಬಾಯಿಯಿಂದ ಬಂದಿದ್ದ ಅಜಾನೂರು ಪಂಚಾಯತ್ ನ 27 ವರ್ಷದ ಪುರುಷ, ಕುವೈತ್ ನಿಂದ ಆಗಮಿಸಿದ್ದ ಮಂಗಲ್ಪಾಡಿ ಪಂಚಾಯತ್ ನ 32 ವರ್ಷದ ಪುರುಷ ಕೋವಿಡ್ ಪಾಸಿಟಿವ್ ಆದವರು.      
ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ 23 ಮಂದಿಗೆ ಕೋವಿಡ್ ನೆಗೆಟಿವ್
 ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ 23 ಮಂದಿ ಕೋವಿಡ್ ನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
ಉಕ್ಕಿನಡ್ಕ ಕಾಸರಗೋಡು ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಬದಿಯಡ್ಕ ಪಂಚಾಯತ್ ನ 40 ವರ್ಷದ ಪುರುಷ, ಮಂಗಲ್ಪಾಡಿ ಪಂಚಾಯತ್ ನ 40 ವರ್ಷದ ಪುರುಷ, ಮಧೂರು ಪಂಚಾಯತ್ ನ 40 ವರ್ಷದ ಪುರುಷ, ಮೀಂಜ ಪಂಚಾಯತ್ ನ 26 ವರ್ಷದ ಪುರುಷ, ಕುಂಬಳೆ ಪಂಚಾಯತ್ ನ 34,33,24 ವರ್ಷದ ಪುರುಷರು, ಪಳ್ಳಿಕ್ಕರೆ ಪಂಚಾಯತ್ ನ 64 ವರ್ಷದ ಪುರುಷ, ಮಂಗಲ್ಪಾಡಿ ಪಂಚಾಯತ್ ಪಂಚಾಯತ್ ನ 23,43 ವರ್ಷದ ಪುರುಷರು, ಮಂಜೇಶ್ವರ ಪಂಚಾಯತ್ನ 27 ವರ್ಷದ ಪುರುಷ.
ಉದಯಗಿರಿ ಸಿ.ಎಫ್.ಎಲ್.ಟಿ.ಸಿ.ಯಲ್ಲಿ  ದಾಖಲಾಗಿದ್ದ ಪುಲ್ಲೂರು-ಪೆರಿಯ ಪಂಚಾಯತ್ ನ 27 ವರ್ಷದ ಪುರುಷ, ಮಂಜೇಶ್ವರ ಪಂಚಾಯತ್ ನ 47,21 ವರ್ಷದ ಪುರುಷರು, ವರ್ಕಾಡಿ ಪಂಚಾಯತ್ ನ 21 ವರ್ಷದ, ಪೈವಳಿಕೆ ಪಂಚಾಯತ್ ನ 26 ವರ್ಷದ ಮಹಿಳೆಯರು, ಮೊಗ್ರಾಲ್ ಪುತ್ತೂರು ಪಂಚಾಯತ್ ನ 47,34 ವರ್ಷದ ಪುರುಷರು, ಎಣ್ಮಕಜೆ ಪಂಚಾಯತ್ ನ 36 ವರ್ಷದ ಮಹಿಳೆ.
ಪಡನ್ನಕ್ಕಾಡ್ ಕೋವಿಡ್ ಚಿಕಿತ್ಸಾ ಕೇಂದ್ರದಲ್ಲಿ ದಾಖಲಾಗಿದ್ದ ಮಂಗಲ್ಪಾಡಿ ಪಂಚಾಯತ್ ನ 27 ವರ್ಷದ ಪುರುಷ, ಮಧೂರು ಪಂಚಾಯತ್ ನ 50 ವರ್ಷದ, ದೇಲಂಪಾಡಿ ಪಂಚಾಯತ್ ನ 28 ವರ್ಷದ, ಪನತ್ತಡಿ ಪಂಚಾಯತ್ ನ 30 ವರ್ಷದ ಪುರುಷರು ಸೋಂಕಿನಿಂದ ಮುಕ್ತರಾದವರು.
       
 ಜಿಲ್ಲೆಯಲ್ಲಿ ಕೋವಿಡ್ 6246 ಮಂದಿ ನಿಗಾದಲ್ಲಿದ್ದಾರೆ.
ಇವರಲ್ಲಿ ಮನೆಗಳಲ್ಲಿ 5432 ಮಂದಿ, ಸಾಂಸ್ಥಿಕವಾಗಿ 814 ಮಂದಿ ನಿಗಾದಲ್ಲಿದ್ದಾರೆ. ಗುರುವಾರ ನೂತನವಾಗಿ 391 ಮಂದಿ ನಿಗಾ ಪ್ರವೇಶಿಸಿದ್ದಾರೆ. 441 ಮಂದಿ ತಮ್ಮ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ. 523 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 1568 ಮಂದಿಯ ಫಲಿತಾಂಶ ಲಭಿಸಿಲ್ಲ. 

 

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು