News Karnataka Kannada
Tuesday, April 16 2024
Cricket
ಕರ್ನಾಟಕ

ಕಾಸರಗೋಡು ಜಿಲ್ಲೆಯಲ್ಲಿ ಕೊರೋನಾಗೆ ಎರಡನೇ ಬಲಿ

Photo Credit :

ಕಾಸರಗೋಡು ಜಿಲ್ಲೆಯಲ್ಲಿ ಕೊರೋನಾಗೆ ಎರಡನೇ ಬಲಿ

ಕಾಸರಗೋಡು: ಜಿಲ್ಲೆಯಲ್ಲಿ ಕೊರೋನಾ ಸೋಂಕಿಗೆ ಎರಡನೇ ಬಲಿಯಾಗಿದೆ  ನಗರ ಹೊರವಲಯದ ಅಣಂಗೂರು ಪಚ್ಚೆ ಕ್ಕಾಡ್  ನ  48 ವರ್ಷದ ಮಹಿಳೆ ಇಂದು ಮುಂಜಾನೆ ಮೃತಪಟ್ಟಿದ್ದು , ಕಣ್ಣೂರು ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 

ಜ್ವರದ  ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಪಾಸಣೆ ನಡೆಸಿದಾಗ ಕೊರೋನಾ  ಪಾಸಿಟಿವ್ ಪತ್ತೆಯಾಗಿತ್ತು. ಬಳಿಕ ಜುಲೈ 20ರಂದು  ಕಣ್ಣೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು.

ಇವರಿಗೆ ಸೋಂಕು ಎಲ್ಲಿಂದ ತಗಲಿತ್ತು ಎಂಬ ಬಗ್ಗೆ ಇನ್ನೂ ದೃಢಪಟ್ಟಿಲ್ಲ. ಮನೆಯವರಿಗೆ ಇದುವರೆಗೆ ಸೋಂಕು  ಪತ್ತೆಯಾಗಿಲ್ಲ. ಮಹಿಳೆಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ  ಮನೆಯವರ ಗಂಟಲ ದ್ರವವನ್ನು ತಪಾಸಣೆಗೆ ಕಳುಹಿಸಲಾಗಿದೆ.

ಜಿಲ್ಲೆಯಲ್ಲಿ ಮೂರನೇ  ಹಂತದಲ್ಲಿ ಸಂಪರ್ಕದಿಂದ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿದ್ದು, ನಿನ್ನೆ 40 ರಲ್ಲಿ 37 ಮಂದಿಗೂ ಸಂಪರ್ಕದಿಂದ ಸೋಂಕು ದೃಢಪಟ್ಟಿತ್ತು.

ಜುಲೈ 18 ರಂದು ಉಪ್ಪಳ ಹಿದಾಯತ್ ನಗರದ  ಮಹಿಳೆಯೋರ್ವರು ಕೊರೋನದಿಂದ ಮೃತಪಟ್ಟಿದ್ದರು.

ಫೆಬ್ರವರಿ  3ರಂದು ಜಿಲ್ಲೆಯಲ್ಲಿ ಮೊದಲ ಕೊರೋನ  ಪ್ರಕರಣದ ದೃಢಪಟ್ಟಿತ್ತು.  ಬಳಿಕ ಎರಡು ಹಂತಗಳಲ್ಲಿ 178 ಮಂದಿಯಲ್ಲಿ  ಸೋಂಕು ಪತ್ತೆಯಾಗಿ ಎಲ್ಲರೂ ಗುಣಮುಖರಾಗಿದ್ದರು.  ಸಂಪೂರ್ಣ ಸೋಂಕು ಮುಕ್ತವಾಗಿದ್ದ ಜಿಲ್ಲೆಯಲ್ಲಿ ಮೇ ಮೊದಲ ವಾರದಲ್ಲಿ  ಮತ್ತೆ ಸೋಂಕು  ಆರಂಭವಾಗಿತ್ತು.

ಮೂರನೇ ಹಂತದಲ್ಲಿ 794  ಮಂದಿಗೆ  ಸೋಂಕು ತಗಲಿದ್ದು, ಈ  ಪೈಕಿ 311 ಮಂದಿಗೆ ಸಂಪರ್ಕದಿಂದ ಸೋಂಕು ತಗಲಿದೆ. ಇದುವರೆಗೆ ಜಿಲ್ಲೆಯಲ್ಲಿ 972 ಮಂದಿಗೆ ಸೋಂಕು ದೃಢಪಟ್ಟಿದ್ದು, 542 ಮಂದಿ  ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. 429 ಮಂದಿ  ಚಿಕಿತ್ಸೆ  ಪಡೆಯುತ್ತಿದ್ದಾರೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು