News Karnataka Kannada
Friday, April 19 2024
Cricket
ಕರ್ನಾಟಕ

ಕಾಸರಗೋಡು ಜಿಲ್ಲೆಗೆ ಕೊರೋನಾ ಕಾಲಿಟ್ಟು ಆರು ತಿಂಗಳು ಪೂರ್ತಿ

Photo Credit :

ಕಾಸರಗೋಡು ಜಿಲ್ಲೆಗೆ ಕೊರೋನಾ ಕಾಲಿಟ್ಟು ಆರು ತಿಂಗಳು ಪೂರ್ತಿ

ಕಾಸರಗೋಡು: ಕಾಸರಗೋಡಿಗೆ  ಕೊರೋನಾ ಸೋಂಕು ಕಾಲಿಟ್ಟು, ಆ.3ಕ್ಕೆ ಆರು ತಿಂಗಳು.  ಫೆಬ್ರವರಿ ಮೂರರಂದು ಕಾಸರಗೋಡಿನಲ್ಲಿ ಮೊದಲ ದೇಶದಲ್ಲೇ ಮೂರನೇ ಕೊರೋನಾ ಪಾಸಿಟಿವ್ ಕಾಸರಗೋಡಿನಲ್ಲಿ ದೃಢಪಟ್ಟಿತ್ತು.

ಚೀನಾದ ವುಹಾನ್ ನಿಂದ ಬಂದಿದ್ದ ವಿದ್ಯಾರ್ಥಿಯಲ್ಲಿ ಸೋಂಕು ಪತ್ತೆಯಾಗಿತ್ತು. ಸೋಂಕು ಕಂಡು  ಬಂದ  ಹಿನ್ನೆಲೆಯಲ್ಲಿ  ಆರೋಗ್ಯ ಇಲಾಖೆ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿತ್ತು. ಇದು ಯಶಸ್ವಿಯಾಗಿತ್ತು.

ಫೆ.16ರಂದು ಸೋಂಕಿತ ವಿದ್ಯಾರ್ಥಿ ಗುಣಮುಖರಾಗಿ ಬಿಡುಗಡೆಗೊಂಡನು. ಆದರೆ ಮಾರ್ಚ್ 17 ರಂದು ದುಬಾಯಿಯಿಂದ ಬಂದಿದ್ದ ವ್ಯಕ್ತಿಯ ಮೂಲಕ ಇಬ್ಬರಿಗೆ ಸೋಂಕು ಮತ್ತೆ ದೃಢಪಟ್ಟಿತ್ತು. ಎರಡನೇ ಹಂತದ ಸೋಂಕು ಜಿಲ್ಲೆಯಲ್ಲಿ ಕಂಡುಬರತೊಡಗಿತು.

ಬಳಿಕದ ದಿನಗಳಲ್ಲಿ ಸೋಂಕು ಹೆಚ್ಚುತ್ತಲೇ ಸಾಗಿತು. 20ರಂದು 8, 21 ಮತ್ತು 22ರಂದು ತಲಾ ಐವರಿಗೆ ಸೋಂಕು ದೃಢಪಟ್ಟಿತ್ತು.

ಆದರೆ 23ರಂದು 19 ಮಂದಿ ಹಾಗೂ 27ರಂದು 33 ಮಂದಿಯಲ್ಲೂ ಸೋಂಕು ದೃಢಪಟ್ಟಿತ್ತು. ಆದರೆ ಲಾಕ್ ಡೌನ್ ಹಾಗೂ ಆರೋಗ್ಯ   ಇಲಾಖೆ ತೆಗೆದುಕೊಂಡ  ದಿಟ್ಟ ಕ್ರಮದಿಂದ  ಬಳಿಕದ ದಿನಗಳಲ್ಲಿ  ಸೋಂಕಿತರ ಸಂಖ್ಯೆ ಒಂದಂಕಿ ದಾಟದಂತೆ  ನಿಯಂತ್ರಿಸಲಾಗಿತ್ತು ಸೋಂಕು ಹರಡುವ ಹರಡುವ ಸೂಚನೆ ಲಭಿಸುತ್ತಿದ್ದಂತೆ ಆರೋಗ್ಯ ಇಲಾಖೆ  ಹಾಗೂ ಜಿಲ್ಲಾಡಳಿತ ಎಲ್ಲಾ ರೀತಿಯ  ಕ್ರಮಕ್ಕೂ ಮುಂದಾಗಿತ್ತು. 22ರಿಂದ ಜಿಲ್ಲೆಯಲ್ಲಿ ಲಾಕ್ ಡೌನ್ ಜಾರಿಗೆ ಮಾಡಿತ್ತು. ಗಡಿ ಮೂಲಕ ಪ್ರವೇಶವನ್ನು ಬಂದ್ ಮಾಡಿತ್ತು. ಕರ್ನಾಟಕ – ಕೇರಳ ನಡುವಿನ ಅಂತಾರಾಜ್ಯ  ಸಂಪರ್ಕದ ಎಲ್ಲಾ ರಸ್ತೆ ಗಳನ್ನು ಬಂದ್ ಮಾಡಿತ್ತು. ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಿತ್ತು. ಶಾಲಾ ಕಾಲೇಜುಗಳನ್ನು ಮುಚ್ಚಿತ್ತು.ಜಿಲ್ಲೆಯಾದ್ಯಂತ ಎಲ್ಲಾ ರೀತಿಯ ನಿಯಂತ್ರಣ ಗಳನ್ನು ಜಾರಿಗೆ ತರಲಾಯಿತು.

ಇದರ ನಡುವೆ ಕೊರೋನ ಸೋಂಕಿತ ಗಲ್ಫ್ ಉದ್ಯೋಗಿ  ಕ್ವಾರಂಟೈನ್  ಉಲ್ಲಂಘಿಸಿ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿರುವುದು ಹಾಗೂ ಹಲವೆಡೆಗೆ ತೆರಳಿರುವ ಬಗ್ಗೆ ಮಾಹಿತಿ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯನ್ನು ಹುಬ್ಬೇರಿಸಿತ್ತು. ಇದರಿಂದ ಈತನ ಸಂಪರ್ಕದಲ್ಲಿದ್ದ ಕಾಸರಗೋಡು ಮತ್ತು ಮಂಜೇಶ್ವರ ಶಾಸಕರು ಸೇರಿದಂತೆ ನೂರಾರು ಮಂದಿ ಕ್ವಾರಂಟೈನ್ ಗೆ ತೆರಳುವಂತಾಯಿತು. ಬಳಿಕ ನಡೆದ ತಪಾಸಣೆಯಿಂದ ಈತನಿಂದ 22 ಮಂದಿಗೆ ಸೋಂಕು ತಗಲಿರುವುದು ಪತ್ತೆಯಾಗಿತ್ತು.  ಸೋಂಕಿತರು ಮಾನದಂಡ ಉಲ್ಲಂಘಿಸುತ್ತಿರುವುದನ್ನು ಗಮನಿಸಿದ ಜಿಲ್ಲಾಡಳಿತ ಸಾಕಷ್ಟು ನಿಯಂತ್ರಣಗಳನ್ನು ಜಾರಿಗೆ ತಂದಿದ್ದು, ನಗರ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ನಿರ್ಬಂಧಗಳನ್ನು ಜಾರಿಗೆ  ತಂದಿತ್ತು. ಈ ಹಿನ್ನೆಲೆಯಲ್ಲಿ ಸಂಪರ್ಕದಿಂದ ಸೋಂಕು ಹರಡುವುದನ್ನು ನಿಯಂತ್ರಿಸಲು ಸಾಧ್ಯವಾಯಿತು.

ಮಾತ್ರವಲ್ಲ ಸೋಂಕಿತರಿಂಗೆ ಚಿಕಿತ್ಸೆಗೆ ಕಾಸರಗೋಡು ಜನರಲ್ ಆಸ್ಪತ್ರೆ ಹಾಗೂ ಜಿಲ್ಲಾಸ್ಪತ್ರೆಯಲ್ಲಿ ವಿಶೇಷ ವಾರ್ಡ್ ತೆರೆಯಲಾಯಿತು. ಕ್ವಾರಂಟೈನ್ ಗೂ ವ್ಯವಸ್ಥೆ ಕಲ್ಪಿಸಲಾಗಿತ್ತು. ಈ ನಡುವೆ ಜಿಲ್ಲಾಧಿಕಾರಿ ಡಾ . ಡಿ .ಸಜಿತ್ ಬಾಬು ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ಡಾ . ವಿ . ರಾಮ ದಾಸ್ ರವರ ವಿಶೇಷ ಮುತುವರ್ಜಿಯಿಂದ ಉಕ್ಕಿನಡ್ಕದಲ್ಲಿ ನಿರ್ಮಾಣ ಹಂತದಲ್ಲಿರುವ ಕಾಸರಗೋಡು ವೈದ್ಯಕೀಯ ಕಾಲೇಜು ಆಸ್ಪತ್ರೆಯ ನ್ನು  ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ದಿನಗಳ ಅಂತರದಲ್ಲಿ ಕಾಮಗಾರಿ ಪೂರ್ಣಗೊಳಿಸಿ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಕಲ್ಪಿಸಲಾಯಿತು. 300 ಹಾಸಿಗೆಗಳ ವ್ಯವಸ್ಥೆ ಮಾಡಲಾಯಿತು.

ಈ ನಡುವೆ ಕರ್ನಾಟಕಕ್ಕೆ ಸಂಪರ್ಕ ಬಂದ್ ಆದುದರಿಂದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವರು ಸೂಕ್ತ ಚಿಕಿತ್ಸೆ ಲಭಿಸದೆ ಬಲಿಯಾ ಗುವ ಸ್ಥಿತಿಗೂ ತಲಪಿತ್ತು.  ಇದು ಪ್ರತಿಭಟನೆ , ಆರೋಪ – ಪ್ರತ್ಯಾರೋಪಕ್ಕೂ ಕಾರಣವಾಯಿತು . ಕಾನೂನು ಹೋರಾಟಕ್ಕೂ  ವೇದಿಕೆಯಾಯಿತು. ಈತನ್ಮಧ್ಯೆ   ಟಾಟಾ ಗ್ರೂಫ್ ಕಾಸರಗೋಡಿನಲ್ಲಿ  ಸುಸಜ್ಜಿತವಾದ ಅತ್ಯಾಧುನಿಕ ಸೌಲಭ್ಯ ಗಳೊಂದಿಗೆ ಕೂಡಿದ ಒಂದು ಸಾವಿರ ಹಾಸಿಗೆಗಳ ಕೋವಿಡ್ ಆಸ್ಪತ್ರೆಗೆ ಮುಂಗಾಡುವ ಮೂಲಕ ಗಮನ ಸೆಳೆಯಿತು.  ಕಾಸರಗೋಡು ನಗರದಿಂದ ಎಂಟು  ಕಿ . ಮೀ ದೂರದ ಚಟ್ಟಂಚಾಲ್ ಸಮೀಪ ರಾಜ್ಯ ಸರಕಾರದ ಸಹಯೋಗದಲ್ಲಿ ಈ ಆಸ್ಪತ್ರೆ ಈಗ ಅಂತಿಮ ಹಂತದಲ್ಲಿದೆ.

ಈ ಬೆಳವಣಿಗೆ ನಡುವೆ  ಜಿಲ್ಲೆಯೂ  ಮೇ 10 ರ ವೇಳೆಗೆ ಸಂಪೂರ್ಣ ಸೋಂಕು ಮುಕ್ತವಾಯಿತು. ಅಂತಾರಾಷ್ಟ್ರೀಯ ಮಟ್ಟದಲ್ಲೇ ಕೇರಳ ಗಮನ ಸೆಳೆಯಿತು. ಎರಡು ಹಂತಗಳಲ್ಲಿ 178 ಸೋಕಿತರು ಗುಣಮುಖರಾಗಿದ್ದು, ಮಾತ್ರವಲ್ಲ ಒಬ್ಬರೂ  ಸೋಂಕಿನಿಂದ ಬಲಿಯಾಗದಿರುವುದು ಆರೋಗ್ಯ  ಇಲಾಖೆಯ ದಿಟ್ಟ ಹೋರಾಟಕ್ಕೆ ನಿದರ್ಶನ ಆಗಿತ್ತು. ಮೇ 10 ರಂದು ಜಿಲ್ಲೆ ಸಂಪೂರ್ಣ ಸೋಂಕು ಮುಕ್ತವಾದರೂ ಮೇ 11 ರಂದು ಮತ್ತೆ  ನಾಲ್ವರಿಗೆ ಸೋಂಕು ದೃಢಪಟ್ಟಿತ್ತು. ವಿದೇಶದಿಂದ ಹಾಗೂ ಹೊರ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸಲು ಅನುಮತಿ ಲಭಿಸಿದ ಬಳಿಕ ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಹೆಚ್ಚಳ ಕಂಡಿತ್ತು . ಇದರ ಜೊತೆಗೆ ಸಂಪರ್ಕದಿಂದ ಸೋಂಕು ಹರಡತೊಡಗಿತು . ಮೇ 11 ರಂದು ಜುಲೈ 21 ರಂದು ಎರಡಂಕೆಗೆ  ಸೀಮಿತವಾಗಿದ್ದ ಸೋಂಕಿತರ ಸಂಖ್ಯೆ  ಜುಲೈ 22 ರಂದು ಶತಕ ಬಾರಿಸಿತು .  22 ರಂದು 101 ಕ್ಕೆ ತಲಪಿತ್ತು . 24 ರಿಂದ 27 ರ ತನಕ ಮತ್ತೆ ನೂರರ ಗಡಿಯನ್ನು ದಾಟಿತ್ತು . 27 ರಿಂದ 31 ರ ತನಕ ಎರಡಂಕೆಗೆ ಸೀಮಿತವಾಗಿದ್ದರೂ ಆಗಸ್ಟ್ ಒಂದರಂದು 153 ಕ್ಕೇರಿ ತು . ತು. ಆಗಸ್ಟ್  2 ರಂದು ಸೋಂಕಿತರ ಸಂಖ್ಯೆ 113 ಆಗಿದ್ದು,     ಎರಡು ದಿನಗಳಲ್ಲಿ  266   ಸೋಂಕು  ದೃಢಪಟ್ಟಿದೆ.

ಕಳೆದ ಒಂದು ವರದ ಅವಧಿಯಲ್ಲಿ ಸೋಂಕಿತರ ಸಂಖ್ಯೆ 600 ದಾಟಿದೆ. ಮೊದಲ ಹಾಗೂ ಎರಡನೇ ಹಂತದಲ್ಲಿ 178 ಕ್ಕೆ ಸೀಮಿತವಾಗಿದ್ದ ಸೋಂಕಿತರ ಸಂಖ್ಯೆ  ಮೂರನೇ ಹಂತದಲ್ಲಿ 1731 ಮಂದಿಗೆ ಸೋಂಕು ತಗಲಿದೆ. ಈ ಪೈಕಿ 961 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ ಸೋಂಕು ತಗಲಿದೆ. ಉಳಿದವರು ಹೊರ ರಾಜ್ಯ ಹಾಗೂ ವಿದೇಶದಿಂದ  ಬಂದವರು. ಆರಂಭದಲ್ಲಿ ಸೋಂಕು ಹರಡುವಿಕೆಯನ್ನು ಕಟ್ಟಿ  ಹಾಕಿದ ಜಿಲ್ಲೆಯೂ ಮೂರನೇ ಹಂತದಲ್ಲಿ ಸವಾಲಾಗಿ ಪರಿಣಮಿಸಿದೆ.  ಗಡಿಯ ಮಂಜೇಶ್ವರ , ,ಮಂಗಲ್ಪಾಡಿ  ಮೀಂಜ, ವರ್ಕಾಡಿ , ಕುಂಬಳೆ ಸೇರಿದಂತೆ ಗ್ರಾಮ ಪಂಚಾಯತ್  ವ್ಯಾಪ್ತಿಯಲ್ಲಿ  ಮೂರನೇ  ಹಂತದಲ್ಲಿ ಸಂಪರ್ಕ ದಿಂದ ಸೋಂಕು ಹರಡುತ್ತಿದೆ . ಜನರು ಆರೋಗ್ಯ ಇಲಾಖೆಯ ಮಾನದಂಡ  ಪಾಲಿಸದಿದ್ದಲ್ಲಿ  ಮುಂದಿನ  ದಿನಗಳಲ್ಲಿ ಸವಾಲಾಗಲಿದೆ .

ಜಿಲ್ಲೆಯಲ್ಲಿ  ಐದು ತಿಂಗಳಲ್ಲಿ 500 ಮಂದಿಗೆ ಸೋಂಕು ದೃಢಪಟ್ಟರೆ  ಕಳೆದ ಒಂದು ತಿಂಗಳ ಅವಧಿಯಲ್ಲಿ ಒಂದು ಸಾವಿರದಷ್ಟು ಮಂದಿಗೆ ಸೋಂಕು ಪತ್ತೆಯಾಗಿದೆ. ಇದರಿಂದ ಅತೀ ವೇಗದಲ್ಲಿ ಜಿಲ್ಲೆಯಲ್ಲಿ ಸೋಂಕು ಹರಡುತ್ತಿದೆ ಯೇ ಎಂಬ ಆತಂಕ ತಲೆದೋರಿದೆ.

ಇದುವರೆಗೆ ಜಿಲ್ಲೆಯಲ್ಲಿ 1,797 ಮಂದಿಗೆ ಸೋಂಕು ತಗಲಿದ್ದು, ಈ ಪೈಕಿ 752 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 1039 ಮಂದಿ ಗುಣಮುಖರಾಗಿದ್ದಾರೆ. ಮೂರನೇ ಹಂತದಲ್ಲಿ  ಮಾತ್ರ 1618  ಮಂದಿಗೆ ಸೋಂಕು ದೃಢಪಟ್ಟಿದೆ.

ಈ ವರೆಗೆ ಜಿಲ್ಲೆಯಲ್ಲಿ ಆರು ಬಲಿ

ಜಿಲ್ಲೆಯಲ್ಲಿ ಕೊರೋನಾದಿಂದ ಮೊದಲ ಬಳಿ ತೆಗೆದುಕೊಂಡದ್ದು, ಜುಲೈ 17ರಂದು. ಉಪ್ಪಳದ ಮಹಿಳೆಯೋರ್ವರು ಮೃತಪಟ್ಟಿದ್ದರು. ಸಂಪರ್ಕದಿಂದ ಸೋಂಕು ತಗಳಿತ್ತು. ಬಳಿಕದ ದಿನಗಳಲ್ಲಿ6 ಮಂದಿ ಮೃತಪಟ್ಟಿದ್ದು, ಪ್ರಾಥಮಿಕ ಸಂಪರ್ಕದಿಂದ ಸೋಂಕು ಹರಡುತ್ತಿರುವುದು ಬಲಿಯಾಗುತ್ತಿರುವವರ  ಸಂಖ್ಯೆ ಹೆಚ್ಚುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು